Asianet Suvarna News Asianet Suvarna News

ಸಿಎಂ ಸ್ಥಾನ ಬಿಡಿ ಎಂದು ಹೇಳಲು ಸ್ವಾಮೀಜಿ ಯಾರು: ರಾಯರೆಡ್ಡಿ

ಉಪಮುಖ್ಯಮಂತ್ರಿ ಮಾಡಬಹುದಾದರೆ ಎಲ್ಲಾ 32 ಮಂತ್ರಿಗಳು ಉಪ ಮುಖ್ಯಮಂತ್ರಿಗಳು ಆಗಬಹುದು. ಆ ಹುದ್ದೆಯಲ್ಲಿ ಏನೂ ಪವರ್‌ ಇಲ್ಲ. ಇದು ವೈಭವಿಕರಣದ ಹುದ್ದೆ ಅಷ್ಟೆ, ಕಾನೂನಿನಲ್ಲಿ ಬೆಲೆ ಇಲ್ಲ ಎಂದರು. ಈ ವಿಚಾರದ ಬಗ್ಗೆ ಚರ್ಚೆ ಮಾಡುವುದನ್ನು ನಿಲ್ಲಿಸಬೇಕು ಎಂದು ರಾಯರೆಡ್ಡಿ ಖಾರವಾಗಿ ಹೇಳಿದರು.

Who is Swamiji to say leave the post of CM Says Basavaraj Rayareddy grg
Author
First Published Jul 2, 2024, 6:30 AM IST

ಕಲಬುರಗಿ(ಜು.02):  ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಮೂರು ಜನ ಉಪಮುಖ್ಯಮಂತ್ರಿ ಹುದ್ದೆ ಹುಟ್ಟು ಹಾಕಬೇಕೆಂಬ ಚರ್ಚೆ ವಿಚಾರವೇ ಅನಾವಶ್ಯಕ. ಚಂದ್ರಶೇಖರ ಸ್ವಾಮೀಜಿ ಹೇಳಿರೋದು ಸರಿಯಲ್ಲ. ಮುಖ್ಯಮಂತ್ರಿ ಸ್ಥಾನಬಿಟ್ಟು ಕೊಡು ಅಂತಾ ಹೇಳುವುದಕ್ಕೆ ಅವರು ಯಾರು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಪ್ರಶ್ನಿಸಿದ್ದಾರೆ. 

ಸಿದ್ದರಾಮಯ್ಯ ರನ್ನ ಇಳಿಸೋದಕ್ಕೆ ಆಗೋದಿಲ್ಲ, ಇಂತಹ ವಿಚಾರಗಳೆಲ್ಲವೂ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರಗಳು, ಅರ್ಹತೆ ಮಾನದಂಡ ಇಟ್ಟುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ ಪಂಚ ಯೋಜನೆಗಳಿರುತ್ತವೆ: ಶಾಸಕ ಬಸವರಾಜ ರಾಯರೆಡ್ಡಿ

ಉಪಮುಖ್ಯಮಂತ್ರಿ ಮಾಡಬಹುದಾದರೆ ಎಲ್ಲಾ 32 ಮಂತ್ರಿಗಳು ಉಪ ಮುಖ್ಯಮಂತ್ರಿಗಳು ಆಗಬಹುದು. ಆ ಹುದ್ದೆಯಲ್ಲಿ ಏನೂ ಪವರ್‌ ಇಲ್ಲ. ಇದು ವೈಭವಿಕರಣದ ಹುದ್ದೆ ಅಷ್ಟೆ, ಕಾನೂನಿನಲ್ಲಿ ಬೆಲೆ ಇಲ್ಲ ಎಂದರು. ಈ ವಿಚಾರದ ಬಗ್ಗೆ ಚರ್ಚೆ ಮಾಡುವುದನ್ನು ನಿಲ್ಲಿಸಬೇಕು ಎಂದು ರಾಯರೆಡ್ಡಿ ಖಾರವಾಗಿ ಹೇಳಿದರು.

Latest Videos
Follow Us:
Download App:
  • android
  • ios