ವಿಕಿಪೀಡಿಯಾದದಲ್ಲಿ ಭ್ರಷ್ಟಾಚಾರ ಎಂದು ಸರ್ಚ್ ಮಾಡಿದಲ್ಲಿ ಕಾಂಗ್ರೆಸ್‌ನ ಹೆಸರು ಬರುತ್ತದೆ. ದೇಶದಲ್ಲಿ ಕಾಂಗ್ರೆಸ್‌ನ ಶೇ.98% ಜನರು ಅಪರಾಧಿ (convict) ಆಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಹೇಳಿದ್ದಾರೆ.

ಬೆಂಗಳೂರು (ಜ.26): ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಬಿಜೆಪಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ವಿಕಿಪೀಡಿಯಾದದಲ್ಲಿ ಭ್ರಷ್ಟಾಚಾರ ಎಂದು ಸರ್ಚ್ ಮಾಡಿದಲ್ಲಿ ಕಾಂಗ್ರೆಸ್‌ನ ಹೆಸರು ಬರುತ್ತದೆ. ದೇಶದಲ್ಲಿ ಕಾಂಗ್ರೆಸ್‌ನ ಶೇ.98% ಜನರು ಅಪರಾಧಿ (convict) ಆಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಅಮಿತ್‌ ಶಾ ರಾಜ್ಯ ಪ್ರವಾಸದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ನಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಭ್ರಷ್ಟಾಚಾರದ ಗಂಗೋತ್ರಿ ಆಗಿದೆ. ಈಗಲೂ ವಿಕಿಪೀಡಿಯಾದಲ್ಲಿ ಭ್ರಷ್ಟಾಚಾರದ ಬಗ್ಗೆ ಹುಡುಕಾಡಿದರೆ ಕಾಂಗ್ರೆಸ್‌ ಹೆಸರು ಬರುತ್ತದೆ. ಅವರಲ್ಲಿ ಬಹುತೇಕರು ಅಪರಾಧಿಗಳು ಆಗಿದ್ದಾರೆ. ಜೀಪ್ ಹಗರಣದಿಂದ ಹಿಡಿದು ಇತರೆ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿ ಹಗರಣದಲ್ಲಿ ಕಾಂಗ್ರೆಸ್ ಭಾಗಿಯಾಗಿದೆ ಎಂದು ಆರೋಪಿಸಿದರು.

ಸಿದ್ದು ಆಡಳಿತದ 59 ಪ್ರಕರಣ ಲೋಕಾಯುಕ್ತ ತನಿಖೆಗೆ: ಸಿಎಂ ಬೊಮ್ಮಾಯಿ

ಬಿಜೆಪಿ ಜೀರೋ ಕರೆಪ್ಷನ್ ಆಗಿದೆ: ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ಅಧಿಕಾರಕ್ಕೆ ಬಂದ ಒಂಭತ್ತೇ ತಿಂಗಳಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕರೆಪ್ಷನ್ ವಿಚಾರದಲ್ಲಿ ಬಿಜೆಪಿ ನೋ ಟಾಲೆರೆನ್ಸ್, ಜೀರೋ ಕರೆಪ್ಷನ್ ಆಗಿದೆ. 'ನಾ ಖಾವೂಂಗಾ, ನಾ ಖಾನೇದೂಂಗಾ' ಎನ್ನುವ ನಿಯಮವನ್ನು ನಮ್ಮ ನಾಯಕರು ಹೇಳಿದ್ದಾರೆ. ನಾವು ಅದೇ ಮಾರ್ಗದಲ್ಲಿ ನಾವೆಲ್ಲರೂ ಹೋಗುತ್ತಿದ್ದೇವೆ. 

ಮೋದಿ, ಅಮಿತ್ ಷಾರನ್ನು 10 ಸಲ ಕರೆಸ್ಕೋತೇವೆ: ಇನ್ನು ರಾಜ್ಯದ ಮುಂಬರುವ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ 100 ಸಲ ಬಂದರೂ ಬಿಜೆಪಿ ಗೆಲ್ಲಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಜೈಲಿಗೆ ಹೋಗಿ ಬಂದಿರುವ ಅಮಿತ್ ಷಾ ಎನ್ನುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಜಗತ್ತೇ ಒಪ್ಪಿಕೊಂಡಿದೆ. ಅವರು ಏನು ಎಂದು ಸಿದ್ದರಾಮಯ್ಯ ಹೇಳುವ ಬಗ್ಗೆ ಅಗತ್ಯವಿಲ್ಲ. ಮೋದಿ, ಅಮಿತ್ ಷಾರನ್ನು ಇನ್ನೂ 10 ಸಲ ರಾಜ್ಯಕ್ಕೆ ಕರೆಸ್ಕೋತೇವೆ. ಅವರು ನಮ್ಮ ರಾಷ್ಟ್ರೀಯ ನಾಯಕರು. ಎಲ್ಲರೂ ಬರ್ತಾರೆ, ಎಲ್ಲರೂ ಒಗ್ಗೂಡಿ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು. 

ರಮೇಶ್‌ ಜಾರಕಿಹೊಳಿ ಅಸಮಾಧಾನ ತೋರಿಸಿಲ್ಲ: ರಾಜ್ಯ ರಾಜಕಾರಣದಲ್ಲಿ ರಮೇಶ್‌ ಜಾರಕಿಹೊಳಿ ಅವರು ಪಕ್ಷದ ಬಗ್ಗೆ ಎಲ್ಲಿಯೂ ಅಸಮಾಧಾನ ತೋರಿಸಿಲ್ಲ. ಬೆಳಗಾವಿ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಭಾಗಿಯಾಗುತ್ತಾರೆ. ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದಾರೆ. ಬೆಳಗಾವಿಯ ನಾಯಕರಾದ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಣ ಸವದಿ ಎಲ್ಲರೂ ಒಟ್ಟಾಗಿ ಭಾಗಿಯಾಗ್ತಾರೆ. ಮತದಾರರಿಗೆ ರಮೇಶ್ ಜಾರಕಿಹೊಳಿ ಆಮಿಷ ವಿಚಾರದ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಆಸೆ ಆಮಿಷ ಕೊಡೋದನ್ನು ಬಿಜೆಪಿ ಮಾಡಲ್ಲ. ಆದರೆ, ಕಾಂಗ್ರೆಸ್‌ನವರು ಮೊದಲು ಕುಕ್ಕರ್ ಹಂಚೋದನ್ನು ಅವರು ನಿಲ್ಲಿಸಲಿ. ಕುಕ್ಕರ್ ಎಲ್ಲಿಂದ ಬರುತ್ತಿದೆ ಎಂದು ಮೊದಲು ಸ್ಪಷ್ಟನೆ ಕೊಡಲಿ. ನಂತರ ನಾವು ಜಾರಕಿಹೊಳಿ‌ ಹೇಳಿಕೆ ಬಗ್ಗೆ ಮಾತನಾಡುತ್ತೇವೆ ಎಂದು ತಿಳಿಸಿದರು.

ಸುಧಾಕರ್‌ 1 ಸವಾಲಿಗೆ ನಲುಗಿದ ಕಾಂಗ್ರೆಸ್‌: ಸಿಎಂ ಬೊಮ್ಮಾಯಿ

ಅಮಿತ್ ಶಾ ಅವರ ಜ.28 ಕಾರ್ಯಕ್ರಮ ವಿವರ: ನಾಳೆ (ಜ.27ರಂದು) ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹುಬ್ಬಳ್ಳಿಗೆ ಆಗಮಿಸಿ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನಂತರ ಜ.28 ರಂದು ಬಿವಿವಿ ಕಾಲೇಜು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಧಾರವಾಡದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕುಂದುಗೋಳದಲ್ಲಿ ವಿಜಯಸಂಕಲ್ಪ ಅಭಿಯಾನದಲ್ಲಿ ಶಾ ಭಾಗಿಯಾಗಲಿದ್ದು, ಅಲ್ಲಿನ ಪುರಾತನ ದೇವಸ್ಥಾನವಾದ ಶಂಭುಲಿಂಗ ದೇವಾಲಯ ಭೇಟಿ ನೀಡುತ್ತಿದ್ದಾರೆ. ಬಳಿಕ ಪಕ್ಷದ ವಾಲ್ ಪೆಟಿಂಗ್ ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ 1.5km ರೋಡ್ ಶೋ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಿಸ್ಡ್ ಕಾಲ್ ಅಭಿಯಾನಕ್ಕೆ ಚಾಲನೆ: ವೇದಿಕೆ ಕಾರ್ಯಕ್ರಮ, ರೋಡ್‌ ಶೋ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಅಮಿತ್‌ ಶಾ ಅವರು ಹುಬ್ಬಳ್ಳಿ ಸಾರ್ವಜನಿಕ ಸಮಾವೇಶದಲ್ಲಿ ಮಿಸ್ಡ್‌ ಕಾಲ್‌ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಜನಸಂಕಲ್ಪ ಯಾತ್ರೆಯನ್ನು ಮಾಡಲಾಗುತ್ತದೆ. ನಂತರ ಕಿತ್ತೂರಿನಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಅಮಿತ್‌ ಶಾ ಭಾಗಿಯಾಗಲಿದ್ದಾರೆ. ಇಲ್ಲಿನ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಬಳಿಕ ಬೆಳಗಾವಿ ಜಿಲ್ಲೆಯ ಪಕ್ಷದ ಪ್ರಮುಖರ ಸಭೆ ನಡೆಯಲಿದೆ ಎಂದು ಮಹೇಶ್‌ ಕುಮಟಹಳ್ಳಿ ತಿಳಿಸಿದ್ದಾರೆ.