ರಾಜ್ಯ​ವನ್ನು ದುಷ್ಟಶಕ್ತಿ ಮುಕ್ತ ಮಾಡುತ್ತೇವೆ ಶಾಸಕ ಆರಗ ಜ್ಞಾನೇಂದ್ರಗೆ ಉಸ್ತು​ವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು 

ಕಲಬುರಗಿ (ಜೂ.20): ನಮ್ಮ ಸರ್ಕಾರ ಬಂದು ತಿಂಗಳಾಗಿದೆ ಅಷ್ಟೇ, ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿ ಅಷ್ಟೇ ಅಲ್ಲ, ಕರ್ನಾಟಕದಲ್ಲಿ ದುಷ್ಟಶಕ್ತಿ ಮುಕ್ತ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಶಾಸಕ ಆರಗ ಜ್ಞಾನೇಂದ್ರಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಅಕ್ರಮ ಮರುಳು ಸಾಗಾಣಿಕೆ ದಂಧೆ​ಯಲ್ಲಿ ಪೊಲೀಸ್‌ ಪೇದೆ ಸಾವನ್ನಪ್ಪಿದ್ದ ಕುರಿತು, ಮರುಳು ಮಾಫಿಯಾದ ದುಷ್ಕರ್ಮಿಗಳಿಂದ ಪೊಲೀಸ್‌ ಕಾನ್ಸಟೇಬಲ್‌ ಹತ್ಯೆ ಘಟನೆ ಅತ್ಯಂತ ಖಂಡನೀಯವಾಗಿದ್ದು ರಾಜ್ಯದಲ್ಲಿ ದುಷ್ಟಶಕ್ತಿಗಳು ಮತ್ತೆ ತಲೆ ಎತ್ತುತ್ತಿರುವುದರ ಲಕ್ಷಣವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು.

Kodagu: ಮನೆ ಸಿದ್ದವಾದರೂ ವಾಸಕ್ಕೆ ಬಾರದ ಸಂತ್ರಸ್ಥರು, ನೋಟಿಸ್ ನೀಡಿ ಮನೆ ವಾಪಸ್

ಮಾಜಿ ಗೃಹ ಸಚಿವರ ಈ ಹೇಳಿಕೆಗೆ ಟಕ್ಕರ್‌ ಕೊಟ್ಟಿರುವ ಪ್ರಿಯಾಂಕ್‌ ಖರ್ಗೆ, ಆರಗ ಜ್ಞಾನೇಂದ್ರ ಅವರೇ ದುಷ್ಟಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ? ಅಂದ ಹಾಗೆ, ಪೇದೆ ಕೊಂದವನು ನಿಮ್ಮ ಪಕ್ಷದ ಕಾರ್ಯಕರ್ತ ಎಂಬುದನ್ನು ರವಿಕುಮಾರ್‌ ಅವರನ್ನು ಕೇಳಿ ತಿಳಿದುಕೊಳ್ಳಿ. ನಿಮ್ಮದೇ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿಯರಿಗೆ ವಂಚಿಸಿ ಬ್ಲ್ಯಾಕ್ಮೇಲ್‌ ಮಾಡಿದ ದುಷ್ಟನ ಬಗ್ಗೆ ತಾವು ಮಾತನಾಡುವುದಿಲ್ಲವೇಕೆ? ಆತ ಹಿಂದೆ ನಿಮ್ಮ ಮನೆ ಮೇಲೆ ದಾಳಿ ಮಾಡಿದ ದುಷ್ಟಶಕ್ತಿಯ ಗುಂಪಿಗೆ ಸೇರಿದವನು ಎಂಬುದಕ್ಕೆ ಭಯವೇ? ಎಂದು ಪ್ರಶ್ನಿಸಿದ್ದಾರೆ.

ಹೆಂಗಸರಿಗಿಂತ ಈಗ ಗಂಡಸರೇ ಜಾಸ್ತಿ ಮೇಕಪ್‌ ಹಾಕಿಕೊಳ್ತಿದ್ದಾರೆ: ಡಿ.ಕೆ. ಶಿವಕುಮಾರ್‌

ನಮ್ಮ ಸರ್ಕಾರ ಬಂದು ತಿಂಗಳಾಗಿದೆ ಅಷ್ಟೇ, ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿ ಅಷ್ಟೇ ಅಲ್ಲ ಕರ್ನಾಟಕದಲ್ಲಿ ದುಷ್ಟಶಕ್ತಿ ಮುಕ್ತ ಮಾಡುತ್ತೇವೆ. ಕಲಬುರ್ಗಿಯಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತ ಪೇದೆಯನ್ನು ಕೊಲೆ ಮಾಡಿದ್ದಲ್ಲದೇ, ಪೊಲೀಸರಿಗೆ ಚಾಕು ಹಾಕಲು ಹೋಗಿ ಗುಂಡೇಟು ತಿಂದು ಬಂಧಿಯಾಗಿದ್ದಾನೆ. ತಾವು ಆತನಿಗೆ ಜಾಮೀನು ನೀಡಿ ಬಿಡಿಸಲು ಪ್ರಯತ್ನಿಸದಿದ್ದರೆ ಸಾಕು, ಅದೇ ತಾವು ಕರ್ನಾಟಕಕ್ಕೆ ಮಾಡುವ ಉಪಕಾರ ಎಂದು ವ್ಯಂಗ್ಯವಾಡಿದ್ದಾರೆ.