ಬೆಂಗ​ಳೂರಿಗೆ ರಾಮ​ನಗರ ಹೆಬ್ಬಾ​ಗಿಲು ಆಗಲಿ: ಸಚಿವ ಅಶ್ವತ್ಥ ನಾರಾಯಣ

ಬೆಂಗ​ಳೂ​ರಿಗೆ ಸನಿ​ಹ​ದ​ಲ್ಲಿ​ರುವ ರಾಮ​ನ​ಗರ ಎಲ್ಲ ಕ್ಷೇತ್ರ​ದ​ಲ್ಲಿಯೂ ಅಭಿ​ವೃ​ದ್ಧಿ ಹೊಂದಲು ವಿಫುಲ ಅವ​ಕಾ​ಶಗಳಿವೆ. ಒಂದ​ರ್ಥ​ದಲ್ಲಿ ರಾಮ​ನ​ಗರ ಆರೋಗ್ಯ ಮತ್ತು ಅಭಿ​ವೃದ್ಧಿ ವಿಚಾ​ರ​ದಲ್ಲಿ ಬೆಂಗ​ಳೂ​ರಿಗೆ ಹೆಬ್ಬಾ​ಗಿಲು ಆಗ​ಬೇಕು ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯಣ ಹೇಳಿ​ದರು.

Let Ramanagara be the Gateway to Bengaluru Says Minister Dr CN Ashwath Narayan gvd

ರಾಮ​ನ​ಗರ (ಮಾ.03): ಬೆಂಗ​ಳೂ​ರಿಗೆ ಸನಿ​ಹ​ದ​ಲ್ಲಿ​ರುವ ರಾಮ​ನ​ಗರ ಎಲ್ಲ ಕ್ಷೇತ್ರ​ದ​ಲ್ಲಿಯೂ ಅಭಿ​ವೃ​ದ್ಧಿ ಹೊಂದಲು ವಿಫುಲ ಅವ​ಕಾ​ಶಗಳಿವೆ. ಒಂದ​ರ್ಥ​ದಲ್ಲಿ ರಾಮ​ನ​ಗರ ಆರೋಗ್ಯ ಮತ್ತು ಅಭಿ​ವೃದ್ಧಿ ವಿಚಾ​ರ​ದಲ್ಲಿ ಬೆಂಗ​ಳೂ​ರಿಗೆ ಹೆಬ್ಬಾ​ಗಿಲು ಆಗ​ಬೇಕು ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯಣ ಹೇಳಿ​ದರು. ಅತಿ ಹೆಚ್ಚಿನ ಕೈಗಾ​ರಿ​ಕೆ​ಗ​ಳನ್ನು ಹೊಂದಿ​ರುವ ಜಿಲ್ಲೆ​ಗಳ ಪೈಕಿ ರಾಮ​ನ​ಗರ ರಾಜ್ಯ​ದಲ್ಲಿ ಎರ​ಡನೇ ಸ್ಥಾನ ಪಡೆ​ದು​ಕೊಂಡಿದೆ. ಬೆಂಗಳೂರಿಗೆ ಹೆಬ್ಬಾಗಿಲು ಆಗು​ವಂತೆ ರಾಮನಗರ ಅಭಿವೃದ್ಧಿ ಹೊಂದುವ ಜತೆಗೆ ಆರೋಗ್ಯ ನಗರವಾಗಬೇಕಿದೆ. ಗುಣಮಟ್ಟದ ಆಸ್ಪತ್ರೆಗಳನ್ನು ನೀಡುವುದು ನಮ್ಮ ಕರ್ತವ್ಯ. 

ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಲಿ ಎಂಬ ನಿಟ್ಟಿನಲ್ಲಿ ನೂತನ ಜಿಲ್ಲಾಸ್ಪತ್ರೆಗೆ ಚಾಲನೆ ನೀಡಲಾಗಿದೆ. ಈ ಆಸ್ಪ​ತ್ರೆ​ಗಾಗಿ ಜಾಗ ಗುರು​ತಿ​ಸಲು ಓಡಾ​ಡಿದ ಮಾಜಿ ಸಿಎಂ ಕುಮಾ​ರ​ಸ್ವಾಮಿ ಮತ್ತು ಸಂಸದ ಸುರೇಶ್‌ ಅವ​ರಿಗೆ ಧನ್ಯ​ವಾದ ತಿಳಿ​ಸು​ತ್ತೇನೆ. ಜಿಲ್ಲಾಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ 250 ಹಾಸಿಗೆ ಸಿದ್ಧ ಪಡಿ​ಸ​ಲಾ​ಗಿದ್ದು, ಮುಂದೆ 500 ಹಾಸಿಗೆ ಮೇಲ್ದ​ರ್ಜೆಗೆ ಏರಿ​ಸ​ಲಾ​ಗು​ವುದು ಎಂದು ತಿಳಿ​ಸಿ​ದರು. ಸ್ವತಃ ವೈದ್ಯಕೀಯ ಪದವೀಧರನಾದ ನಾನು ಈ ಆಸ್ಪತ್ರೆಯ ಪುನರ್‌ ವಿನ್ಯಾಸ ಮಾಡುವಲ್ಲಿ ಮತ್ತು ಇದನ್ನು ಮೇಲ್ದರ್ಜೆಗೇರಿಸುವಲ್ಲಿ ಆಸಕ್ತಿವಹಿಸಿದೆ. 

ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಮ್ಮತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ

ಮಣಿಪಾಲ ಆಸ್ಪತ್ರೆಯ ಪರಿಣತರನ್ನು ಇಲ್ಲಿಗೆ ಕರೆಸಿ ಪುನರ್‌ ವಿನ್ಯಾಸ ಮಾಡಿಸಿದೆ.  ರೇಷ್ಮೆನಗರಿಯು ‘ಆರೋಗ್ಯನಗರ’ ವಾಗಿಯೂ ಬೆಳೆಯಲಿದೆ. ಈ ಹೈಟೆಕ್‌ ಆಸ್ಪತ್ರೆಯಿಂದಾಗಿ ಜಿಲ್ಲೆಯ ಜನರು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ ಎಂದ​ರು. ರಾಜೀವ್‌ ಗಾಂಧಿ ವಿವಿ 270 ಎಕರೆ ಯಲ್ಲಿ ಆಗಲಿದೆ. ಭೂ ಸ್ವಾಧೀನ ದಲ್ಲಿ ಸವಾಲು ಎದುರಾಗಿತ್ತು. 10 ಎಕರೆ ಭೂ ಪರಿಹಾರ ವಿಚಾರವಾಗಿ ನ್ಯಾಯಾಲಯ ವ್ಯಾಜ್ಯ ನಡೆ​ಯು​ತ್ತಿದೆ. ಅದು ಕೂಡ ಬಗೆ​ಹ​ರಿ​ಯ​ಲಿದೆ. 17 ವರ್ಷಗಳ ಪರಿಶ್ರಮದ ಫಲವಾಗಿ ಕಾರ್ಯ ರೂಪಕ್ಕೆ ಬರುತ್ತಿದೆ.

ವಿವಿ ಮತ್ತು ಮೆಡಿ​ಕಲ್‌ ಕಾಲೇಜು ಸ್ಥಾಪ​ನೆಗೆ 600 ಕೋಟಿ ಮೀಸಲಿಟ್ಟು, ಈಗಾ​ಗಲೇ 300 ಕೋಟಿ ಬಿಡು​ಗಡೆ ಮಾಡ​ಲಾ​ಗಿದೆ. ಅಲ್ಲಿ 750 ಹಾಸಿಗೆ ಆಸ್ಪತ್ರೆ ನಿರ್ಮಾಣ ಆಗಲಿದೆ. ಟ್ರಾಮಾ ಸೆಂಟರ್‌ ಸ್ಥಾಪನೆಗೂ ಆದ್ಯತೆ ನೀಡುತ್ತೇವೆ ಎಂದು ಅಶ್ವತ್ಥ ನಾರಾ​ಯಣ ತಿಳಿ​ಸಿ​ದ​ರು. ನಮ್ಮಲ್ಲಿ ಏನೆ ವ್ಯತ್ಯಾಸ​ಗ​ಳಿ​ದ್ದರೂ ಮೂರು ಪಕ್ಷಗಳು ಸೇರಿ, ರಾಮನಗರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಕರ್ನಾ​ಟಕ ಎಂದರೆ ರಾಮನಗರ ಎಂಬಂತೆ ಅಭಿ​ವೃದ್ಧಿ ಮಾಡಿ ತೋರಿ​ಸು​ತ್ತೇವೆ ಎಂದು ಹೇಳಿ​ದರು.

ರಾ​ಮ​ನ​ಗ​ರ​ದಲ್ಲಿ ಮತ್ತೆ ಜಟಾಪಟಿ: ನಗರದಲ್ಲಿ ನಡೆದ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ಪಾಲನೆ ವಿಚಾ​ರ​ವಾಗಿ ನಾಯಕರ ನಡುವೆ ವಾಗ್ವಾದ ನಡೆದು, ಜಿಲ್ಲಾ​ಸ್ಪತ್ರೆ ಆವ​ರ​ಣ​ದಲ್ಲಿ ಕೆಲ ಕಾಲ ಬಿಗು​ವಿನ ವಾತಾ​ವ​ರಣ ನಿರ್ಮಾ​ಣ​ವಾಯಿತು. ಬೆಳಗ್ಗೆ 11.12ಕ್ಕೆ ಆರೋಗ್ಯ ಸಚಿವ ಡಾ.ಕೆ.​ಸು​ಧಾ​ಕರ್‌, ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ ನಾರಾ​ಯಣ ಟೇಪ್‌ ಕತ್ತ​ರಿ​ಸಲು ಮುಂದಾ​ದಾಗ, ಸ್ಥಳೀಯ ಶಾಸಕಿ ಅನಿತಾ ಕುಮಾ​ರ​ಸ್ವಾಮಿ, ಮಾಜಿ ಸಿಎಂ ಕುಮಾ​ರ​ಸ್ವಾ​ಮಿ, ಸಂಸದ ಡಿ.ಕೆ.​ಸು​ರೇಶ್‌ ಬರು​ವ​ವರೆಗೂ ಉದ್ಘಾ​ಟನೆ ಮಾಡ​ದಂತೆ ಆಯಾ ಪಕ್ಷಗಳ ಕಾರ್ಯಕರ್ತರು ಒತ್ತಾ​ಯಿ​ಸಿ​ದರು. 

ಕಾಂಗ್ರೆಸ್‌, ಜೆಡಿಎಸ್‌ಗೆ ಭವಿಷ್ಯವಿಲ್ಲ: ಸಚಿವ ಅಶ್ವತ್ಥನಾರಾಯಣ

ಆದರೂ, ಸಚಿ​ವ​ದ್ವ​ಯರು ಟೇಪ್‌ ಕತ್ತ​ರಿಸಿ ಆಸ್ಪತ್ರೆ ಲೋಕಾ​ರ್ಪಣೆ ಮಾಡಿ​ದ್ದು, ನಾಯಕರ, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ, ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಡಿ.ಕೆ.ಸುರೇಶ್‌, ಶಿಷ್ಟಾಚಾರ ಪಾಲನೆ ಮಾಡಬೇಕೆಂಬ ಪರಿಜ್ಞಾನವಿಲ್ಲವೇ?, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕಲ್ಲವೇ?, ರಾತ್ರಿ ಆಹ್ವಾನ ಕೊಟ್ಟು ಬೆಳಗ್ಗೆ ಕಾರ್ಯಕ್ರಮ ಮಾಡುತ್ತೀರಾ? ಎಂದು ಸಚಿವ ಅಶ್ವತ್ಥ ನಾರಾ​ಯಣ ವಿರುದ್ಧ ಹರಿಹಾಯ್ದರು. ಈ ವೇಳೆ, ಸಂಸದರು ಹಾಗೂ ಸಚಿವರ ನಡುವೆ ಮಾತಿನ ಚಕಮಕಿ ನಡೆಯಿತು.

Latest Videos
Follow Us:
Download App:
  • android
  • ios