Asianet Suvarna News Asianet Suvarna News

ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ ಪಂಚ ಯೋಜನೆಗಳಿರುತ್ತವೆ: ಶಾಸಕ ಬಸವರಾಜ ರಾಯರೆಡ್ಡಿ

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಇರುವವರೆಗೊ ಬಡವರ ಕಣ್ಣಿರು ಒರೆಸುವ ಪಂಚ ಯೋಜನೆಗಳನ್ನು ರದ್ದುಗೊಳಿಸುವುದಿಲ್ಲ. ಅವುಗಳು ಶರವೇಗದಲ್ಲಿ ಮುಂದುವರೆಯಲಿವೆ, ಯಾರು ಆತಂಕ ಪಡಬೇಡಿ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

As long as Siddaramaiah is CM there will be five schemes says Basavaraj Rayareddy gvd
Author
First Published Jun 24, 2024, 5:14 PM IST

ಯಲಬುರ್ಗಾ (ಜೂ.24): ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಇರುವವರೆಗೊ ಬಡವರ ಕಣ್ಣಿರು ಒರೆಸುವ ಪಂಚ ಯೋಜನೆಗಳನ್ನು ರದ್ದುಗೊಳಿಸುವುದಿಲ್ಲ. ಅವುಗಳು ಶರವೇಗದಲ್ಲಿ ಮುಂದುವರೆಯಲಿವೆ, ಯಾರು ಆತಂಕ ಪಡಬೇಡಿ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಕುಕನೂರ-ಯಲಬುರ್ಗಾ ತಾಲೂಕುಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಹಾಗೂ ಸಮಿತಿಯ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಗಳ ಅನುಷ್ಠಾನಕ್ಕೆ ಬೇಕಾಗುವ ಸಾಕಷ್ಟು ಅನುದಾನ ಸರ್ಕಾರದಲ್ಲಿದೆ. 

ಹೀಗಿರುವಾಗ ಯಾರೋ ಹೇಳ್ತಾರಂತ ರದ್ದು ಮಾಡೋಕಾಗಲ್ಲ. ಈ ಯೋಜನೆಗಳು ಬಡವರ ಪಾಲಿಗೆ ದಾರಿದೀಪಗಳಾಗಿವೆ ಎಂದರು. ನಾನು ಶಾಸಕ, ಸಿಎಂ ಆರ್ಥಿಕ ಸಲಹೆಗಾರನಾದ ಮೇಲೆ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ₹೨೭೦ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಯಲಬುರ್ಗಾ, ಕುಕನೂರ, ತಳಕಲ್‌ಗೆ ಕುಡಿಯುವ ನೀರಿನ ಯೋಜನೆ ಮಂಜೂರು, ಕುಕನೂರಿನಲ್ಲಿ ಕಂದಾಯ ಭವನ ನಿರ್ಮಾಣಕ್ಕೆ ₹೩೦ಕೋಟಿ, ಬಂಡಿ, ಬಳಗೇರಿ, ಚಿಕ್ಕಮ್ಯಾಗೇರಿ ಗ್ರಾಮಗಳಿಗೆ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹೩ಕೋಟಿ ಮಂಜೂರು, ಕುಕನೂರನಲ್ಲಿ ₹೧೫ ಕೋಟಿ ವೆಚ್ಚದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ, ₹೨೫ ಕೋಟಿ ವೆಚ್ಚದಲ್ಲಿ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಮಂಜೂರು, ೧೩ ಸರ್ಕಾರಿ ಪ್ರೌಢಶಾಲೆ, ೫ ಜೂನಿಯರ್‌ ಕಾಲೇಜು, ೧೫ ಹೊಸ ಬಸ್ ನಿಲ್ದಾಣ, ೩ ವಸತಿ ಶಾಲೆ ಸೇರಿದಂತೆ ೩೮ ಕೆರೆಗಳನ್ನು ಮಂಜೂರು ಮಾಡಿಸಿ ಕೆರೆ ತುಂಬಿಸುವ ಯೋಜನೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ 5039 ಶಿಫಾರಸುಗಳ 7 ವರದಿ ಸಲ್ಲಿಕೆ: ಶಾಸಕ ಆರ್.ವಿ.ದೇಶಪಾಂಡೆ

ಯಲಬುರ್ಗಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ ಕೋರ್ಲಳ್ಳಿ ಹಾಗೂ ಕುಕನೂರ ಅಧ್ಯಕ್ಷ ಸಂಗಮೇಶ ಗುತ್ತಿ, ಜಿಲ್ಲಾ ಸಮಿತಿ ಸದಸ್ಯ ಮಲ್ಲು ಜಕ್ಕಲಿ ಅವರನ್ನು ಶಾಸಕ ಬಸವರಾಜ ರಾಯರಡ್ಡಿ ಇದೇ ವೇಳೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ಬಸವರಾಜ ತೆನ್ನೆಳ್ಳಿ, ತಾಪಂ ಇಒ ಸಂತೋಷ ಪಾಟೀಲ, ಬೆಟದಪ್ಪ ಮಾಳೆಕೊಪ್ಪ, ರಮೇಶ ಚಿಣಗಿ, ಎಫ್.ಎಂ. ಕಳ್ಳಿ ಹಾಗೂ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ರಾಘವೇಂದ್ರ ಜೋಶಿ, ಹನುಮಂತಗೌಡ ಪಾಟೀಲ, ಎ.ಜಿ. ಭಾವಿಮನಿ, ಮಹೇಶ ಹಳ್ಳಿ, ಡಾ. ಶಿವನಗೌಡ ದಾನರೆಡ್ಡಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಹುಲಗಪ್ಪ ಬಂಡಿವಡ್ಡರ್, ಶರಣಗೌಡ ಪಾಟೀಲ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios