ಉತ್ತರ ಕನ್ನಡ: ನೂತನ ಕಾಂಗ್ರೆಸ್ ಸರ್ಕಾರದಲ್ಲಿ ದೇಶಪಾಂಡೆಗೆ ಯಾವ ಹುದ್ದೆ?
ಹಿರಿಯ ರಾಜಕಾರಣಿ ಆರ್.ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಸರ್ಕಾರ ಶಿಫಾರಸು ಮಾಡಿದೆ. ಮುಂದೆ ದೇಶಪಾಂಡೆ ಅವರಿಗೆ ಇದೇ ಸ್ಪೀಕರ್ ಹುದ್ದೆಯೇ ಖಾಯಂ ಆಗಲಿದೆಯೇ ಅಥವಾ ಸಚಿವ ಸ್ಥಾನ ದೊರೆಯಲಿದೆಯೇ ಎಂಬ ಕುತೂಹಲ ಜಿಲ್ಲೆಯಲ್ಲಿ ಉಂಟಾಗಿದೆ.
ಕಾರವಾರ (ಮೇ.21) : ಹಿರಿಯ ರಾಜಕಾರಣಿ ಆರ್.ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಸರ್ಕಾರ ಶಿಫಾರಸು ಮಾಡಿದೆ. ಮುಂದೆ ದೇಶಪಾಂಡೆ ಅವರಿಗೆ ಇದೇ ಸ್ಪೀಕರ್ ಹುದ್ದೆಯೇ ಖಾಯಂ ಆಗಲಿದೆಯೇ ಅಥವಾ ಸಚಿವ ಸ್ಥಾನ ದೊರೆಯಲಿದೆಯೇ ಎಂಬ ಕುತೂಹಲ ಜಿಲ್ಲೆಯಲ್ಲಿ ಉಂಟಾಗಿದೆ.
ಆರ್.ವಿ. ದೇಶಪಾಂಡೆ (RV Deshpande) ಇದುವರೆಗೆ 10 ಬಾರಿ ಸ್ಪರ್ಧಿಸಿ, 9 ಬಾರಿ ಗೆಲುವು ಸಾಧಿಸಿದ್ದಾರೆ. ಸುದೀರ್ಘ ಅವಧಿಗೆ ಸಚಿವರಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ಸಹಕಾರ, ಕಂದಾಯ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಹೀಗೆ ಹಲವು ಖಾತೆಗಳನ್ನು ನಿರ್ವಹಿಸಿದ ಅನುಭವ ಇದೆ. ಈ ಹಿನ್ನೆಲೆಯಲ್ಲಿ ಶನಿವಾರ ಮೊದಲ ಹಂತದ ಸಂಪುಟ ರಚನೆಯಲ್ಲೇ ದೇಶಪಾಂಡೆ ಅವರಿಗೆ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಉಂಟಾಗಿತ್ತು. ಆದರೆ ಅದೀಗ ಹುಸಿಯಾಗಿದೆ.
ಉತ್ತರ ಕನ್ನಡ: ಯಲ್ಲಾಪುರ ಕ್ಷೇತ್ರ ಅಭಿವೃದ್ಧಿ ಕಾರ್ಯವೇ ಒಂದು ಸವಾಲು !
ಈ ನಡುವೆ ದೇಶಪಾಂಡೆ ಸ್ಪೀಕರ್ ಆಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ದೇಶಪಾಂಡೆ ಸ್ಪೀಕರ್ ಆಗುವ ಅರ್ಹತೆ ನನಗಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸ್ಪೀಕರ್ ಸ್ಥಾನವನ್ನು ನಿರಾಕರಿಸಿ, ಸಚಿವ ಸ್ಥಾನದ ಬಗ್ಗೆಯೇ ಆಸಕ್ತಿ ವ್ಯಕ್ತಪಡಿಸಿದ್ದರು.
ಆರ್.ವಿ. ದೇಶಪಾಂಡೆ ಹೈಕಮಾಂಡಿನಲ್ಲೂ ಪ್ರಬಲರಾಗಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಬಣದಿಂದ ಸಚಿವ ಸ್ಥಾನ ಸಿಗದಿದ್ದರೂ ಹೈಕಮಾಂಡ್ ಕೋಟಾದಲ್ಲಿ ಸಚಿವರಾಗಲು ದೇಶಪಾಂಡೆ ಪ್ರಯತ್ನಕ್ಕಿಳಿಯುವ ಸಾಧ್ಯತೆ ಇದೆ.
ಈ ನಡುವೆ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಕೆಲವರು ಲಾಬಿ ನಡೆಸುತ್ತಿರುವುದೂ ಬೆಳಕಿಗೆ ಬಂದಿದೆ. ಒಂದು ವೇಳೆ ದೇಶಪಾಂಡೆ ಅವರಿಗೆ ಖಾಯಂ ಆಗಿ ಸ್ಪೀಕರ್ ಹುದ್ದೆಯನ್ನೇ ನೀಡಿದರೆ ಆಗ ಜಿಲ್ಲೆಯಲ್ಲಿ ಬೇರೊಬ್ಬ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಭಟ್ಕಳ ಶಾಸಕ ಮಂಕಾಳ ವೈದ್ಯ ಅಥವಾ ಶಿರಸಿಯ ಭೀಮಣ್ಣ ನಾಯ್ಕ ಅವರಿಗೆ ಸಚಿವ ಸ್ಥಾನ ಒಲಿಯುವ ನಿರೀಕ್ಷೆ ಇದೆ.
‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್' ಮೈಲಾರಲಿಂಗೇಶ್ವರ ಕಾರ್ಣಿಕ ಹೇಳಿದ್ದು ನಿಜವಾಯ್ತು!
ಜಿಲ್ಲೆಯ ಮಟ್ಟಿಗೆ ಹಿರಿಯರಾದ ದೇಶಪಾಂಡೆ ಅವರಿಗೆ ಸಚಿವರಾಗಲಿದ್ದಾರೆಯೇ, ಸ್ಪೀಕರ್ ಆಗಲಿದ್ದಾರೆಯೇ ಎನ್ನುವುದು ವ್ಯಾಪಕ ಚರ್ಚೆಯ ಸಂಗತಿಯಾಗಿದೆ.
ನನಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಮುಖಂಡರು, ಹೈಕಮಾಂಡ್ ನಿರ್ಧರಿಸಲಿದೆ. ನಾನು 8 ಮುಖ್ಯಮಂತ್ರಿ ಕೆಳಗಡೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಸ್ಪೀಕರ್ ಪೋಸ್ಟ್ ದೊಡ್ಡದು. ಆ ಅರ್ಹತೆ ನನಗಿಲ್ಲ ಎಂದುಕೊಂಡಿದ್ದೇನೆ.
ಆರ್.ವಿ. ದೇಶಪಾಂಡೆ, ಹಳಿಯಾಳ ಶಾಸಕ