Asianet Suvarna News Asianet Suvarna News

Assembly session: ವಿಧಾನಸಭೆಯಲ್ಲಿ ಸಾವರ್ಕರ್‌ ಫೋಟೋ ಅಳವಡಿಸುತ್ತಿರುವುದಕ್ಕೆ ಅಭಿನಂದನೆ: ರವಿಕುಮಾರ್

ಸುವರ್ಣ ಸೌಧದ ವಿಧಾನಸಭೆ ಸಭಾಂಗಣದಲ್ಲಿ ಸ್ವಾತಂತ್ರ್ಯ ವೀರ್ ಸಾವರ್ಕರ್ ಫೋಟೋ ಹಾಕುತ್ತಿರುವುದಕ್ಕೆ ಸಭಾಪತಿಗಳಿಗೆ, ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅಳವಡಿಸುತ್ತಿರುವುದಕ್ಕೆ ವಿಪಕ್ಷ ನಾಯಕರು ಸಹಕರಿಸಬೇಕು.

Welcome to the decision to install Savarkar photo in assembly Ravikumar sat
Author
First Published Dec 18, 2022, 6:20 PM IST

ಬೆಂಗಳೂರು (ಡಿ.18): ಸುವರ್ಣ ಸೌಧದ ವಿಧಾನಸಭೆ ಸಭಾಂಗಣದಲ್ಲಿ ಸ್ವಾತಂತ್ರ್ಯ ವೀರ್ ಸಾವರ್ಕರ್ ಫೋಟೋ ಹಾಕುತ್ತಿರುವುದಕ್ಕೆ ಸಭಾಪತಿಗಳಿಗೆ, ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯಾರೋ ವಿರೋಧ ಮಾಡ್ತಾರೆ ಅನ್ನೋ ಕಾರಣಕ್ಕೆ ವೀರ್ ಸಾವರ್ಕರ್ ಭಾವಚಿತ್ರ ಹಾಕದೆ ಇರುವುದು ಸರಿಯಾದ ಕ್ರಮ ಅಲ್ಲ. ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅಳವಡಿಸುತ್ತಿರುವುದಕ್ಕೆ ವಿಪಕ್ಷ ನಾಯಕರು ಸಹಕರಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್‌ ತಿಳಿಸಿದ್ದಾರೆ.

ಸುವರ್ಣಸೌಧದ ವಿಧಾನಸಭಾ ಸಭಾಂಗಣದಲ್ಲಿ ಸಾವರ್ಕರ್ ಫೋಟೋ ಅನಾವರಣ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿರುವ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲೂ ಭಾವಚಿತ್ರ ಹಾಕಬೇಕು. ಮಹಾತ್ಮ ಗಾಂಧೀಜಿ, ಸಾವರ್ಕರ್, ಅಂಬೇಡ್ಕರ್ ರವರ ಭಾವಚಿತ್ರವನ್ನು ಹಾಕಬೇಕು. ವಿಧಾನಸಭೆ ಸಭಾಂಗಣದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಫೋಟೋ ಹಾಕ್ತಿರುವುದಕ್ಕೆ ಸಭಾಪತಿಗಳಿಗೆ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸರ್ಕಾರ ನಿರ್ಧಾರ ಮಾಡಿದೆ ಅಂದರೆ ವಿರೋಧ ಪಕ್ಷದವರ ಸಹಮತಿ ಇದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

Assembly session: ಬೆಳಗಾವಿ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್‌ ಫೋಟೋ ಅನಾವರಣ

ವಿಪಕ್ಷದವರು ಸಹಕರಿಸಲಿ: ಸಾವರ್ಕರ್‌ ಭಾವಚಿತ್ರೆ ಅಳವಡಿಕೆ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮತ್ತೊಂದೆಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದ ವಿರೋಧಗಳನ್ನು ಬದಿಗಿಟ್ಟು ಸಹಕಾರ ನೀಡುವಂತೆ ವಿನಂತಿ ಮಾಡುತ್ತೇನೆ. ಒಂದು ವೇಳೆ ಇದನ್ನು ವಿರೋಧಿಸಿದರೆ ಅದು ಅವರ ಮುಟ್ಟಾಳತನ ಎಂದು ಹೇಳುತ್ತೇನೆ. ಈ ಭಾವಚಿತ್ರ ಅಳವಡಿಸಿದರೆ ಕೋಟ್ಯಂತರ ಜನರು ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸ್ತಾರೆ ಎಂದರು.

ಟಿಪ್ಪುಗೆ ಸಾವರ್ಕರ್‌ ಹೋಲಿಕೆ ಸರಿಯಲ್ಲ:  ಈ ಕುರಿತು ಮಾತನಾಡಿದ ಸಚಿವ ಸಿ.ಸಿ. ಪಾಟೀಲ್‌ ಅವರು ಅಧಿವೇಶನ ಸಭಾಂಗಣದಲ್ಲಿ ಯಾವ ಭಾವ ಚಿತ್ರ ಹಾಕಬೇಕು ಎಂದು ಸಭಾಧ್ಯಕ್ಷ ಮತ್ತು ಸಭಾಪತಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಕಾಂಗ್ರೆಸ್ ನಾಯಕರು ಟಿಪ್ಪು ಫೋಟೋ ಇಟ್ಟುಕೊಂಡು ಹೋಗುವಾಗ, ನಾವು ಸಾವರ್ಕರ್ ಫೋಟೋ ಇದ್ದರೆ ಏನು ತಪ್ಪು. ಸಾವರ್ಕರ್ ಎಷ್ಟು ವರ್ಷ ಕಾಲಪಾನಿ ಶಿಕ್ಷೆ ಅನುಭವಿಸಿದರು‌ ಎಲ್ಲರಿಗೂ ಗೊತ್ತಿದೆ. ಸಾವರ್ಕರ್ ಬಿಜೆಪಿ ಸ್ವತ್ತು ಅಲ್ಲ, ಅವರೊಬ್ಬ ದೇಶಾಭಿಮಾನಿ. ಟಿಪ್ಪು ಗೆ ಸಾವರ್ಕರ್ ಹೋಲಿಕೆ ಮಾಡೋದು ಸರಿಯಲ್ಲ. ಸಾವರ್ಕರ್ ದೇಶಾಭಿಮಾನಿ ಅಂತ ಎದೆ ತಟ್ಟಿ ಹೇಳ್ತೀನಿ ಎಂದರು. 

ಗಾಂಧಿ ಹತ್ಯೆಗೆ ಗನ್‌ ಖರೀದಿಸಲು ಸಾವರ್ಕರ್‌ ಸಹಾಯ : ಗಾಂಧಿ ಮರಿಮೊಮ್ಮಗನ ಆರೋಪ

ಗಾಂಧಿ ಕೊಲೆ ಕೇಸಲ್ಲಿ ಸಾವರ್ಕರ್‌ ಇದ್ದಾರೆ: ಇನ್ನು ವೀರ್‌ ಸಾವರ್ಕರ್‌ ಫೋಟೋ ಅಳವಡಿಕೆ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸಾವರ್ಕರ್ ಫೋಟೋ ಅನಾವರಣ ವಿಚಾರ ನನಗೂ ಗೊತ್ತಿಲ್ಲ. ಯಾರೋ ಹೇಳ್ತಾ ಇದ್ದರು. ಆದರೆ, ಸಾವರ್ಕರ್‌ ಅವರದ್ದು ವಿವಾದಾತ್ಮಕ ವ್ಯಕ್ತಿತ್ವವಾಗಿದೆ. ಆದರೆ, ಫೋಟೋ ಹಾಕೋದ್ರಿಂದ ಅವರ ಆತ್ಮಕ್ಕೂ ಶಾಂತಿ ಸಿಗಬೇಕಲ್ವಾ. ವಿವಾದಾತ್ಮಕ ವ್ಯಕ್ತಿಗಳ ಫೋಟೋ ಯಾಕೆ ಹಾಕಬೇಕು.? ಇದು ಬಿಜೆಪಿ ಅಜೆಂಡಾ ಆಗಿದೆ. ಮಹಾತ್ಮ ಗಾಂಧಿ  ಕೊಲೆ ಕೇಸ್ ನಲ್ಲಿ ಇದ್ದಂತಹ ವ್ಯಕ್ತಿ ಆತ ಎಂದು ಹೇಳಿದ್ದಾರೆ.

Follow Us:
Download App:
  • android
  • ios