Asianet Suvarna News Asianet Suvarna News

Karnataka Politics| ಕಾಂಗ್ರೆಸ್‌ ಬ್ರಿಟಿಷರಿಗೆ ಹುಟ್ಟಿದ ಪಕ್ಷ, ಅದರ ಕ್ಯಾಪ್ಟನ್‌ ಯಾರು?: ಪ್ರತಾಪ್‌

*  ಕಾಂಗ್ರೆಸ್‌ ಬಿಡುಗಡೆ ಮಾಡಿದವರ ನಾವು ಬಂಧಿಸಿದ್ದೇವೆ: ಸಿಎಂ
*  ಬಿಟ್‌ಕಾಯಿನ್‌ ಕೇಸಲ್ಲಿ ಯಾರೇ ಇದ್ದರೂ ಸೂಕ್ತ ಕ್ರಮ: ಯಡಿಯೂರಪ್ಪ
*  ಬಿಟ್‌ಕಾಯಿನ್‌ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ
 

Who is The Captain of Congress Party says BJP MP Pratap Simha grg
Author
Bengaluru, First Published Nov 19, 2021, 12:21 PM IST

ಕೊಪ್ಪಳ(ನ.19):  ಬಿಜೆಪಿಯು(BJP) ಆರ್‌ಎಸ್‌ಎಸ್‌(RSS) ಸಿದ್ಧಾಂತಕ್ಕೆ ಹುಟ್ಟಿದ ಪಕ್ಷ. ಆದರೆ ಕಾಂಗ್ರೆಸ್‌ ಪಕ್ಷ ಹುಟ್ಟಿದ್ದು ಬ್ರಿಟಿಷರಿಗೆ. ಕಾಂಗ್ರೆಸ್‌ ಸಂಸ್ಥಾಪಕರು ಯಾರು? ಎಂದು ಸಂಸದ ಪ್ರತಾಪ್‌ ಸಿಂಹ(Pratap Simha) ಕೊಪ್ಪಳದಲ್ಲಿ ನಡೆದ ಜನಸ್ವರಾಜ್‌ ಯಾತ್ರೆಯಲ್ಲಿ ಪ್ರಶ್ನಿಸಿದ್ದಾರೆ.

ಮುಂದಿನ ಚುನಾವಣೆಗೂ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ನಮ್ಮ ಕ್ಯಾಪ್ಟನ್‌(Captain) ಆಗಿರಲಿದ್ದಾರೆ. ಇದನ್ನು ಅಮಿತ್‌ ಶಾ(Amit Shah) ಅವರೇ ಸ್ಪಷ್ಟಪಡಿಸಿದ್ದಾರೆ ಹೇಳಿದ್ದಾರೆ. ಆದರೆ ಕಾಂಗ್ರೆಸ್‌(Congress) ಪಕ್ಷದ ಕ್ಯಾಪ್ಟನ್‌ ಯಾರು? ಯಾರ ನೇತೃತ್ವದಲ್ಲಿ ಚುನಾವಣೆ(Election) ನಡೆಯಲಿದೆ? ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆಶಿ(DK Shivakumar) ಅವರ ಎರಡು ಟೀಮ್‌ಗಳಿವೆ. ಇನ್ನು ಇವರಿಗೆ ವೈಸ್‌ ಕ್ಯಾಪ್ಟನ್‌ ಯಾರಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೆಸ್ಸೆಸ್‌ ಅನ್ನು ತಾಲಿಬಾನ್‌ಗೆ(Taliban) ಹೋಲಿಸುತ್ತಾರೆ. ಆದರೆ ಅವರ ಪಕ್ಷ ಅಧಿಕಾರಕ್ಕೆ ಬಂದರೆ ತಾಲಿಬಾನ್‌ ಆಡಳಿತ ಇರುತ್ತದೆ ಎಂದು ಹೇಳಿದರು.

ಬಿಟ್‌ಕಾಯಿನ್‌ ಕೇಸಲ್ಲಿ ಯಾರೇ ಇದ್ದರೂ ಸೂಕ್ತ ಕ್ರಮ: ಯಡಿಯೂರಪ್ಪ

ಹುಬ್ಬಳ್ಳಿ: ಬಿಟ್‌ ಕಾಯಿನ್‌(Bitcoin) ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಖಂಡಿತಾ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಹೇಳಿದರು.

Jan Swaraj Yatra| 'ಪ್ರಿಯಾಂಕಾ ಎಂದರೆ ಹೆಣ್ಣಾ ಗಂಡಾ?: ಪ್ರತಾಪ್‌ ಸಿಂಹ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾರ ಬಳಿ ದಾಖಲೆ ಇದ್ದರೂ ಕೊಡಲಿ. ಯಾವುದೇ ಪಕ್ಷದವರೂ ದಾಖಲೆ ನೀಡಿದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಇರುವುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್‌ ಒಳಗೆ ಜಗಳ ಆರಂಭವಾಗಿದೆ. ಇದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ, ಈ ಕುರಿತು ಹೆಚ್ಚಿಗೆ ಏನು ಹೇಳಬೇಕಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಬಿಡುಗಡೆ ಮಾಡಿದವರ ನಾವು ಬಂಧಿಸಿದ್ದೇವೆ: ಸಿಎಂ

ಕೊಪ್ಪಳ: ಬಿಟ್‌ಕಾಯಿನ್‌ ಹಗರಣದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಕೆಸರೆರಚುವವರು ಎಚ್ಚರಿಕೆಯಿಂದಿರಬೇಕು. ಅವರ (ಎರಚುವವರ) ಕೈಗೂ ಕೆಸರು ಹತ್ತುತ್ತದೆ ಎಂಬ ಅರಿವಿರಲಿ ಎಂದಿದ್ದಾರೆ. ಜತೆಗೆ, ರಾಜ್ಯದಲ್ಲಿ(Karnataka) ಕಾಂಗ್ರೆಸ್‌ ವಿನಾಕಾರಣ ಗೊಂದಲ ಉಂಟು ಮಾಡಿ ನಮ್ಮ ಲಕ್ಷ್ಯ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅದು ಫಲಿಸುವುದಿಲ್ಲ ಎಂದು ಹೇಳಿದ್ದಾರೆ.

ಜನ ಸ್ವರಾಜ್‌(JanSwaraj) ಯಾತ್ರೆಗೆ ಕೊಪ್ಪಳದ(Koppal) ಪಬ್ಲಿಕ್‌ ಗ್ರೌಂಡ್‌ನಲ್ಲಿ ಕಹಳೆ ಮೊಳಗಿಸಿ ಚಾಲನೆ ನೀಡಿ ಮಾತನಾಡಿ, ಬಿಟ್‌ಕಾಯಿನ್‌ ಪ್ರಕರಣದಲ್ಲಿ ನೀವು ಬಿಡುಗಡೆ ಮಾಡಿದವರನ್ನು ನಾವು ಹಿಡಿದಿದ್ದೇವೆ. ಆದರೆ, ಆರೋಪಿಯನ್ನು ಹಿಡಿದವರನ್ನೇ ಪ್ರಶ್ನೆ ಮಾಡುವ ನೀವು, ಆಗ ಆರೋಪಿಯನ್ನು ಬಂಧಿಸದೆ ಬಿಟ್ಟಿದ್ದ್ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿ ಎಂದರು.

ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಶಿಕ್ಷೆ ಖಚಿತ. ನಿಮ್ಮ ಬಳಿ ದಾಖಲೆಗಳಿದ್ದರೆ ಕೊಡಿ, ಅದು ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸಬೇಡಿ ಎಂದು ಹೇಳಿದರು.
ಬಿಟ್‌ ಕಾಯಿನ್‌ ನಾನು ನೋಡಿಯೇ ಇಲ್ಲ. ಅದು ಅವರಿಗೇ ಗೊತ್ತಿರಬೇಕು. ಆ ಪಕ್ಷದ ರಾಜ್ಯ ಉಸ್ತುವಾರಿ, ರಾಷ್ಟ್ರೀಯ ವಕ್ತಾರ ಸುರ್ಜೇವಾಲಾ ಅವರು ನೀಡಿದ ಅಂಕಿ-ಅಂಶಗಳೇ ಅದೆಲ್ಲ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ನಡೆದ ವ್ಯವಹಾರ ಎಂಬುದನ್ನು ತೋರಿಸುತ್ತದೆ ಎಂದರು.

'ದೇಶದ ಅಭಿವೃದ್ಧಿ ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ'

2016, 2017, 2018 ರ ಅವಧಿಯಲ್ಲಿ ನಡೆದಿದೆ ಎಂದು ಸುರ್ಜೇವಾಲಾ(Randeep Surjewala) ಹೇಳಿದ್ದಾರೆ. ಆಗ ಅಧಿಕಾರದಲ್ಲಿ ಇದ್ದವರು ಯಾರು? ಯಾಕೆ ಮುಚ್ಚಿಟ್ಟಿರಿ ಎಂದು ಪ್ರಶ್ನಿಸಿದ ಸಿಎಂ, ಅಂದು ಪ್ರಕರಣವೊಂದನ್ನು ಸರಿಯಾಗಿ ತನಿಖೆ ಮಾಡಿದ್ದರೆ ಎಲ್ಲವೂ ಬಹಿರಂಗವಾಗುತ್ತಿತ್ತು. ಆಗ ಯಾರನ್ನೋ ಉಳಿಸಲು ಆರೋಪಿಯನ್ನು ಬಿಟ್ಟು ಇದೀಗ ನಾವು ಬಂಧಿಸಿದ ಬಳಿಕ ನಮ್ಮ ಮೇಲೆಯೇ ಆರೋಪ ಮಾಡುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.

ಡ್ರಗ್‌ ಕೇಸಿನಲ್ಲಿ(Drug Case) ಮೂರು ಪ್ರಕರಣ ದಾಖಲಿಸಿ ಕೇಂದ್ರ ತನಿಖಾ ಸಂಸ್ಥೆಗೆ ನೀಡಿದ್ದೇವೆ. ತಪ್ಪು ಮಾಡಿದ್ದಕ್ಕೆ ಸಾಕ್ಷಿ, ಪುರಾವೆ ಸಿಕ್ಕಲ್ಲಿ ಎಷ್ಟೇ ದೊಡ್ಡವರಿರಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಎಲ್ಲ ಕೋನದಲ್ಲೂ ತನಿಖೆ ಮಾಡಲಾಗುತ್ತದೆ, ಎಲ್ಲವೂ ಬಯಲಾಗುತ್ತದೆ ಎಂದರು.

Follow Us:
Download App:
  • android
  • ios