ಮೈಸೂರಿನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಇದು ದೇಶದ ಹಬ್ಬ. ಸರ್ವರಿಗೂ ಶಕ್ತಿ ಕೊಟ್ಟ ದಿನವಿದು. ಕಾಂಗ್ರೆಸ್ ಸಿದ್ಧಾಂತ, ಕಾಂಗ್ರೆಸ್ ತತ್ವ ಇಡೀ ದೇಶದಲ್ಲಿ ಅಡಗಿದೆ. ಕಾಂಗ್ರೆಸ್ ಶಕ್ತಿಯೆ ಈ ದೇಶದ ಶಕ್ತಿ. ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಯತ್ನ ಈಗ ಕೆಲವರಿಂದ ನಡೆದಿದೆ ಎಂದಿದ್ದಾರೆ.
ಮೈಸೂರು (ಜ.26): ಮೈಸೂರು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಇದು ದೇಶದ ಹಬ್ಬ. ಸರ್ವರಿಗೂ ಶಕ್ತಿ ಕೊಟ್ಟ ದಿನವಿದು. ಕಾಂಗ್ರೆಸ್ ಸಿದ್ಧಾಂತ, ಕಾಂಗ್ರೆಸ್ ತತ್ವ ಇಡೀ ದೇಶದಲ್ಲಿ ಅಡಗಿದೆ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿಯೆ ಈ ದೇಶದ ಶಕ್ತಿ. ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಯತ್ನ ಈಗ ಕೆಲವರಿಂದ ನಡೆದಿದೆ. ಈ ದೇಶದ ಸಂವಿಧಾನ ಬದಲಾಯಿಸಲು ಕೆಲವರು ಹೊರಟ್ಟಿದ್ದಾರೆ. ರಾಷ್ಟ್ರೀಯ ಭಾಷೆಯನ್ನು ಎಲ್ಲ ಕಡೆ ಹೇರುವ ಯತ್ನ ನಡೆದಿದೆ. ಆದರೆ ಅದಕ್ಕೆ ನಾವು ಅವಕಾಶ ಕೊಟ್ಟಿಲ್ಲ. ಸ್ಥಳೀಯ ಭಾಷೆಗಳು ಬಹಳ ಮುಖ್ಯ. ರಾಷ್ಟ್ರೀಯ ಭಾಷೆಗೆ ನಮ್ಮ ಗೌರವವಿದೆ. ಈ ದೇಶಕ್ಕೆ ಭಾತೃತ್ವ, ಐಕ್ಯತೆ ವಿಚಾರದಲ್ಲಿ ಕಳಂಕ ಬರುತ್ತಿದೆ. ಇದನ್ನು ಇಡೀ ದೇಶದ ಜನರ ಗಮನಕ್ಕೆ ತರಲು ಭಾರತ್ ಜೋಡೋ ಯಾತ್ರೆ ನಡೆದಿದೆ. ಒಕ್ಕೂಟದ ವ್ಯವಸ್ಥೆಗೆ ಗೌರವ ಕೊಡಬೇಕು. ಭಾರತದಲ್ಲಿ ಸೌಹಾರ್ದತೆ, ಶಾಂತಿ, ಐಕ್ಯತೆ ಮರು ಸ್ಥಾಪನೆಗೆ ದೇಶಕ್ಕೆ ಕಾಂಗ್ರೆಸ್ ಬಹಳ ಅವಶ್ಯಕತೆ ಇದೆ. ಕೋಮು ಶಕ್ತಿಗಳ ಅಡಗಿಸಲು ನಾವೆಲ್ಲಾ ಒಟ್ಟಾಗಿ ಹೋರಾಡಬೇಕು ಎಂದಿದ್ದಾರೆ.
ಮೋದಿ, ಶಾ ಯಾರೇ ಬರಲಿ, ಕೋಲಾರದಲ್ಲಿ ಗೆಲವು ನನ್ನದೇ: ಸಿದ್ದರಾಮಯ್ಯ ಗುಟುರು
ದೇಶದಲ್ಲಿ ಗಣತಂತ್ರವೇ ಈಗ ಅಪಾಯದಲ್ಲಿದೆ: ಸುರ್ಜೇವಾಲ
ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಗಣತಂತ್ರದ ಈಗ ದೇಶದಲ್ಲಿ ಇದೆಯಾ? ಎಂಬ ಪ್ರಶ್ನೆ ಮೂಡಿದೆ. ಇದು ಈ ದಿನದ ಗಣತಂತ್ರ ಮಾತ್ರನಾ? ದೇಶದಲ್ಲಿ ಗಣತಂತ್ರವೇ ಈಗ ಅಪಾಯದಲ್ಲಿದೆ. ಸಮಾನತೆ, ಭಾತೃತ್ವ, ಐಕ್ಯತೆ, ಸರ್ವರ ರಕ್ಷಣೆಯೆ ಗಣತಂತ್ರದ ಉದ್ದೇಶ. ಗಣತಂತ್ರದ ಉದ್ದೇಶ, ಆಶಯಗಳಿಗೆ ಗೌರವ ಸಿಗದೆ ಇದ್ದರೆ ಗಣರಾಜ್ಯೋತ್ಸವ ಮಾಡಿ ಏನೂ ಪ್ರಯೋಜನ. ಏಕೆ ಜನವರಿ 26 ಯಾಕೆ ಸಂವಿಧಾನವನ್ನು ಈ ದೇಶ ಒಪ್ಪಿಕೊಂಡಿತು ಹೇಳಿ? ಎಂದು ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನಿಸಿದ ಸುರ್ಜೇವಾಲ. ಆದರೆ ಯಾವ ಕಾರ್ಯಕರ್ತರಿಂದಲೂ ಸುರ್ಜೇವಾಲ ಪ್ರಶ್ನೆಗೆ ಬಾರದ ಉತ್ತರ. ತಮ್ಮ ಪ್ರಶ್ನೆಗೆ ನಂತರ ತಾವೇ ಉತ್ತರ ಕೊಟ್ಟ ಸುರ್ಜೆವಲಾ. ಜಾತಿ, ಧರ್ಮ ಒಡೆದು ಯಾವತ್ತೂ ಕಾಂಗ್ರೆಸ್ ಆಡಳಿತ ಮಾಡಲಿಲ್ಲ. ಈಗ ಅಧಿಕಾರದಲ್ಲಿ ಇರುವವರಿಗೆ ಸಂವಿಧಾನದ ಮೂಲ ಆಶಯದ ಬಗ್ಗೆಯೆ ನಂಬಿಕೆ ಇಲ್ಲ. ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆಗೆ ನಾವೆಲ್ಲಾ ಹೋರಾಡೋಣ ಎಂದರು.
ಮುಸ್ಲಿಮರ ಜೊತೆ ಭ್ರಾತೃತ್ವ ಇರಲಿ ಎಂದ ಮೋದಿ ಹೇಳಿಕೆಗೆ ಹರಿಪ್ರಸಾದ್ ಗರಂ
ಈ ಬಾರಿಯ ಚುನಾವಣೆ ಗಾಂಧಿಜೀ ಅವರ ಅಹಿಂಸಾ ವಿಚಾರಧಾರೆ ಮತ್ತು ಅವರನ್ನು ಕೊಂದ ಹಿಂಸೆಯ ನಡುವಿನ ಚುನಾವಣೆ. ಅಹಿಂಸೆ ಸಾರಿದ ಗಾಂಧಿ ಬೇಕಾ? ಅವರನ್ನು ಕೊಂದ ಗೋಡ್ಸೆ ಬೇಕಾ? ನಿರ್ಧರಿಸುವ ಚುನಾವಣೆ. ಎಂದು ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಮುಸ್ಲಿಮರ ಜೊತೆ ಭ್ರಾತೃತ್ವ ಇರಲಿ ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಹರಿಪ್ರಸಾದ್. ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಚುನಾವಣೆ ಹಿನ್ನೆಲೆಯಲ್ಲಿ ಇದು ಮೋದಿಯವರ ಮೊಸಳೆ ಕಣ್ಣೀರಿನಂತಿದೆ. ಅವರ ಪಕ್ಷ ಅಧ್ಯಕ್ಷ ಈಗಾಗಲೇ ಹೇಳಿದ್ದಾರೆ. ಇದು ರಸ್ತೆ ಅಭಿವೃದ್ಧಿ ವಿಚಾರ ಬೇಕಿಲ್ಲ. ಏನಿದ್ದರು ಲವ್ ಜಿಹಾದ್ ಧರ್ಮದ ವಿಚಾರದ ಚುನಾವಣೆ ಅಂತಾ. ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಮೈಸೂರಿನಲ್ಲಿ ಬಿ ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
