ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕನ್ಫ್ಯೂಸ್, ಕಾಪಿ ಪೇಸ್ಟ್ ಹಾಗೂ ಕೋಲ್ಡ್ ಸ್ಟೋರೇಜ್ ಆಗಿರುವ ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಏ.29): ಕನ್ಫ್ಯೂಸ್, ಕಾಪಿ ಪೇಸ್ಟ್ ಹಾಗೂ ಕೋಲ್ಡ್ ಸ್ಟೋರೇಜ್ ಆಗಿರುವ ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಪರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಇತ್ತೀಚೆಗೆ ಕಾಂಗ್ರೆಸ್‌ನವರು, ಹಿರಿಯೂರಿಗೆ ಗಾಂಧಿ ಕುಟುಂಬದ ಕುಡಿ ಪ್ರಿಯಾಂಕಾ ಅವರನ್ನು ಕರೆಸಿ ಪೂರ್ಣಿಮಾ ವಿರುದ್ಧ ಪ್ರಚಾರ ಮಾಡಿಸಿದ್ದಾರೆ. ಆದರೆ ಪ್ರಿಯಾಂಕಾ ಪ್ರಚಾರ ಈ ಕ್ಷೇತ್ರದಲ್ಲಿ ಲೆಕ್ಕಕ್ಕೆ ಬರೋದಿಲ್ಲ.
ಯಾಕಂದ್ರೆ ಪ್ರಿಯಾಂಕಾ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಮಾತಾಡಿದ್ದಾರೆ. ಅವರ ಕಾಂಗ್ರೆಸ್ ಪಕ್ಷಕ್ಕೆ ವಾರಂಟಿ ಇಲ್ಲದಿರುವಾಗ ಗ್ಯಾರಂಟಿ ಇನ್ನೆಲ್ಲಿದೆ ಅಂತ ಟಾಂಗ್ ಕೊಟ್ಟರು. ಅಲ್ಲದೇ ದೇಶದಲ್ಲಿ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತಿದ್ದೂ,ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ರೈತರ ಪರ ಕೆಲಸ ಮಾಡಲಿಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ ರೈತರ ಪಟ್ಟಿ ಸಹ ಕೊಟ್ಟಿರಲಿಲ್ಲ. ಈಗಾಗಲೇ ದೇಶದಲ್ಲಿ ಗ್ಯಾರಂಟಿ ಕಳೆದುಕೊಂಡಿದೆ.
ಉಡುಪಿಯಲ್ಲಿ ಅಮಿತ್ ಶಾ ಬಿರುಸಿನ ಪ್ರಚಾರ: ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು
ರಾಜ್ಯದ ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳನ್ನೇ ಕಾಂಗ್ರೆಸ್ ಕಾಪಿ ಪೇಸ್ಟ್ ಮಾಡ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಭಾಷಣದ ವೇಳೆ ಕಾಪಿ ಪೇಸ್ಟ್‌ಮಾಡಿದ್ರು.ರಾಹುಲ್ ಗಾಂಧಿ ಭಾಷಣದಲ್ಲೇ ಗೊಂದಲವಿತ್ತು.ಮಾಜಿ ಸಚಿವರ ಬಳಿ ಹಿಂದೆ ತಿರುಗಿ ತಿರುಗಿ ಕೇಳಿ ಮಾತಾಡ್ತಾರೆ.ಒಮ್ಮೆ 200ಕೋಟಿ ಅಂದರೆ ಮತ್ತೊಮ್ಮೆ 2ಸಾವಿರ ಕೋಟಿ ಅಂತಾ ಗೊಂದಲಕ್ಕೀಡಾಗಿರುವ ಅವರು ಜನರಲ್ಲಿನ ಗೊಂದಲವನ್ನು ಹೇಗೆ ಬಗೆಹರಿಸುತ್ತಾರೆ ಅಂತ ವಾಗ್ದಾಳಿ ನಡೆಸಿದ್ರು.
ಮಸಾಲಾ ಜಯರಾಂ ಸಚಿವರಾಗುವುದು ನಿಶ್ಚಿತ: ರಾಜ್ಯಸಭಾ ಸದಸ್ಯ ಜಗ್ಗೇಶ್
ಹಾಗೆಯೇ ಕೊರೊನಾ ಸಂಕಷ್ಟ ಕಾಲದಲ್ಲಿ ಮೋದಿ ಜನರೊಂದಿಗಿದ್ದೂ,ಸೂಕ್ತ ಚಿಕಿತ್ಸೆ, ಲಸಿಕೆ ಮೂಲಕ ಜನರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡ ಪರಿಣಾಮ ದೇಶಸುರಕ್ಷಿತವಾಗಿದೆ.ಆ ವೇಳೆ ರಾಹುಲ್ ಗಾಂಧಿ ಕೈಲಿ ಅಧಿಕಾರ, ಸೋನಿಯಾಗಾಂಧಿ ಬಳಿ ರಿಮೋಟ್ ಇದ್ದಿದ್ದರೆ, ಉಚಿತ ಲಸಿಕೆ ನಿಮಗೆ ಸಿಗಲು ಸಾಧ್ಯವಿತ್ತೆ ಎಂದು ಪ್ರಶ್ನಿಸಿದ್ದೂ,ಈ ಬಾರಿ ಕಾಂಗ್ರೆಸ್ ಗೆ ಇಂಜೆಕ್ಷನ್ ಕೊಟ್ಟು ಮನೆಗೆ ಕಳಿಸಿ,ಪ್ರೋಗ್ರೆಸ್ ಹಾಗು ವಿಕಾಸ್ ಆಗಲು ಬಿಜೆಪಿ ಗೆಲ್ಲಿಸಿ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.