ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಂಬತ್ತು ಮಂದಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ನಂತರವೇ ಎರಡನೇ ಹಂತದ ವಿಸ್ತರಣೆ ನಡೇYಳೀಡೇ.

ಬೆಂಗಳೂರು (ಮೇ.31) : ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎರಡನೇ ಹಂತದ ವಿಸ್ತರಣೆ ನಡೆಯುವುದು ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ನಂತರವೇ ಎಂದು ಕಾಂಗ್ರೆಸ್‌(Congress)ನ ಉನ್ನತ ಮೂಲಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಮೊದಲ ಹಂತದ ಸಂಪುಟ ರಚನೆ

ಬುಧವಾರ ಮೊದಲ ಹಂತದ ಸಂಪುಟ ರಚನೆ ನಡೆಯಲಿದೆ. ಈ ವೇಳೆ ಸಿಎಂ ಸೇರಿ 9 ಮಂದಿ ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡುವಂತೆ ಮಾಡುವ ಬಗ್ಗೆ ಹೈಕಮಾಂಡ್(Congress high command) ಚಿಂತನೆ ಹೊಂದಿದೆ. ಇದಾದ ನಂತರ ಉಳಿದ ಸ್ಥಾನಗಳ ಭರ್ತಿ ಪ್ರಕ್ರಿಯೆ ನಡೆಯುವುದೇನಿದ್ದರೂ ರಾಜ್ಯಸಭಾ ಹಾಗೂ ವಿಧಾನ ಪರಿಷತ್‌ ಚುನಾವಣೆ (ಜೂ.18)ನಂತರವೇ ಎಂದು ಖಚಿತ ಮಾಹಿತಿಯಿದೆ.

ಎರಡನೇ ಹಂತದ ಸಂಪುಟ ವಿಸ್ತರಣೆ ವಿಳಂಬ

ಹೀಗೆ ಎರಡನೇ ಹಂತದ ಸಂಪುಟ ವಿಸ್ತರಣೆ ವಿಳಂಬವಾಗಲಿರುವ ಕಾರಣ ಬುಧವಾರದ ಮೊದಲ ಹಂತದಲ್ಲೇ ತಮ್ಮ ಹೆಸರು ಸೇರ್ಪಡೆಯಾಗುವಂತೆ ಮಾಡಲು ಹಿರಿಯ ಸಚಿವರೇ ಪ್ರಬಲ ಲಾಬಿ ಆರಂಭಿಸಿದ್ದಾರೆ. ಹೀಗಾಗಿ ಮೊದಲ ಹಂತದಲ್ಲಿ ಸಿಎಂ ಹೊರತುಪಡಿಸಿ 8 ಮಂದಿಯನ್ನು ಸೇರಿಸಿಕೊಳ್ಳಬೇಕು ಎಂಬ ಹೈಕಮಾಂಡ್ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.