ಗನ್‌ ಸಿಗದೆ ಅಲೆಯುತ್ತಿದ್ದ ಗೋಡ್ಸೆಗೆ ಸಾವರ್ಕರ್‌ ನೆರವು ನೀಡಿದ್ದರು ಇದು ಆರೋಪವಲ್ಲ, ಇತಿಹಾಸದಲ್ಲಿ ಇದೆಲ್ಲವೂ ಇದೆ ಗಾಂಧಿ ಮರಿಮೊಮ್ಮಗನ ಹೇಳಿಕೆಯಿಂದ ತೀವ್ರ ಸಂಚಲನ  

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹತ್ಯೆಗೆ ನಾಥೂರಾಮ್‌ ಗೋಡ್ಸೆ ಬಳಸಿದ್ದ ಗನ್‌ ಖರೀದಿಸಲು ಹಿಂದುತ್ವವಾದಿ ನಾಯಕ ವೀರ ಸಾವರ್ಕರ್‌ ನೆರವು ನೀಡಿದ್ದರು ಎಂದು ಗಾಂಧೀಜಿ ಮರಿಮೊಮ್ಮಗ ತುಷಾರ್‌ ಗಾಂಧಿ ಹೇಳಿರುವುದು ತೀವ್ರ ಸಂಚಲನಕ್ಕೆ ಕಾರಣವಾಗಿದೆ.

‘ಅಂಡಮಾನ್‌ (Andaman Jail) ಜೈಲಿನಲ್ಲಿದ್ದಾಗ ಸಾವರ್ಕರ್‌ (Veer Savarkar) ಕ್ಷಮಾದಾನ ಕೋರಿ ಬ್ರಿಟಿಷರಿಗೆ (British)ಪತ್ರ ಬರೆದಿದ್ದರು. ವಿಧೇಯ ಸೇವಕನಾಗಿ ಇರುವುದಾಗಿ, ಬ್ರಿಟಿಷರಿಗೆ ನೆರವಾಗುವುದಾಗಿಯೂ ಹೇಳಿದ್ದರು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಕಳೆದ ವಾರ ನೀಡಿದ್ದ ಹೇಳಿಕೆ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಗಾಂಧಿ ಮರಿಮೊಮ್ಮಗ (Gandhi's great-grandson) ತುಷಾರ್‌ ಗಾಂಧಿ, ಬ್ರಿಟಿಷರಿಗೆ ನೆರವು ನೀಡಿದ್ದಷ್ಟೇ ಅಲ್ಲ, ಬಾಪು ಹಂತಕ ನಾಥೂರಾಮ್‌ ಗೋಡ್ಸೆ ಅತ್ಯಂತ ಕ್ಷಮತೆಯುಳ್ಳ ಗನ್‌ ಖರೀದಿಸಲು ಕೂಡ ಸಾರ್ವಕರ್‌ ನೆರವಾಗಿದ್ದರು ಎಂದು ಹೇಳಿದ್ದಾರೆ.

ನೀವು ಹಿಂದಿಯಲ್ಲೇ ಮಾತನಾಡಿ ಎಂದು ವೇದಿಕೆಯಿಂದ ರಾಹುಲ್ ಗಾಂಧಿ ಭಾಷಣ ಅನುವಾದಕ ಎಸ್ಕೇಪ್!

ಬಳಿಕ ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿರುವ ತುಷಾರ್‌, ‘ನಾನು ಯಾವುದೇ ಆರೋಪ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಹೇಳುತ್ತಿದ್ದೇನೆ. ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಪ್ರಕಾರ, ನಾಥೂರಾಮ್‌ ಗೋಡ್ಸೆ (Nathuram Godse) ಹಾಗೂ ವಿನಾಯಕ ಆಪ್ಟೆ (Vinayak Apte) ಅವರು 1948ರ ಜ.26, 27ರಂದು ಸಾವರ್ಕರ್‌ ಅವರನ್ನು ಭೇಟಿ ಮಾಡಿದ್ದರು. ಅಲ್ಲಿವರೆಗೂ ಗೋಡ್ಸೆ ಬಳಿ ಗನ್‌ ಇರಲಿಲ್ಲ. ಗನ್‌ ಖರೀದಿಸಲು ಆತ ಮುಂಬೈನಲ್ಲಿ ಅಲೆದಾಡುತ್ತಿದ್ದ. ಆದರೆ ಸಾವರ್ಕರ್‌ ಭೇಟಿಯ ನಂತರ ಆತ ದೆಹಲಿ, ಅಲ್ಲಿಂದ ಗ್ವಾಲಿಯರ್‌ಗೆ (Gwalior) ತೆರಳಿದ್ದ. ಅಲ್ಲಿ ಆತನಿಗೆ ಉತ್ತಮ ಪಿಸ್ತೂಲ್‌ ಲಭಿಸಿತ್ತು. ಇದೆಲ್ಲಾ ಆಗಿದ್ದು ಬಾಪು ಅವರ ಹತ್ಯೆಯ ಎರಡು ದಿನ ಮುನ್ನ. ಇದನ್ನೇ ನಾನು ಹೇಳಿದ್ದೇನೆ. ಹೊಸದೇನನ್ನೋ ಅಲ್ಲ’ ಎಂದು ತಿಳಿಸಿದ್ದಾರೆ.


ಶಿವಸೇನೆ - ಕಾಂಗ್ರೆಸ್‌ ಮೈತ್ರಿ ಖತಂ..? ಸಾವರ್ಕರ್‌ ವಿರುದ್ಧ ಹೇಳಿಕೆ ಹಿನ್ನೆಲೆ ಉದ್ಧವ್‌ ಬಣದ ಚಿಂತನೆ