Asianet Suvarna News Asianet Suvarna News

Assembly session: ಬೆಳಗಾವಿ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್‌ ಫೋಟೋ ಅನಾವರಣ

ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಇದೇ ವೇಳೆ ಬೆಳಗ್ಗೆ 10.30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಮತ್ತು ವಿವಿಧ ನಾಯಕರನ್ನು ಒಳಗೊಂಡ 7 ಫೋಟೋಗಳನ್ನು ಸ್ಪೀಕರ್ ಅನಾವರಣ ಮಾಡಲಿದ್ದಾರೆ.

Veer Savarkar photo unveiled at Belgaum Suvarna soudha sat
Author
First Published Dec 18, 2022, 4:09 PM IST

ಬೆಂಗಳೂರು (ಡಿ.18): ನಾಳೆಯಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಇದೇ ವೇಳೆ ಬೆಳಗ್ಗೆ 10.30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಮತ್ತು ವಿವಿಧ ನಾಯಕರನ್ನು ಒಳಗೊಂಡ 7 ಫೋಟೋಗಳನ್ನು ಸ್ಪೀಕರ್ ಅನಾವರಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ನಾಳೆಯಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದ ಸಭಾಂಗಣದಲ್ಲಿ ಸಾವರ್ಕರ್ ಪೋಟೋ ಅಳವಡಿಸುವ ಮಹತ್ವದ ನಿರ್ಧಾರವನ್ನು ಬಿಜೆಪಿ ಮಾಡಿದೆ. ನಾಳೆ ಬೆಳಗ್ಗೆ ೧೦.೩೦ಕ್ಕೆ ಅಧಿವೇಶನದ ಆರಂಭದ ವೇಳೆ ವೀರ ಸಾವರ್ಕರ್‌ ಫೋಟೋವನ್ನು ಅಧಿಕೃತವಾಗಿ ಅನಾವರಣ ಮಾಡಲಾಗುತ್ತದೆ. ಸದ್ಯಕ್ಕೆ ಸಚಿವಾಲಯದಿಂದ ಸಾವರ್ಕರ್‌ ಭಾವಚಿತ್ರ ಸೇರಿದಂತೆ 7 ಪ್ರಮುಖ ಗಣ್ಯರ ಫೋಟೋಗಳಿಗೆ ಕವರ್ ಹಾಕಿ ಮುಚ್ಚಿಡಲಾಗಿದೆ. ಇನ್ನು ಸಾವರ್ಕರ್‌ ಫೋಟೋವನ್ನು ಸ್ಪೀಕರ್ ಆಸನದ ಎಡಭಾಗದಲ್ಲಿ ಅಳವಡಿಸಿದ್ದು, ಸಭಾಧ್ಯಕ್ಷರೇ ನಾಳೆ ಅನಾವರಣ ಮಾಡಲಿದ್ದಾರೆ. 

ನಾಳೆ ಬೆಳಗಾವಿ ಕಲಾಪ ಆರಂಭ: ಚುನಾವಣೆಗೆ ಮುನ್ನ ‘ಕೊನೆ’ ಅಧಿವೇಶನ

ಕಾಂಗ್ರೆಸ್‌ನಿಂದ ಗಲಾಟೆ ಸಾಧ್ಯತೆ: ಇನ್ನು ಫೋಟೋ ಅನಾವರಣೆ ವೇಳೆ ಗಲಾಟೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಇನ್ನು ಸಾರ್ವಕರ್ ಸ್ವಾತಂತ್ರ ಹೋರಾಟಗಾರ ಪೋಟೋ ಇದ್ರೆ ತಪ್ಪೇನು ಎಂದು ಬಿಜೆಪಿ ನಾಯಕರು ಕೇಳಲು ಸಿದ್ಧರಾಗಿದ್ದಾರೆ. ಬ್ರಿಟಿಷರಿಗೆ ಕ್ಷಮೆ ಕೇಳಿದ್ದರು ಎಂದು ಕಾಂಗ್ರೆಸ್ ವಾದವಾಗಲಿದೆ. ಈವರೆಗೆ ಸಾವರ್ಕರ್‌ ಜನ್ಮ ದಿನಾಚರಣೆ ಮತ್ತು ಅವರ ಭಾವಚಿತ್ರ ಬಳಕೆ ಬಗ್ಗೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಈ ವೇಳೆ ಮಹಾತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಸೇರಿ ಹಲವು ನಾಯಕರ ಫೋಟೋಗಳು ಇವೆ ಎಂದು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ.

ಬೆಳಗಾವಿ ಅಧಿವೇಶನಕ್ಕೆ ಬಿಗಿ ಬಂದೋಬಸ್ತ್: ನಾಳೆಯಿಂದ ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌ ಅನ್ನು ಒದಗಿಸುವ ದೃಷ್ಟಿಯಿಂದ ಚಿಕ್ಕಮಗಳೂರು, ಕೊಡುಗು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಡ್ರೋನ್‌ ಮೂಲಕ ಕಣ್ಗಾವಲು ಇಡಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. 

ಚಳಿಗಾಲದ ಅಧಿವೇಶನ: ಬೆಳಗಾವಿಯಲ್ಲಿ ಜ.11ರವರೆಗೆ ನಿಷೇಧಾಜ್ಞೆ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ದಕ್ಷಿಣ ಮತ್ತು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಐದು ಜನ ಐಪಿಎಸ್ ಅಧಿಕಾರಿಗಳು, ಎಂಟು ಜನ ಅಡಿಷನಲ್ ಎಸ್ಪಿ, 35 ಡಿಎಸ್ಪಿ, ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ನಿಯೋಜಿಸಿದ್ದೇವೆ. ಬೆಳಗಾವಿ ನಗರದಲ್ಲಿ 32 ಕೆಎಸ್ಆರ್‌ಪಿ ತಂಡ ನಿಯೋಜಿಸಲಾಗಿದೆ. ಕರ್ನಾಟಕದ ಗಡಿ ಭಾಗದಲ್ಲಿಯೂ ಕೂಡ ಹದ್ದಿನ‌ ಕಣ್ಣಿಟ್ಟಿದ್ದೇವೆ. ಬೇರೆ ಕಡೆಯಿಂದ ಬಂದು ಗಲಾಟೆ ಮಾಡೋರ ಹದ್ದಿನ ಕಣ್ಣಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಎಸ್ಪಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡುವವರಿಗೆ ಸುವರ್ಣ ಸೌಧದ ಹೊರ ವಲಯದ ಕೊಂಡಸಕಪ್ಪದಲ್ಲಿ ಅವಕಾಶ ಮಾಡಿದ್ದೇವೆ. ಪೊಲೀಸರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದೇವೆ. ಬೆಳಗಾವಿ ನಗರದಲ್ಲಿ ಏನಾಗ್ತಿದೆ ಎಂದು ಗಮನಿಸಲು ಆರು ಡ್ರೋನ್ ಬಳಸುತ್ತಿದ್ದೇವೆ. ಇದರಿಂದ ಇಡೀ ಬೆಳಗಾವಿಯಲ್ಲಿ ಏನಾಗ್ತಿದೆ ಎಂದು ಒಂದು ಕಡೆ ಕೂತು ನೋಡಬಹುದು. ಮಹಾಮೇಳ ನಡೆಯುತ್ತಿದ್ದ ವೇಳೆ ಯಾವುದೇ ಅಹಿತರ ಘಟನೆಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಗಡಿ ಕ್ಯಾತೆ ತೆಗೆಯುವ ಹೆಬಿಚ್ಯುವಲ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ಸುವರ್ಣ ಸೌಧ ಸುತ್ತ 1 ಕಿ.ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios