Dalit CM: ಬಿಜೆಪಿಯವರು ಏಕೆ ;ದಲಿತ ಸಿಎಂ' ಘೋಷಣೆ ಮಾಡಬಾರದು? ಡಾ.ಜಿ.ಪರಮೇಶ್ವರ್ ಸವಾಲು

ದಲಿತ ಸಿಎಂ ಮಾಡುವಂತೆ ಬಿಜೆಪಿಯವರು ಬರೀ ಕಾಂಗ್ರೆಸ್‌ ಪಕ್ಷಕ್ಕೆ ಸವಾಲು ಹಾಕುವುದಲ್ಲ. ಬಿಜೆಪಿಯವರು ಏಕೆ ದಲಿತ ಸಿಎಂ ಘೋಷಣೆ ಮಾಡಬಾರದು? ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸವಾಲು ಹಾಕಿದರು.

Why BJP should not declare 'Dalit CM'? Dr G Parameshwar challenge rav

ಬಳ್ಳಾರಿ (ಜ.6) : ದಲಿತ ಸಿಎಂ ಮಾಡುವಂತೆ ಬಿಜೆಪಿಯವರು ಬರೀ ಕಾಂಗ್ರೆಸ್‌ ಪಕ್ಷಕ್ಕೆ ಸವಾಲು ಹಾಕುವುದಲ್ಲ. ಬಿಜೆಪಿಯವರು ಏಕೆ ದಲಿತ ಸಿಎಂ ಘೋಷಣೆ ಮಾಡಬಾರದು? ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸವಾಲು ಹಾಕಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿಯವರು ಏಕೆ ದಲಿತ ಮುಖ್ಯಮಂತ್ರಿ ಘೋಷಣೆ ಮಾಡಬಾರದು? ನೀವೂ ಘೋಷಣೆ ಮಾಡಿ ನೋಡೋಣ ಎಂದು ಬಿಜೆಪಿಯವರಿಗೆ ಸವಾಲು ಹಾಕಿದರು.

ರಾಜ್ಯ ವಿಧಾನಸಭೆಗೆ ಇದೇ ಏಪ್ರಿಲ್‌ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ(Assembly election) ನಡೆಯಲಿದೆ. ಸದಾ ಕಾಂಗ್ರೆಸ್‌(Congress) ಬೆಂಬಲಿಸುತ್ತಿದ್ದ ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು(SC ST communities) ಒಗ್ಗೂಡಿಸಬೇಕು. ಕಾಂಗ್ರೆಸ್‌ಗೆ ಮತ ನೀಡಿ, ಬೆಂಬಲಿಸಬೇಕು ಎಂಬ ಉದ್ದೇಶದಿಂದ ಜ.8 ರಂದು ಭಾನುವಾರ ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ಪಕ್ಷದಿಂದ ರಾಜ್ಯಮಟ್ಟದ ಎಸ್ಸಿ,ಎಸ್ಟಿಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಪರಿಶಿಷ್ಟಜಾತಿಗೆ ಒಳಮೀಸಲಾತಿ ಸೇರಿದಂತೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿಸಮುದಾಯಗಳಿಗೆ ಏನೇನು ಯೋಜನೆ ಜಾರಿಗೆ ತರಲಿದ್ದೇವೆ ಎಂಬುದನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಅದೃಷ್ಟ ಇದ್ದರೆ ಪರಮೇಶ್ವರ್ ಮುಂದಿನ ಸಿಎಂ ಆಗಬಹುದು: ಶಾಮನೂರು ಶಿವಶಂಕರಪ್ಪ

ಎಸ್ಸಿ, ಎಸ್ಟಿಮೀಸಲು ಪ್ರಮಾಣ ಹೆಚ್ಚಿಸಿ ಬಿಜೆಪಿ ಸರ್ಕಾರ(BJP govt )ವು ಕಳೆದ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ಪಡೆಯಿತು. ಆದರೆ, ಕೇಂದ್ರದ ಸಚಿವರು ಮೀಸಲಾತಿ ಪ್ರಮಾಣ ಹೆಚ್ಚಿಸಲು ಬರಲ್ಲ ಎಂದು ಸದನದಲ್ಲೇ ಹೇಳಿದ್ದಾರೆ. ಸಂವಿಧಾನ ಬದಲಿಸಬೇಕು, ತೆಗೆಯಬೇಕು ಎನ್ನುವ ಬಿಜೆಪಿಯವರ ಮಾತುಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಸಂವಿಧಾನ ಬದಲಾಯಿಸುವ ಕೆಲಸ ಆಗಬಾರದು. ಆದರೆ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುವುದಲ್ಲದೇ, ಡಾ.ಬಿ.ಆರ್‌.ಅಂಬೇಡ್ಕರ್‌ ದಲಿತರಿಗೆ,ಶೋಷಿತರಿಗೆ ನೀಡಿರುವ ಧ್ವನಿ ಅಡಗಲಿದೆ. ಹಾಗಾಗಿ ಬಿಜೆಪಿಯವರ ಈ ಎಲ್ಲ ವಿಷಯಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಶಾಸಕರಾದ ಪಿ.ಟಿ. ಪರಮೇಶ್ವರ್‌ ನಾಯ್‌್ಕ, ಈ. ತುಕಾರಾಂ, ಬಿ.ನಾಗೇಂದ್ರ, ಜೆ.ಎನ್‌.ಗಣೇಶ್‌, ಮೇಯರ್‌ ರಾಜೇಶ್ವರಿ ಸುಬ್ಬರಾಯುಡು, ಜಿಲ್ಲಾಧ್ಯಕ್ಷ ಜಿ.ಎಸ್‌. ಮಹಮ್ಮದ್‌ ರಫೀಕ್‌, ಹಿರಿಯ ಮುಖಂಡರಾದ ಮುಂಡ್ರಿಗಿ ನಾಗರಾಜ್‌, ಎ.ಮಾನಯ್ಯ ಸೇರಿದಂತೆ ಹಲವರು ಇದ್ದರು.

ಮುಖ್ಯಮಂತ್ರಿ ಸ್ಥಾನ ತಪ್ಪಿದ ಬಳಿಕ ಪಕ್ಷದಲ್ಲಿ ನಾನು ನೇಪಥ್ಯಕ್ಕೆ ಸರಿದಿಲ್ಲ. ಅಂದು-ಇಂದು ನಾನು ಪವರ್‌ಫುಲ್‌ ಆಗಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ಸಿಎಲ್‌ಪಿ ನಾಯಕರಾಗಿದ್ದಾರೆ. ಹೀಗಾಗಿ ಸ್ವಾಭಾವಿಕವಾಗಿ ಅವರು ಮುಂಚೂಣಿಯಲ್ಲಿರುತ್ತಾರೆ. ಸ್ವಲ್ಪ ನಾನು ಹಿಂದಿದ್ದೇನೆ ಅನ್ನಿಸಿರಬಹುದು. ಆದರೆ, ನಾನು ಅಂದು-ಇಂದು ಪವರ್‌ಫುಲ್‌ ಆಗಿದ್ದೇನೆ ಎಂದು ತಿಳಿಸಿದರು.

ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಬಹುಮತ ಬಂದಲ್ಲಿ ಸಿಎಲ್‌ಪಿ ಸಭೆ ಕರೆದು, ದೆಹಲಿಯಿಂದ ಬರುವ ವರಿಷ್ಠರು ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಹೆಚ್ಚಿನ ಶಾಸಕರು ಯಾರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅಂತಹವರನ್ನು ಹೈಕಮಾಂಡ್‌ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಲಿದೆ ಎಂದು ಡಾ. ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಚಿತ್ರದುರ್ಗ ಸಮಾವೇಶ ಪರಿಶಿಷ್ಟರ ಶಕ್ತಿ ಪ್ರದರ್ಶನಕ್ಕೆ ವೇದಿಕೆ : ಪರಮೇಶ್ವರ್

ಪಕ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದ ಡಾ.ಜಿ.ಪರಮೇಶ್ವರ್‌ ಅವರು, 2019ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ಯಾರೆಂಬುದು ಜನರಿಗೆ ಗೊತ್ತಿದೆ. 17 ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದು, ಹೋಟೇಲ್‌ನಲ್ಲಿ ತಂಗಿದ್ದು, ರಾಜೀನಾಮೆ ನೀಡಲು ಓಡೋಡಿ ಬಂದಿದ್ದು ಎಲ್ಲವೂ ಜನರಿಗೆ ಗೊತ್ತಿದೆ. ಪಕ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಆದರೆ, ಕೆಲವೊಂದು ಅಭಿಪ್ರಾಯ ಭೇದಗಳಿರಬಹುದು ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios