ಡಿಕೆಶಿ ನಾಮಪತ್ರದಲ್ಲಿ ಲೋಪ ಹುಡುಕಿ ಅಮಾನ್ಯಕ್ಕೆ ಷಡ್ಯಂತ್ರ ಶಂಕೆ, ಸಿಬಿಐ ಕೇಸಲ್ಲಿ ಸಿಲುಕಿಸಿ ಬಂಧಿಸುವ ಹುನ್ನಾರದ ಭೀತಿಯಿಂದ ತಂತ್ರ. 

ಬೆಂಗಳೂರು(ಏ.21): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸ್ವಕ್ಷೇತ್ರ ಕನಕಪುರಕ್ಕೆ ಗುರುವಾರ ಹಠಾತ್‌ ಆಗಿ ಅವರ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಸುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದರು. ಕನಕಪುರ ಕ್ಷೇತಕ್ಕೆ ಈಗಾಗಲೇ ಡಿ.ಕೆ. ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ಟಿಕೆಟ್‌ ಹಂಚಿಕೆ ಮಾಡಿದ್ದು, ನಾಮಪತ್ರವನ್ನು ಅವರು ಈಗಾಗಲೇ ಸಲ್ಲಿಸಿದ್ದಾರೆ. ಆದಾಗ್ಯೂ ಡಿ.ಕೆ. ಸುರೇಶ್‌ ಅವರು ನಾಮಪತ್ರ ಸಲ್ಲಿಸಿರುವುದು ಹಲವು ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಡಿ.ಕೆ. ಶಿವಕುಮಾರ್‌ ಅವರ ನಾಮಪತ್ರದಲ್ಲಿ ಲೋಪ ಹುಡುಕಿ ಅವರನ್ನು ಅಮಾನ್ಯಗೊಳಿಸುವ ಷಡ್ಯಂತ್ರವಿದೆ ಎಂಬ ಆತಂಕ ಡಿ.ಕೆ. ಸಹೋದರರಿಗೆ ಉಂಟಾಗಿದೆ ಎನ್ನುವುದು ಒಂದು ವ್ಯಾಖ್ಯಾನವಾದರೆ, ಶಿವಕುಮಾರ್‌ ಅವರ ವಿರುದ್ಧದ ಸಿಬಿಐ ಪ್ರಕರಣಗಳಲ್ಲಿ ಅವರನ್ನು ಮತ್ತೆ ಸಿಲುಕಿಸಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಲಭ್ಯರಾಗದಂತೆ ಬಂಧಿಸುವ ಹುನ್ನಾರ ನಡೆದಿದೆ ಎಂಬ ಭೀತಿ ಸಹೋದರರಿಗೆ ಕಾಡಿದೆ. ಹೀಗಾಗಿ ರಿಸ್‌್ಕ ಬೇಡ ಎಂಬ ಕಾರಣಕ್ಕೆ ಸುರೇಶ್‌ ಅವರಿಂದಲೂ ನಾಮಪತ್ರ ಸಲ್ಲಿಕೆ ಮಾಡಿಸಲಾಗಿದೆ ಎಂಬುದು ಮತ್ತೊಂದು ವಿವರಣೆ.

ಎಪ್ರಿಲ್ 28 ರಿಂದ ಕರ್ನಾಟಕದಲ್ಲಿ ಮೋದಿ ಪ್ರಚಾರ ಆರಂಭ, ಯೋಗಿ ಆದಿತ್ಯನಾಥ್ ಸಾಥ್!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ಐದು ನೂರು ಮಂದಿ ಬಿಜೆಪಿಯವರು ನನ್ನ ಆಸ್ತಿ ಘೋಷಣೆ ಪ್ರಮಾಣಪತ್ರ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಏನೇನು ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿರುವುದರಿಂದ ಡಿ.ಕೆ. ಸುರೇಶ್‌ ಅವರಿಂದ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಿಸಿದ್ದೇವೆ. ನಮಗೆ ನಮ್ಮದೇ ಆದ ತಂತ್ರಗಾರಿಕೆ ಇದೆ ಎಂದು ಹೇಳಿದರು.

ಬಿಜೆಪಿಯವರು ನನ್ನ ಆಸ್ತಿ ಪ್ರಮಾಣಪತ್ರ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಅವರು ಏನೇನು ಮಾಡುತ್ತಿದ್ದಾರೆ ಎಂಬುದೆಲ್ಲವೂ ನನ್ನ ಗಮನಕ್ಕೆ ಬಂದಿದೆ. ಅವರು ಮಾಡುವ ತಂತ್ರಕ್ಕೆ ನಾವು ಪ್ರತಿ ತಂತ್ರ ಮಾಡುತ್ತಿದ್ದೇವೆ. ಡಿ.ಕೆ. ಸುರೇಶ್‌ ಯಾಕೆ ನಾಮಪತ್ರ ಸಲ್ಲಿಸಿದ್ದಾರೆ ಎಂಬುದು ನಿಮಗೆ ಶನಿವಾರ ತಿಳಿದುಬರಲಿದೆ ಎಂದು ಹೇಳಿದ್ದಾರೆ.

ಅಲ್ಲದೆ, ‘ಯಾಕೆ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಸಬಾರದೇ? ಕೆ.ಜೆ. ಜಾಜ್‌ರ್‍ ಪುತ್ರ ರಾಣಾ ಜಾಜ್‌ರ್‍ ಕೂಡ ಸರ್ವಜ್ಞನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರಿಗೂ ನಾಮಪತ್ರ ಸಲ್ಲಿಸಲು ನಾನೇ ಹೇಳಿದ್ದೆ’ ಎಂದು ಹೇಳಿದರು.

ಗದಗ ಜಿಲ್ಲೆಯ ಎರಡು ಮತ ಕ್ಷೇತ್ರಕ್ಕೆ ಬಿಜೆಪಿಯ 6 ಅಭ್ಯರ್ಥಿಗಳಿಂದ ನಾಮಿನೇಷನ್..!

500 ಬಿಜೆಪಿಗರು ನನ್ನ ಆಸ್ತಿ ವಿವರ ಡೌನ್‌ಲೋಡ್‌ ಮಾಡಿದ್ದಾರೆ

ಐದು ನೂರು ಮಂದಿ ಬಿಜೆಪಿಯವರು ನನ್ನ ಆಸ್ತಿ ಘೋಷಣೆ ಪ್ರಮಾಣಪತ್ರ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಏನೇನು ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿರುವುದರಿಂದ ಡಿ.ಕೆ. ಸುರೇಶ್‌ ಅವರಿಂದ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಿಸಿದ್ದೇವೆ. ನಮಗೆ ನಮ್ಮದೇ ಆದ ತಂತ್ರಗಾರಿಕೆ ಇದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.