80 ವರ್ಷ ಮೇಲ್ಪಟ್ಟವರಿಂದ ಮತದಾನ ಆರಂಭ: ಕಲಬುರಗಿ ಜಿಲ್ಲೆಯಲ್ಲಿ 1011 ಮತದಾನ

80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರಿಗೆ  ಮನೆಯಿಂದಲೇ ಮತದಾನ ಮಾಡುವ ಅವಕಾಶ ಇದೇ ಮೊದಲ ಬಾರಿಗೆ ನೀಡಲಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇಂದು ಮತದಾನ ಬಿರುಸಿನಿಂದ ನಡೆದಿದೆ. 
 

Voting starts from above 80 years 1011 polling in Kalaburagi district Says DC Yeshwanth V Gurukar gvd

ಕಲಬುರಗಿ (ಏ.30): 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರಿಗೆ  ಮನೆಯಿಂದಲೇ ಮತದಾನ ಮಾಡುವ ಅವಕಾಶ ಇದೇ ಮೊದಲ ಬಾರಿಗೆ ನೀಡಲಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇಂದು ಮತದಾನ ಬಿರುಸಿನಿಂದ ನಡೆದಿದೆ.  80 ವರ್ಷ ಮೇಲ್ಪಟ್ಟ 835 ಮತ್ತು 176 ವಿಶೇಷಚೇತನರು  ಸೇರಿ ಒಟ್ಟು 1011 ಮತದಾರರು ಇಂದು ಮನೆಯಿಂದಲೆ‌ ಅಂಚೆ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಮತದಾನ‌ ಪ್ರಮಾಣ‌ ಹೆಚ್ಚಿಸಬೇಕು ಮತ್ತು ಪ್ರಜಾಪ್ರಭುತ್ವ ಹಬ್ಬದಲ್ಲಿ ಸರ್ವರು ಭಾಗಿಯಾಗಬೇಕು ಎಂಬ ಪರಿಕಲ್ಪನೆಯಿಂದ ಚುನಾವಣಾ ಆಯೋಗವು ಈ ಬಾರಿ 80 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನ ಮತದಾರರು ಇಚ್ಚಿಸಿದಲ್ಲಿ ಮನೆಯಿಂದ ಅಂಚೆ‌ ಮತ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ  ಜಿಲ್ಲೆಯಾದ್ಯಂತ ಇಂದಿನಿಂದ ಅಂಚೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ ವೃದ್ಧರು ಮತ್ತು ವಿಶೇಷಚೇತನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕ್ಷೇತ್ರವಾರು ಮತದಾನದ ವಿವರ: ಆಳಂದನಲ್ಲಿ 80 ವರ್ಷ ಮೇಲ್ಪಟ್ಟ 17 ಮತ್ತು 11 ಜನ ವಿಶೇಷಚೇತನರು ಮತ ಚಲಾಯಿಸಿದರು. ಅದೇ ರೀತಿ ಚಿಂಚೋಳಿಯಲ್ಲಿ 80 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನರು ಕ್ರಮವಾಗಿ 151 ಮತ್ತು 26, ಚಿತ್ತಾಪುರದಲ್ಲಿ 7 ಮತ್ತು 6,  ಗುಲಬರ್ಗಾ ಗ್ರಾಮೀಣದಲ್ಲಿ 106 ಮತ್ತು 26, ಗುಲಬರ್ಗಾ ಉತ್ತರದಲ್ಲಿ 61 ಮತ್ತು 7, ಜೇವರ್ಗಿಯಲ್ಲಿ 118 ಮತ್ತು   42, ಅಫಜಲಪೂರನಲ್ಲಿ 174 ಮತ್ತು 28 ಸೇಡಂನಲ್ಲಿ 147 ಮತ್ತು 23 ಹಾಗೂ ಗುಲಬರ್ಗಾ ದಕ್ಷಿಣದಲ್ಲಿ 54 ಮತ್ತು 7 ಜನ ಮತ ಚಲಾಯಿಸಿದರು.

ಮನೆಯಲ್ಲಿಯೇ ಮತದಾನಕ್ಕೆ ಅವಕಾಶ, ಒಳ್ಳೆದಾಯಿತು: ಅಫಜಲಪೂರ ಕ್ಷೇತ್ರದ ಕೋಗನೂರ ಗ್ರಾಮದ ಸಿದ್ದಪ್ಪ ತಮಗೆ ನಡೆಯಲು ಕಷ್ಟವಾಗುತ್ತದೆ. ಮತದಾನ‌ ದಿನದಂದು ₹ 100 ಕೊಟ್ಟು ಮತದಾನಕ್ಕೆ ತೆರಳಬೇಕಿತ್ತು. ಮನೆಯಿಂದಲೆ‌ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ತುಂಬಾ ಉಪಕಾರಿಯಾಗಿದೆ ಎಂದು ಸಂತಸದ‌ ನುಡಿಗಳನ್ನಾಡಿದರು ಇನ್ನು ಇದೇ ಕ್ಷೇತ್ರದ ನೀಲೂರ ಗ್ರಾಮದ ವಯೋವೃದ್ಧೆ ಬಬಲಾಬಾಯಿ ಮತದಾನದ ನಂತರ ಮಾತನಾಡಿ, ತನಗೆ ಕಾಲು ಬೇನೆ ಇದ್ದು, ಮಗಟ್ಟೆಗೆ ಹೋಗಕ್ಕೆ ಆಗ್ತಿರಲಿಲ್ಲ. ಮನೆಯಲ್ಲೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು ಅನುಕೂಲವಾಗಿದೆ ಎಂದರು

ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ

ಕಲಬುರಗಿ ಜಿಲ್ಲೆಯಾದ್ಯಂತ 80 ವರ್ಷ ಮೇಲ್ಪಟ್ಟ 42,000 ಜನ‌ ಮತದಾರರಿದ್ದು,‌ ಇದರಲ್ಲಿ 1,387 ಜನ ಮತ್ತು‌‌ 4,000 ವಿಶೇಷಚೇತನರ ಪೈಕಿ 274 ಜನ ಮನೆಯಿಂದಲೆ‌ ಮತದಾನ ಮಾಡುವುದಾಗಿ  ತಿಳಿಸಿದ್ದರಿಂದ ಇಂದು ಬೆಳಿಗ್ಗೆಯೆ ಮತಗಟ್ಟೆ‌ ಅಧಿಕಾರಿಗಳು, ಮೈಕ್ರೋ ವೀಕ್ಷಕರು, ವಿಡಿಯೋಗ್ರಾಪರ್, ಪೊಲೀಸ್ ಒಳಗೊಂಡ ಒಟ್ಟು 69 ತಂಡ‌ಗಳು 9 ವಿಧಾನಸಭಾ ಕ್ಷೇತ್ರದಲ್ಲಿ 80+ ಮತ್ತು ವಿಶೇಷಚೇತನ ಮತದಾರರ ಮನೆಯತ್ತ ಹೆಜ್ಜೆ ಹಾಕಿ, ಮನೆಯಲ್ಲಿಯೆ ಒಂದು ಕಂಪಾರ್ಟ್ ಮೆಂಟ್ ಮಾಡಿ ಮತದಾರರಿಂದ ಅಂಚೆ ಮತದಾನ ಮಾಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios