ಗದಗ ಜಿಲ್ಲೆಯ ಎರಡು ಮತ ಕ್ಷೇತ್ರಕ್ಕೆ ಬಿಜೆಪಿಯ 6 ಅಭ್ಯರ್ಥಿಗಳಿಂದ ನಾಮಿನೇಷನ್..!
ಹಿಟ್ ವಿಕೆಟ್ ಆದ್ರೆ ನಾನೂ ಬ್ಯಾಟ್ ಬೀಸೋದಕ್ಕೆ ರೆಡಿ ಅನ್ನೋ ರೀತಿಯಲ್ಲಿ ಅಭ್ಯರ್ಥಿಗಳು ರೆಡಿಯಾಗಿದ್ದಾರೆ. ಅಭ್ಯರ್ಥಿಗಳು ಆಯಾ ಪಕ್ಷದ ಬಿ ಫಾರ್ಮ್ ಲಗತ್ತಿಸಿಲ್ಲವಾದ್ರೆ, ಪಕ್ಷೇತರ ಅಭ್ಯರ್ಥಿ ಅಂತಾ ಕನ್ಸಿಡರ್ ಆಗ್ತಾರೆ. ಅರ್ಜಿಸಲ್ಲಿಸಿದವರು ಪಕ್ಷೇತರವಾಗಿ ಕಣಕ್ಕೆ ಇಳೀತಾರಾ ಇಲ್ಲ ನಾಮ ಪತ್ರ ವಾಪಾಸ್ ಪಡೀತಾರಾ ಸದ್ಯಕ್ಕಿರುವ ಕುತೂಹಲ.
ಗದಗ(ಏ.20): ನಾಮಪತ್ರ ಸಲ್ಲಿಸೋದಕ್ಕೆ ಇಂದೇ ಕೊನೆ ದಿನ ಇರೋದ್ರಿಂದ ಗದಗ ಜಿಲ್ಲೆಯ 49 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ರು.. ಬಿ ಫಾರ್ಮ್ ಪಡೆದ ಪಕ್ಷದ ಅಧಿಕೃತ ಅಭ್ಯರ್ಥಿಗಳ ಜೊತೆಗೆ ಪಕ್ಷದ ಹೆಸರಲ್ಲಿ ಕೆಲ ನಾಯಕರೂ ನಾಮಿನೇಷನ್ ಮಾಡಿದ್ದು ವಿಶೇಷ.
ಗದಗ ಜಿಲ್ಲೆಯಾದ್ಯಂತ ಇಂದು 44 ಅಭ್ಯರ್ಥಿಗಳಿಂದ 49 ನಾಪತ್ರಗಳು ಸಲ್ಲಿಕೆಯಾಗಿವೆ.. ಏಪ್ರಿಲ್ 13 ರಿಂದ ಏಪ್ರಿಲ್ 20 ರ ವರೆಗೆ ಜಿಲ್ಲೆಯಲ್ಲಿ ಒಟ್ಟು 122 ನಾಮಪತ್ರಗಳು ಸಲ್ಲಿಕೆಯಾಗಿವೆ ಅಂತಾ ಜಿಲ್ಲಾಡಳಿತ ಮಾಹಿತಿ ಜೀಡಿದೆ..
ಇಂಟ್ರೆಸ್ಟಿಂಗ್ ಅಂದ್ರೆ, ಗದಗ ಮತ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಅನಿಲ್ ಮೆಣಸಿನಕಾಯಿ 19 ನೇ ತಾರೀಕು ನಾಮ ಪತ್ರಸಲ್ಲಿಸಿದ್ದು, ನಾಗೇಶ್ ಹುಬ್ಬಳ್ಳಿ ಅವರೂ ಇಂದು ಬಿಜೆಪಿ ಅಭ್ಯರ್ಥಿಯಾಗೇ ನಾಮ ಪತ್ರ ಸಲ್ಲಿಸಿದ್ದಾರೆ.
'ಹಡದ್ ತಾಯಿಗೆ ದ್ರೋಹ ಮಾಡೂದು ಹ್ಯಾಂಗ್ ಅಂದ್ರ ಅದಕ್ ಈ ಶೆಟ್ರ ಉದಾಹರಣೆ' -ಬಸನಗೌಡ ಪಾಟೀಲ ಯತ್ನಾಳ
ತೀವ್ರ ಕುತೂಹಲ ಕೆರಳಿಸಿದ್ದ ಶಿರಹಟ್ಟಿ ಮೀಸಲು ಕ್ಷೇತ್ರ ಅಧಿಕೃತ ಅಭ್ಯರ್ಥಿಯಾಗಿ ಚಂದ್ರು ಲಮಾಣಿ ನಾಮ ಪತ್ರ ಸಲ್ಲಿಸಿದ್ದಾರೆ.. ತಾಲೂಕು ವೈದ್ಯಾಧಿಕಾರಿಯಾಗಿದ್ದ ಚಂದ್ರು ಲಮಾಣಿ ರಾಜೀನಾಮೆ ಅಂಗೀಕಾರವಾಗಿರಲಿಲ್ಲ.. ನಿನ್ನೆ ಆರೋಗ್ಯ ಇಲಾಖೆಯಿಂದ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆ ಇಂದು ನಾಮ ಪತ್ರ ಸಲ್ಲಿಕೆಯಾಗಿದೆ.. ಶಾಸಕ ರಾಮಪ್ಪ ಲಮಾಣಿ, ಭೀಮ ಸಿಂಗ್ ರಾಠೋಡ, ಗುರುನಾಥ್ ದಾನಪ್ಪನವರ್ ಅವರೂ ಬಿಜೆಪಿ ಅಭ್ಯರ್ಥಿ ಅಂತಾನೇ ನಾಮಿನೇಷನ್ ಮಾಡಿದಾರೆ.
ದೂರಾಲೋಚನೆ ಇಟ್ಟುಕೊಂಡು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ..!
ಅಧಿಕೃತ ಅಭ್ಯರ್ಥಿ ನಾಮ ಪತ್ರ ಸಲ್ಲಿಸಿರುವಾಗ್ಲೆ ಬಿಜೆಪಿಯಿಂದ ಎಕ್ಟ್ರಾ ಪ್ಲೇಯರ್ ಗಳಂತೆ ಒಬ್ಬಿಬ್ಬರಿಂದ ಗದಗ, ಶಿರಹಟ್ಟಿ ಮತ ಕ್ಷೇತ್ರದಿಂದ ನಾಮಿನೇಷನ್ ಮಾಡ್ಲಾಗಿದೆ.. ಗದಗ ಮತ ಕ್ಷೇತ್ರದಲ್ಲಿ ಓಡಾಡ್ಕೊಂಡಿದ್ದ ನಾಗೇಶ್ ಹುಬ್ಬಳ್ಳಿ ಪ್ರಬಲ ಆಕಾಂಕ್ಷಿಯಾಗಿದ್ರೂ ಟಿಕೆಟ್ ಗಿಟ್ಟಿಸಿಕೊಳ್ಳಲು ಆಗಿರಲಿಲ್ಲ.. ಆದ್ರೆ, ಚುನಾವಣೆ ಸಂದರ್ಭದಲ್ಲಿ ಏನಾದ್ರೂ ವ್ಯಾತ್ಯಾಸವಾದ್ರೆ ಯಾವ್ದಕ್ಕೂ ಇರ್ಲಿ ಅಂತಿ ನಾಮಿನೇಷನ್ ಫೈಲ್ ಮಾಡಿದಿನಿ ಅಂತಾರೆ ನಾಗೇಶ್ ಹುಬ್ಬಳ್ಳಿ.. ಇತ್ತ ಶಿರಹಟ್ಟಿ ಮೀಸಲು ಕ್ಷೇತ್ರದ ಡಾ. ಚಂದ್ರು ಲಮಾಣಿ ಪಾರ್ಟಿ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿ ನಾಮ ಪತ್ರ ಸಲ್ಲಿಸಿದ್ದಾರೆ.. ಡಾ. ಚಂದ್ರು ಲಮಾಣಿ ಅವರ ರಾಜೀನಾಮೆ ನಿನ್ನೆಯಷ್ಟೆ ಅಂಗೀಕಾರವಾಗಿದೆ.. ಡಾ. ಚಂದ್ರು ಅವರ ವಿರುದ್ಧ ಲೋಕಾಯುಕ್ತ ಕೇಸ್ ಇತ್ತು.. ರಾಜೀನಾಮೆ ಅಂಗೀಕಾರವಾಗಿದೆಯಷ್ಟೆ.. ಯಾವುದೇ ಸಮಯದಲ್ಲಿ ಬಿಫಾರ್ಮ್ ಕ್ಯಾನ್ಸಲ್ ಆಗ್ಬಹುದು ಅಂತಾ ಕ್ಷೇತ್ರದಲ್ಲಿ ಜನ ಮಾತ್ನಾಡ್ತಿದಾರೆ.. ನಾಮಪತ್ರ ಪರಶೀಲನೆ ವೇಳೆ ಯಾರು ಅಧಿಕೃತ ಅಭ್ಯರ್ಥಿಆಗ್ತಾರೆ ನೀವೇ ನೋಡಿ ಅಂತಾ ಭೀಮ ಸಿಂಗ್ ರಾಠೋಡ್ ಹೇಳಿಕೆ ನೀಡಿದ್ದಾರೆ..
Karnataka election 2023: ಶಿರಹಟ್ಟಿಕ್ಷೇತ್ರಕ್ಕೆ ಸುಜಾತಾ ದೊಡ್ಡಮನಿಗೆ ಕಾಂಗ್ರೆಸ್ ಮಣೆ
ಹಿಟ್ ವಿಕೆಟ್ ಆದ್ರೆ ನಾನೂ ಬ್ಯಾಟ್ ಬೀಸೋದಕ್ಕೆ ರೆಡಿ ಅನ್ನೋ ರೀತಿಯಲ್ಲಿ ಅಭ್ಯರ್ಥಿಗಳು ರೆಡಿಯಾಗಿದ್ದಾರೆ. ಅಭ್ಯರ್ಥಿಗಳು ಆಯಾ ಪಕ್ಷದ ಬಿ ಫಾರ್ಮ್ ಲಗತ್ತಿಸಿಲ್ಲವಾದ್ರೆ, ಪಕ್ಷೇತರ ಅಭ್ಯರ್ಥಿ ಅಂತಾ ಕನ್ಸಿಡರ್ ಆಗ್ತಾರೆ. ಅರ್ಜಿಸಲ್ಲಿಸಿದವರು ಪಕ್ಷೇತರವಾಗಿ ಕಣಕ್ಕೆ ಇಳೀತಾರಾ ಇಲ್ಲ ನಾಮ ಪತ್ರ ವಾಪಾಸ್ ಪಡೀತಾರಾ ಸದ್ಯಕ್ಕಿರುವ ಕುತೂಹಲ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.