ಜನ​ಪರ ಆಡ​ಳಿತ ನೀಡು​ತ್ತಿ​ರುವ ಬಿಜೆಪಿ ಪಕ್ಷವು ಮುಂದಿನ ವಿಧಾ​ನ​ಸಭಾ ಚುನಾ​ವ​ಣೆ​ಯ​ಲ್ಲಿ ಸ್ಪಷ್ಟಬಹು​ಮತದೊಂದಿಗೆ ರಾಜ್ಯ​ದ​ಲ್ಲಿ ಮತ್ತೆ ಅಧಿ​ಕಾ​ರಕ್ಕೆ ಬರಲು ಕನ​ಕ​ಪುರ ಕ್ಷೇತ್ರದ ಮತ​ದಾ​ರರು ಮುನ್ನುಡಿ ಬರೆ​ಯ​ಬೇಕು ಎಂದು ಕಂದಾಯ ಸಚಿವ ಆರ್‌.ಅ​ಶೋಕ್‌ ಮನವಿ ಮಾಡಿ​ದರು.

ಕನ​ಕ​ಪುರ (ಮಾ.06): ಜನ​ಪರ ಆಡ​ಳಿತ ನೀಡು​ತ್ತಿ​ರುವ ಬಿಜೆಪಿ ಪಕ್ಷವು ಮುಂದಿನ ವಿಧಾ​ನ​ಸಭಾ ಚುನಾ​ವ​ಣೆ​ಯ​ಲ್ಲಿ ಸ್ಪಷ್ಟ ಬಹು​ಮತದೊಂದಿಗೆ ರಾಜ್ಯ​ದ​ಲ್ಲಿ ಮತ್ತೆ ಅಧಿ​ಕಾ​ರಕ್ಕೆ ಬರಲು ಕನ​ಕ​ಪುರ ಕ್ಷೇತ್ರದ ಮತ​ದಾ​ರರು ಮುನ್ನುಡಿ ಬರೆ​ಯ​ಬೇಕು ಎಂದು ಕಂದಾಯ ಸಚಿವ ಆರ್‌.ಅ​ಶೋಕ್‌ ಮನವಿ ಮಾಡಿ​ದರು. ನಗರಕ್ಕೆ ಆಗಮಿಸಿದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಮಾತ​ನಾ​ಡಿದ ಅವರು, ಕನಕಪುರ ಕ್ಷೇತ್ರಕ್ಕೆ ನಮ್ಮ ಪಕ್ಷದ ಅಭ್ಯರ್ಥಿ ಯಾರೇ ಆದರೂ ಮತದಾರರ ಬಂಧುಗಳು, ಪಕ್ಷದ ಕಾರ್ಯಕರ್ತರು ಯಾರಿಗೂ ಅಂಜದೆ ಭಯಪಡದೇ ಧೈರ್ಯದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ನೋಡಿ ಪಕ್ಷದ ಅಭ್ಯರ್ಥಿಗೆ ಮತವನ್ನು ನೀಡುವಂತೆ ಕರೆ ನೀಡಿದರು,

ಕೇಂದ್ರ​ದಲ್ಲಿ ಪ್ರಧಾನಿ ನರೇಂದ್ರ ಮೋದಿ​ರ​ವರ ಸದೃಢ ನಾಯ​ಕತ್ವ, ಜನ​ಪರ ಆಡ​ಳಿತ ಹಾಗೂ ರಾಜ್ಯ​ದಲ್ಲಿ ಯಡಿ​ಯೂ​ರಪ್ಪ, ಬಸ​ವ​ರಾಜ ಬೊಮ್ಮಾಯಿರವರ ನೇತೃ​ತ್ವ​ದಲ್ಲಿ ನೀಡಿ​ರುವ ಜನ​ಪರ ಯೋಜ​ನೆ​ಗ​ಳನ್ನು ಬೆಂಬ​ಲಿಸಿ ರಾಜ್ಯದ ಜನ​ರು ಬಿಜೆ​ಪಿಗೆ ಆಶೀ​ರ್ವಾದ ಮಾಡು​ವರು. ಸ್ಪಷ್ಟಬಹು​ಮ​ತ​ದೊಂದಿಗೆ ಬಿಜೆಪಿ ಅಧಿ​ಕಾ​ರಕ್ಕೆ ಬರು​ವುದು ಶತ​ಸಿದ್ಧ ಎಂದರು. ಕಳೆದ ಬಾರಿ ನಮ್ಮ ಪಕ್ಷಕ್ಕೆ ಸ್ಪಷ್ಟಬಹುಮತ ಬಾರದ ಹಿನ್ನೆಲೆಯಲ್ಲಿ ಈ ಜಿಲ್ಲೆಯ ಇಬ್ಬರು ಮಹಾನ್‌ ನಾಯಕರು ಜೋಡೆತ್ತುಗಳಂತೆ ಕೈ ಎತ್ತಿ ಸರ್ಕಾರ ರಚಿಸಿದ್ದರು. ಕೊಟ್ಟಕುದುರೆಯನ್ನು ​ಏ​ರಲಾರದೆ ತಮ್ಮ ಶಾಸಕರ ವಿಶ್ವಾಸವನ್ನು ಕಳೆದುಕೊಂಡು ಕುಂಟೆತ್ತಿನಂತೆ 14 ತಿಂಗಳಲ್ಲಿ ಸರ್ಕಾರ ಕಳೆ​ದು​ಕೊಂಡರು.

ಬಿ​ಜೆ​ಪಿ ಗೆಲು​ವಿನ ಅಶ್ವಮೇಧ ಕುದುರೆ ನಿಲ್ಲಿಸಿ ತೋರಿ​ಸಲಿ: ಕಟೀಲ್‌ ಸವಾಲು

ರಾಜ್ಯದಲ್ಲಿ ಎ ಟೀಮ್‌, ಬಿ ಟೀಮ್‌ ನಂತಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಕ್ಕೆ ಜನತೆ ಮತ ನೀಡಿದರೆ ಸುಭದ್ರವಾದ ಸರ್ಕಾರ ರಚನೆ ಮರೀಚಿಕೆ ಆಗಲಿದೆ. ಮತ್ತೆ ಆರು ತಿಂಗಳಿಗೆ ಚುನಾವಣೆಗೆ ಹೋಗುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಆದ್ದ​ರಿಂದ ಎಚ್ಚರಿಕೆಯಿಂದ ಮತದಾನ ಮಾಡಬೇಕು. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದ್ದು ಕನಕಪುರ ಕ್ಷೇತ್ರದ ಮತದಾರರು ನಮ್ಮ ಪಕ್ಷವನ್ನು ಬೆಂಬಲಿಸುವ ಮೂಲಕ ಹೊಸ ಬದಲಾವಣೆಗೆ ಕೈಜೋಡಿಸುವಂತೆ ಮನವಿ ಮಾಡಿದರು. 50-60 ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತರದೇ ಲೂಟಿ ಮಾಡುವುದರಲ್ಲೇ ಮಗ್ನವಾಗಿತ್ತು. 

ಇದರ ಫಲವಾಗಿ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ದಿನನಿತ್ಯ ಭಯೋತ್ಪಾದನಾ ಚಟುವಟಿಕೆ ನಡೆಸುವ ಮೂಲಕ ಭಾರತದ ನೆಮ್ಮದಿಯ ಬದುಕನ್ನು ಹಾಳು ಮಾಡಿತ್ತು . ಆದರೆ ಕೇವಲ ಒಂಬತ್ತು ವರ್ಷಗಳ ನರೇಂದ್ರ ಮೋದಿ ಯವರ ದಿಟ್ಟಹೆಜ್ಜೆ ಹಾಗೂ ದಕ್ಷ ಆಡಳಿತದ ಫಲವಾಗಿ ಇಂದು ಪಾಕಿ​ಸ್ತಾ​ನ ಭಿಕ್ಷೆ ಬೇಡುವಂತಹ ಹೀನಾಯ ಸ್ಥಿತಿ ತಲುಪಿರುವುದನ್ನು ಕಾಣಬಹುದಾಗಿದೆ ಎಂದು ಹೇಳಿ​ದರು. ಕೋವಿಡ್‌ ವೇಳೆ ಇಡೀ ವಿಶ್ವವೇ ತತ್ತರಿಸಿಹೋದ ಸಂದರ್ಭದಲ್ಲಿ ಉಚಿತವಾಗಿ ಲಸಿಕೆ ನೀಡುವ ಮೂಲಕ ದೇಶದ ಜನರ ಆರೋಗ್ಯ, ನೆಮ್ಮದಿ ಕಾಪಾಡಿದರು. ಇಡೀ ವಿಶ್ವವೇ ಭಾರತವನ್ನು ಗೌರವದಿಂದ ಕಾಣುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಇತಿಹಾಸ ಎಂದು ಅಶೋಕ್‌ ತಿಳಿ​ಸಿ​ದರು.

ಕೇಂದ್ರ ಸಚಿವ ನಾರಾಯಣ ಸ್ವಾಮಿ ಮಾತನಾಡಿ, ಕಳೆದ ಐವತ್ತು ಆರವತ್ತು ವರ್ಷ ಗಳಿಂದ ದೇಶದ ಸಾಮಾನ್ಯ ಜನರ ಅಗತ್ಯ ಸೌಲಭ್ಯಗಳ ಬಗ್ಗೆ ಗಮನ ನೀಡದೆ ಕೇವಲ ತಮ್ಮ ಅಭಿವೃದ್ಧಿಯ ಬಗ್ಗೆ ಚಿಂತಿಸಿದ ಕಾಂಗ್ರೆಸ್‌ ಅನ್ನು ಇಡೀ ದೇಶದ ಜನತೆ ತಿರಸ್ಕರಿಸುತ್ತಿ​ದ್ದಾರೆ. ಇದಕ್ಕೆ ಮೊನ್ನೆ ನಡೆದ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ ಎಂದ​ರು.

ಗ್ರಾಮೀಣ ಭಾಗದ ಜನರ ಅಭ್ಯುದಯಕ್ಕಾಗಿ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಯವರು ಶೌಚಾಲಯ,ಪ್ರತಿ ಮನೆ-ಮನೆಗೂ ಜಲಮಿಷನ್‌ ಅಡಿ ಯಲ್ಲಿ ನೀರಿನ ಸಂಪರ್ಕ,ಉಜ್ವಲ ಗ್ಯಾಸ್‌ ವಿತರಣೆ ಸೇರಿದಂತೆ ಕಾರ್ಮಿಕರು, ಮಹಿಳೆಯರು, ರೈತರ ಖಾತೆಗೆ ನೇರವಾಗಿ ಸಹಾಯಧನವನ್ನು ನೀಡುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸಿರುವುದನ್ನು ದೇಶದ ಜನತೆ ನೋಡು​ತ್ತಿ​ದ್ದಾರೆ. ಯಾರು ಏನೇ ತಿಪ್ಪರಲಾಗ ಹಾಕಿದರೂ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಿಳಿಸಿದರು.

ಬೆಂಗ​ಳೂರಿಗೆ ರಾಮ​ನಗರ ಹೆಬ್ಬಾ​ಗಿಲು ಆಗಲಿ: ಸಚಿವ ಅಶ್ವತ್ಥ ನಾರಾಯಣ

ಬಿ​ಜೆಪಿ ರಾಜ್ಯ ಪ್ರಧಾನ ಕಾರ್ಯ​ದರ್ಶಿ ಅಶ್ವತ್ಥ ನಾರಾ​ಯ​ಣ​ಗೌಡ, ಶಾಸಕ ಎಂ.ಕೃ​ಷ್ಣಪ್ಪ, ವಿಧಾನ ಪರಿಷತ್‌ ಸದಸ್ಯರಾದ ಅ.ದೇವೇಗೌಡ, ಛಲವಾದಿ ನಾರಾಯಣ ಸ್ವಾಮಿ, ಕನ​ಕ​ಪು​ರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗನ್ನಾಥ್‌, ನಗರ ಸಭಾ ಸದಸ್ಯೆ ಮಾಲಾತಿ ಆನಂದ್‌, ತಾಲೂಕು ಭೂ ಮಂಜೂರಾತಿ ಸದಸ್ಯ ರವಿಕುಮಾರ್‌ , ಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್‌, ನಗರಮಂಡಲ ಅಧ್ಯಕ್ಷ ವೆಂಕಟೇಶ್‌, ಯುವಮೋರ್ಚಾ ಅಧ್ಯಕ್ಷ ಸುನೀಲ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಶಿವ​ಮುತ್ತು , ಮುಖಂಡರಾದ ನಂದಿ​ನಿ​ಗೌಡ, ರವೀಂದ್ರ ಬಾಬು, ನಾಗನಂದ್‌, ರಾಜೇಶ್‌, ರಾಜು, ಮಂಜು ಮತ್ತಿ​ತ​ರರು ಹಾಜ​ರಿ​ದ್ದರು.