Asianet Suvarna News Asianet Suvarna News

Jan Swaraj Yatra| 'ಪ್ರಿಯಾಂಕಾ ಎಂದರೆ ಹೆಣ್ಣಾ ಗಂಡಾ?: ಪ್ರತಾಪ್‌ ಸಿಂಹ

*   ರಾಜ್ಯದಲ್ಲೂ ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ
*   ಪಂಚಾಯಿತಿ ಸದಸ್ಯರಿಗೆ 10 ಸಾವಿರ ಗೌರವಧನ, ಮೊಬೈಲ್‌
*   ಮಹಾನ್‌ ನಾಯಕನಿಂದ ನೀರಾವರಿ ಅನ್ಯಾಯ: ಸಿಎಂ ಬೊಮ್ಮಾಯಿ
 

Priyanka Means Female or Male  Says Pratap Simha grg
Author
Bengaluru, First Published Nov 19, 2021, 8:04 AM IST

ಕೊಪ್ಪಳ(ನ.19):  ಕಾಂಗ್ರೆಸ್‌ನಿಂದಾಗಿ(Congress) ನೀರಾವರಿ ಯೋಜನೆಗಳಿಗೆ ಗ್ರಹಣ ಹಿಡಿದಿದೆ. ಒಬ್ಬ ಮಹಾನ್‌ ನಾಯಕನಿಂದ ಅನ್ಯಾಯ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು. ಈ ಮೂಲಕ ಸಿದ್ದರಾಮಯ್ಯ(Siddaramaiah) ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಕೊಪ್ಪಳ(Koppal) ನಗರದ ಪಬ್ಲಿಕ್‌ ಗ್ರೌಂಡ್‌ನಲ್ಲಿ ಗುರುವಾರ ಜನಸ್ವರಾಜ್‌ ಯಾತ್ರೆಗೆ(Jan Swaraj Yatra) ಚಾಲನೆ ನೀಡಿ ಮಾತನಾಡಿ, ಕೊಪ್ಪಳಕ್ಕೆ ಒಬ್ಬ ಮಹಾನ್‌ ಲೀಡರ್‌ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಎಂದು ಮೊದಲು ಹೇಳಿದರು. ನೀರಾವರಿ ಯೋಜನೆಗೆ(Irrigation Project) ಸಂಬಂಧಿಸಿ ಕೃಷ್ಣೆ ಮೇಲೆ, ಕೂಡಲಸಂಗಮೇಶನ ಮೇಲೆ ಆಣೆ ಮಾಡರು. ಆದರೆ ಕೊಟ್ಟ ಭರವಸೆ ಈಡೇರಿಸಲಿಲ್ಲ. ಹೀಗಾಗಿ ಕಾಂಗ್ರೆಸ್‌ ಸರ್ಕಾರ ಪತನ ಆಯಿತು. ಹಿಂದೆ ನಾನೇ ನೀರಾವರಿ ಸಚಿವನಾಗಿದ್ದಾಗ ನೀರಾವರಿ ಯೋಜನೆಗಳಿಗೆ ಅಡಿಗಲ್ಲು ಹಾಕಿ, ಟೆಂಡರ್‌ ಕರೆಯಲಾಗಿತ್ತು. ಅದಾದ ಮೇಲೆ ಬಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌(JDS) ಸರ್ಕಾರಗಳು ಏನೂ ಮಾಡಲಿಲ್ಲ. ಪ್ರತಿ ವರ್ಷ ಹತ್ತು ಸಾವಿರ ಕೋಟಿ ನೀಡುತ್ತೇನೆ ಎಂದವರು ಐದು ವರ್ಷದಲ್ಲಿ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಕೊಟ್ಟಿದ್ದು ಕೇವಲ 7,500 ಕೋಟಿ ಮಾತ್ರ. ಈಗ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆಯೇ ಕೊಪ್ಪಳ ಏತನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದರು.

ಇದೇ ವೇಳೆ ಕಾಂಗ್ರೆಸ್‌ನವರು ಅಧಿಕಾರ ವೀಕೆಂದ್ರಿಕರಣದ ವಿರೋಧಿಗಳು ಎಂದು ಆರೋಪಿಸಿದ ಬೊಮ್ಮಾಯಿ, ರಾಮಕೃಷ್ಣ ಹೆಗಡೆ ಕಾಲದಲ್ಲಿ ಪ್ರಾರಂಭವಾಗಿದ್ದ ಅಧಿಕಾರ ವೀಕೇಂದ್ರಿಕರಣ ಮತ್ತೆ ಬಿಜೆಪಿ(BJP) ಆಡಳಿತದಲ್ಲಿ ಮುಂದುವರಿದಿದೆ. ಹೀಗಾಗಿ, ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ವೀಕೇಂದ್ರೀಕರಣವನ್ನು ಬೆಂಬಲಿಸುವಂತೆ ಕೋರಿದರು.

ನಾಲ್ಕು ಭವ್ಯ ಬಂಗ್ಲೆ,ಕಾರು ಇದ್ರೂ ನಿರ್ಗತಿಕ : ಖರ್ಗೆ ಬಗ್ಗೆ ಪ್ರತಾಪ್‌ ಸಿಂಹ ವ್ಯಂಗ್ಯ

ಇನ್ನೂ 25 ವರ್ಷ ಕಾಂಗ್ರೆಸ್‌ ಅಧಿಕಾರಕ್ಕೇರಲ್ಲ: ಬಿಎಸ್‌ವೈ

ಯಲ್ಲಾಪುರ(Yellapur):  ದಯನೀಯ ಪರಿಸ್ಥಿತಿ ಎದುರಿಸುತ್ತಿರುವ ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಮುಂದಿನ 25 ವರ್ಷಗಳ ಕಾಲ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕಂತೂ ಬರಲು ಖಂಡಿತ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಭವಿಷ್ಯ ನುಡಿದಿದ್ದಾರೆ.

ಉತ್ತರ ಕನ್ನಡ(Uttara Kannada) ಜಿಲ್ಲೆಯ ಯಲ್ಲಾಪುರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜನಸ್ವರಾಜ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್‌ ಕುರಿತು ಅನಾವಶ್ಯಕ ಟೀಕೆ ಮಾಡಲು ನನಗಂತೂ ಮನಸ್ಸಾಗುವುದಿಲ್ಲ ಎಂದರು.

ಅಟಲ್‌ ಬಿಹಾರಿ ವಾಜಪೇಯಿ(Atal Bihari Vajpayee) ಆನಂತರ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿರುವ ನರೇಂದ್ರ ಮೋದಿ(Narendra Modi) ಪ್ರಧಾನಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಅವರ ಕ್ರಿಯಾಶೀಲತ್ವದ ಕುರಿತು ಎಲ್ಲ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಕ್ರಾಂತಿಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಬಿಜೆಪಿ, ರಾಜ್ಯದಲ್ಲಿ(Karnataka) ಮತ್ತೊಮ್ಮೆ ತನ್ನ ಗೆಲುವಿನ ಪತಾಕೆಯನ್ನು ಖಂಡಿತ ಹಾರಿಸಲಿದೆ ಎಂದರು.

ಕೋವಿಡ್‌(Covid19) ಸಂಕಷ್ಟದ ಪರಿಹಾರಕ್ಕಾಗಿ ನಮ್ಮ ಸರ್ಕಾರ ಕೈಗೊಂಡ ಸುದೀರ್ಘ ಹಾಗೂ ಪರಿಣಾಮಕಾರಿ ನಿರ್ವಹಣೆಯನ್ನು ಇಡೀ ವಿಶ್ವವೇ ಅಚ್ಚರಿಯಿಂದ ಗಮನಿಸುತ್ತಿದೆ ಎಂಬುದು ನಮಗೆ ಹೆಮ್ಮೆಯ ಸಂಗತಿ. ಬಿಜೆಪಿಯ ಸಾಧನೆಗಳನ್ನು ಕಾರ್ಯಕರ್ತರು ಪ್ರತಿ ಗ್ರಾಮಗಳಲ್ಲಿ ಜನರಿಗೆ ಮನವರಿಕೆ ಮಾಡಿ, ಚುನಾವಣೆ ಬಂದಾಗ ಮಾತ್ರ ರೈತರನ್ನು ಭೇಟಿ ಮಾಡಬಾರದು ಎಂದು ಸಲಹೆ ನೀಡಿದರು. ಸಚಿವರಾದ ಶ್ರೀರಾಮುಲು, ಶಿವರಾಮ ಹೆಬ್ಬಾರ ಮಾತನಾಡಿದರು.

ಮಹಾನ್‌ ಆರ್ಥಿಕತಜ್ಞ ಸಿದ್ದರಾಮಯ್ಯನವರು Bitcoin ಬಗ್ಗೆ ವಿವರಿಸಲಿ : ಪ್ರತಾಪ್‌ ಸಿಂಹ!

ಕೇರಳ ಮಾದರಿಯಲ್ಲಿ ಗ್ರಾಪಂಗೆ ಅಧಿಕಾರ

ಬಳ್ಳಾರಿ(Ballari):  ವಿಧಾನ ಪರಿಷತ್‌ನಲ್ಲಿ ನಮಗೆ ಬಲವಿಲ್ಲ. ನೀವು ಬಲ ನೀಡಿ. ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿ ಮಾಡುತ್ತೇವೆ. ಪ್ರತಿ ಗ್ರಾಪಂ ಸದಸ್ಯನಿಗೆ ಮಾಸಿಕ .10 ಸಾವಿರ ಗೌರವಧನ ಕೊಡುತ್ತೇವೆ. ಮೊಬೈಲ್‌ ಕೊಡುತ್ತೇವೆ. ಅಮೃತ ಯೋಜನೆಯನ್ನು ಗ್ರಾಪಂಗೆ ವಿಸ್ತರಿಸಿ ವಾರ್ಷಿಕ .2 ಕೋಟಿ ಅನುದಾನ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌(Nalin Kumar Kateel) ಅವರು ಭರವಸೆ ನೀಡಿದರು.

ನಗರದ ಬಸವಭವನದಲ್ಲಿ ಗುರುವಾರ ಸಂಜೆ ಜರುಗಿದ ಜನಸ್ವರಾಜ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆಶಯದಂತೆ ಗ್ರಾಮ ಸ್ವರಾಜ್‌ ಪರಿಕಲ್ಪನೆ ನಮ್ಮದು. ಬರುವ ಬಜೆಟ್‌ನಲ್ಲಿ(Budget) ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ. ನರೇಂದ್ರ ಮೋದಿ ಅವರಿಂದಾಗಿಯೇ ಗ್ರಾಪಂಗೆ ಅನುದಾನ ಬರುತ್ತಿದೆ. ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಅನುದಾನ ನೀಡಿ ಸಹಕರಿಸಿದರು. ನಮ್ಮ ಜನಪರ, ಗ್ರಾಮೀಣಾಭಿವೃದ್ಧಿಯ ಕಲ್ಪನೆಯನ್ನು ಸಾಕಾರಗೊಳಿಸುವ ಕಾರ್ಯ ಮುಂದುವರಿಯುತ್ತದೆ ಎಂದರು.

ಕಾಂಗ್ರೆಸ್‌ನಿಂದ ಯಾವುದೇ ಅಭಿವೃದ್ಧಿಯ ಕೊಡುಗೆ ಇಲ್ಲ. ನಿರುದ್ಯೋಗ, ಭ್ರಷ್ಟಾಚಾರ, ಭಯೋತ್ಪಾದನೆ ಅವರ ಕೊಡುಗೆ. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಹಿಂದಿನ ಕಾಂಗ್ರೆಸ್‌ನ ರಾಜಿಸೂತ್ರ ಅಡಗಿದೆ ಎಂದು ಟೀಕಿಸಿದರಲ್ಲದೆ, ಕಾಂಗ್ರೆಸ್‌ನಲ್ಲಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಹೊರತುಪಡಿಸಿದರೆ ಎಲ್ಲರೂ ಕಳಂಕಿತ ಪ್ರಧಾನಿಗಳೇ ಆಗಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ ದೇಶದ ಬಡತನ, ಹಸಿವನ್ನು ವೋಟ್‌ ಬ್ಯಾಂಕಾಗಿ(Vote Bank) ಮಾಡಿಕೊಂಡಿತ್ತು. ಇದೀಗ ಅದಕ್ಕೆ ಅವಕಾಶವಿಲ್ಲ. ಎಲ್ಲರೂ ಪ್ರಜ್ಞಾವಂತರಾಗಿದ್ದಾರೆ. ಕಾಂಗ್ರೆಸ್‌ನ ನಾಯಕರು ಅಧಿಕಾರ ಕಳೆದುಕೊಂಡು ಮಂಕಾಗಿ ಕುಳಿತಿದ್ದಾರೆ. ಕಾಂಗ್ರೆಸ್‌ ಮುಕ್ತ ಭಾರತ ಕೆಲಸ ಸನಿಹದಲ್ಲಿದ್ದು, ಕಾಂಗ್ರೆಸ್‌ ಮುಕ್ತ ಬಳ್ಳಾರಿಯಾಗಬೇಕು. ಈ ಬಾರಿಯ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಚುನಾಯಿಸುವ ಮೂಲಕ ಪರಿಷತ್‌ನಲ್ಲಿ ನಮ್ಮ ಶಕ್ತಿಯನ್ನು ಹೆಚ್ಚಿಸಬೇಕು. ಈ ಮೂಲಕ ಗ್ರಾಪಂ ಪರವಾದ ಯೋಜನೆಗಳ ಜಾರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಪ್ರಿಯಾಂಕಾ ಎಂದರೆ ಹೆಣ್ಣಾ ಗಂಡಾ?

ಸಂಸದ ಪ್ರತಾಪ ಸಿಂಹ(Pratap Simha) ಮಾತನಾಡಿ, ಪ್ರಿಯಾಂಕ ಖರ್ಗೆ(Priyank Kharge) ಹೆಣ್ಣಾ ಗಂಡಾ? ಪ್ರಿಯಾಂಕಾ ಎಂದರೆ ಮಹಿಳೆಯರು ತಿರುಗಿ ನೋಡುತ್ತಾರೆ. ಪುರುಷರು ಯಾರೂ ಪ್ರತಿಕ್ರಿಯಿಸುವುದಿಲ್ಲ. ನಟ ಉಪೇಂದ್ರ ಪತ್ನಿ ಸಹ ಪ್ರಿಯಾಂಕನೇ. ಪ್ರಿಯಾಂಕ ಖರ್ಗೆಯನ್ನು ನಾವು ಏನೆಂದು ತಿಳಿದುಕೊಳ್ಳಬೇಕು ಎಂದು ಪ್ರಶ್ನಿಸಿದರಲ್ಲದೆ, ಅದಕ್ಕಾಗಿಯೇ ನಾನು ಪ್ರಿಯಾಂಕಾ ಎಂದರೆ ಪುಲ್ಲಿಂಗನಾ? ಸ್ತ್ರೀಲಿಂಗನಾ ಅಂತ ಕೇಳಿದೆ ಎಂದರು.

Bitcoin Scam| 'ಪ್ರಿಯಾಂಕ್‌ ಖರ್ಗೆ ದೊಡ್ಡ ಹಾಸ್ಯನಟ'

ಕಾಂಗ್ರೆಸ್‌ನವರು ಅಧಿಕಾರ ಇಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ ಅನಗತ್ಯ ಸಂಗತಿಗಳನ್ನು ಹೆಚ್ಚು ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಪಂಚಾಯಿತಿಗಳ ಅಭಿವೃದ್ಧಿಗೆ ಕಾಂಗ್ರೆಸ್‌ನ ಯಾವುದೇ ಕೊಡುಗೆ ಇಲ್ಲ. 15ನೇ ಹಣಕಾಸಿನಲ್ಲಿ ಅನುದಾನ ನೀಡಿದ್ದು ನರೇಂದ್ರ ಮೋದಿಯವರು. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿದ್ದು ನರೇಂದ್ರ ಮೋದಿ ಅವರೇ ಹೊರತು ಕಾಂಗ್ರೆಸ್‌ನವರಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಹಾಗೂ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಚಿವ ಭಗಂವತ ಖೂಬಾ, ಸಚಿವರಾದ ಮುರುಗೇಶ್‌ ನಿರಾಣಿ, ರಾಜಗೌಡ ನಾಯಕ್‌, ಶಾಸಕ ಎನ್‌. ಮಹೇಶ್‌, ಮಾಲೀಕಯ್ಯ ಗುತ್ತೇದಾರ್‌, ಎಚ್‌. ಹನುಮಂತಪ್ಪ, ಎಂ.ಎಸ್‌. ಸೋಮಲಿಂಗಪ್ಪ, ಕೆ.ಎ. ರಾಮಲಿಂಗಪ್ಪ, ಎಸ್‌. ಗುರುಲಿಂಗನಗೌಡ, ನೇಮಿರಾಜ ನಾಯ್ಕ, ಏಚರೆಡ್ಡಿ ಸತೀಶ್‌, ಗುತ್ತಿಗನೂರು ವಿರುಪಾಕ್ಷಗೌಡ, ಶಶಿಕಲಾ, ಸುಗುಣಾ, ಸುಮಾರೆಡ್ಡಿ ಇತರರಿದ್ದರು. ಅನಿಲ್‌ನಾಯ್ಡು ಕಾರ್ಯಕ್ರಮ ನಿರ್ವಹಿಸಿದರು.
 

Follow Us:
Download App:
  • android
  • ios