Asianet Suvarna News Asianet Suvarna News

ಉತ್ತರ ಕನ್ನಡ: ಯಲ್ಲಾಪುರ ಕ್ಷೇತ್ರ ಅಭಿವೃದ್ಧಿ ಕಾರ್ಯವೇ ಒಂದು ಸವಾಲು !

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ವಿಸ್ತಾರವಾಗಿರುವ ಮೂರು ತಾಲೂಕುಗಳನ್ನು ಹೊಂದಿದೆ. ಇಲ್ಲಿ ಅಭಿವೃದ್ಧಿ ಕಾರ್ಯವೇ ಒಂದು ಸವಾಲು. ಈ ಹಿಂದೆ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಇದೀಗ ವಿಪಕ್ಷದ ಶಾಸಕರು. ಅನೇಕ ವರ್ಷಗಳಿಂದ ಬೇಡಿಕೆ, ಪ್ರಸ್ತಾವನೆಗಳಿದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರುವ ಕುರಿತು ಹೆಬ್ಬಾರರು ಈ ಸವಾಲನ್ನು ಸ್ವೀಕರಿಸಬೇಕು.

Karnataka government formation Yallapur constituency development work is a challenge rav
Author
First Published May 21, 2023, 5:15 AM IST

ಶಂಕರಭಟ್ಟತಾರೀಮಕ್ಕಿ

ಯಲ್ಲಾಪುರ (ಮೇ.21) : ಯಲ್ಲಾಪುರ ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ವಿಸ್ತಾರವಾಗಿರುವ ಮೂರು ತಾಲೂಕುಗಳನ್ನು ಹೊಂದಿದೆ. ಇಲ್ಲಿ ಅಭಿವೃದ್ಧಿ ಕಾರ್ಯವೇ ಒಂದು ಸವಾಲು. ಈ ಹಿಂದೆ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಇದೀಗ ವಿಪಕ್ಷದ ಶಾಸಕರು. ಅನೇಕ ವರ್ಷಗಳಿಂದ ಬೇಡಿಕೆ, ಪ್ರಸ್ತಾವನೆಗಳಿದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರುವ ಕುರಿತು ಹೆಬ್ಬಾರರು(Shivaram hebbar) ಈ ಸವಾಲನ್ನು ಸ್ವೀಕರಿಸಬೇಕು.

ಪ್ರಕೃತಿದತ್ತ ಸಂಪತ್ತಿನ ಈ ಜಿಲ್ಲೆ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ ಹೊಂದಿದೆ. ಆದರೆ ಇದಕ್ಕೆ ಅಗತ್ಯವಿರುವ ರಸ್ತೆ, ಆ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳು ಅಗತ್ಯ. ಇವುಗಳನ್ನು ಸಾಕಾರಗೊಳಿಸಿದರೆ ಪ್ರವಾಸೋದ್ಯಮದಲ್ಲಿ ಗೋವಾ ಮೀರಿಸಬಹುದು. ಹೇರಳ ಸಂಪನ್ಮೂಲವಿದ್ದರೂ ಈವರೆಗಿನ ಯಾವ ಸಚಿವರೂ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು ಕೊಡದೇ ಇದ್ದುದು ಜಿಲ್ಲೆಯ ದುರ್ದೈವ. ಪ್ರವಾಸೋದ್ಯಮ ಬೆಳೆಸಿದರೆ ಜಿಲ್ಲೆಯ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯೂ ಆಗುತ್ತದೆ.

‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌' ಮೈಲಾರಲಿಂಗೇಶ್ವರ ಕಾರ್ಣಿಕ ಹೇಳಿದ್ದು ನಿಜವಾಯ್ತು!

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ (Ankola-Hubli Railway Project)ಶತಮಾನಗಳಷ್ಟುಹಿಂದಿನದು. ನ್ಯಾಯಾಲಯಗಳಲ್ಲಿ ತಕರಾರಿದ್ದರೂ ಸಮರ್ಥ ಹೋರಾಟ ನಡೆಸಿ, ಕೇಂದ್ರದ ಮೇಲೆ ಒತ್ತಡ ಹೇರಿ ಈ ರೈಲು ಯೋಜನೆ ಕಾರ್ಯಗತವಾದರೆ, ಪ್ರವಾಸೋದ್ಯಮಕ್ಕೆ ಅನುಕೂಲ. ಪರಿಸರ ಮಾಲಿನ್ಯವೂ ಶೇ.80ರಷ್ಟುಕಡಿಮೆಯಾಗುವುದು. ಯಲ್ಲಾಪುರ ಪಟ್ಟಣದಲ್ಲಿ ವಾಹನ ಸಂಚಾರ ಮಿತಿ ಮೀರಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಪಟ್ಟಣದಲ್ಲಿಯೇ ಹಾದುಹೋಗಿದೆ. ಬೈಪಾಸ್‌ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಇದನ್ನು ಅನುಷ್ಠಾನಗೊಳಿಸುವ ಹೊಣೆ ಹೆಬ್ಬಾರರ ಹೆಗಲೇರಿದೆ.

ತಾಲೂಕಿನ ಪ್ರಮುಖ ರಸ್ತೆಗಳು ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡಿದ್ದು, ಕೆಲವು ಪ್ರದೇಶಗಳಲ್ಲಿ ಒಳ ರಸ್ತೆಗಳ ನಿರ್ಮಾಣ ಆಗಬೇಕಿದೆ. ವಿಶೇಷವಾಗಿ ಮುಂಡಗೋಡ ತಾಲೂಕಿನಲ್ಲಿ ರೈತರ ಬದುಕಿಗೆ ನೀರಾವರಿಯೊಂದೇ ಪರಿಹಾರ. ಇದನ್ನು ತಂದು ಭಗೀರಥನ ದಾರಿಯಲ್ಲಿ ಸಾಗಿ ಪೂರ್ತಿಗೊಳಿಸುವ ಹೊಣೆ ಶಾಸಕರ ಮೇಲಿದೆ. ಅಲ್ಲಿನ ಕೆರೆಗಳ ಅಭಿವೃದ್ಧಿ ಕೂಡಾ ಮಹತ್ವದ್ದಾಗಿದೆ. ಕ್ಷೇತ್ರದಲ್ಲಿ ಯುವ ಜನಾಂಗ ಮತ್ತು ಮಹಿಳೆಯರಿಗಾಗಿ ಗಾರ್ಮೆಂಟ್ಸ್‌ನಂತಹ ಸಣ್ಣಪುಟ್ಟಕೈಗಾರಿಕೆಗಳು ತುರ್ತಾಗಿ ಬರಬೇಕು. ಇಲ್ಲದಿದ್ದರೆ ಯುವ ಜನಾಂಗ ಉದ್ಯೋಗಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಕಷ್ಟವಾಗಲಿದೆ.

ಬನವಾಸಿ ಪ್ರದೇಶವೂ ಯಲ್ಲಾಪುರ ಕ್ಷೇತ್ರದಲ್ಲಿದೆ. ಅಲ್ಲಿಯೂ ಕೂಡ ಬನವಾಸಿ ದೇವಾಲಯ ಸೇರಿದಂತೆ ಹಲವು ತಾಣಗಳನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮಕ್ಕೆ ನೆಲೆ ನೀಡಿದಂತಾಗುತ್ತದೆ.

ಉತ್ತರ ಕನ್ನಡ ತೋಟಗಾರಿಕಾ ಜಿಲ್ಲೆಯಾಗಿದ್ದರೂ ಶೇ. 90ರಷ್ಟುರೈತರು ಅಡಕೆಗೆ ಸೀಮಿತಗೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಏನಾದೀತು ಗೊತ್ತಿಲ್ಲ. ಕೆಡಿಸಿಸಿ ಬ್ಯಾಂಕಿನ ಮೂಲಕ ಹೊಸ ಚಿಂತನೆ ರೂಪಿಸಿ ಸಾಂಬಾರು ಬೆಳೆಗಳನ್ನು ಬೆಳೆಸಲು ಹೊಸ ಯೋಜನೆ ರೂಪಿಸುವಂತಾಗಬೇಕು. ಮುಂಡಗೋಡ, ಕಲಘಟಗಿ, ಕಿರವತ್ತಿ ಭಾಗದ ರೈತರಿಗೆ ಕಬ್ಬು ಬೆಳೆಗೆ ಅವಕಾಶ ದೊರಕಬೇಕು. ಅಲ್ಲದೇ ತಾಲೂಕಿನಲ್ಲಿ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೊರಜಿಲ್ಲೆಗೆ ಹೋಗುವ ಸ್ಥಿತಿ ಇದೆ. ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಕ್ಷೇತ್ರದ ಈ ಎಲ್ಲ ಸವಾಲುಗಳನ್ನು ಎದುರಿಸುವ ಇಚ್ಚಾಶಕ್ತಿಯನ್ನು ಶಾಸಕರು ತೋರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

 

ಯಾವುದೇ ಸರ್ಕಾರವಿದ್ದರೂ ಅಭಿವೃದ್ಧಿಗೆ ತೊಡಕಾಗದು: ಶಾಸಕ ಶಿವರಾಮ ಹೆಬ್ಬಾರ್

ಕ್ಷೇತ್ರದ ಅಭಿವೃದ್ಧಿಯ ನೀಲನಕ್ಷೆ ರೂಪಿಸಿದ್ದೇನೆ. ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುತ್ತಿದ್ದೇನೆ. ಜನಪರವಾಗಿ ಜನರ ಜೊತೆ ಸದಾ ಇದ್ದೇನೆ. ನನ್ನ ಯೋಚನೆ, ಯೋಜನೆಗೆ ಜನರ ಸಲಹೆ ಸೂಚನೆಗಳು ಅಗತ್ಯ.

-ಶಿವರಾಮ ಹೆಬ್ಬಾರ, ಶಾಸಕ

ಜಿಲ್ಲೆಯ, ಕ್ಷೇತ್ರದ ಬಗ್ಗೆ ಸಮಷ್ಟಿಅಭಿಪ್ರಾಯ ಹೊಂದಿದ ಚಿಂತಕರ ಜೊತೆ ಚರ್ಚಿಸಿ ನಮ್ಮ ಶಾಸಕ ಶಿವರಾಮ ಹೆಬ್ಬಾರ ಮುನ್ನಡೆದರೆ ಒಂದು ಇತಿಹಾಸವನ್ನೇ ಸೃಷ್ಟಿಮಾಡುವ ಸಾಮರ್ಥ್ಯ ಅವರಿಗಿದೆ.

ಆರ್‌.ಎನ್‌. ಭಟ್ಟಧುಂಡಿ ರಂಗಕರ್ಮಿ

Follow Us:
Download App:
  • android
  • ios