Asianet Suvarna News Asianet Suvarna News

ವರಿಷ್ಠರ ಭೇಟಿಗೆ ವಿಜಯೇಂದ್ರ, ಅಶೋಕ್‌ ಡಿ.1ರಂದು ದೆಹಲಿಗೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಅವರು ಡಿ.1ರಂದು ಶುಕ್ರವಾರ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಸಂಬಂಧ ದೆಹಲಿಗೆ ತೆರಳಲಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಮತ್ತು ಅಶೋಕ್ ಅವರು ಪ್ರತಿಪಕ್ಷದ ನಾಯಕರಾದ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.

Vijayendra and R Ashok will going to Delhi on December 1 to meet BJP highcommand leaders rav
Author
First Published Nov 28, 2023, 7:14 AM IST

ಬೆಂಗಳೂರು (ನ.28) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಅವರು ಡಿ.1ರಂದು ಶುಕ್ರವಾರ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಸಂಬಂಧ ದೆಹಲಿಗೆ ತೆರಳಲಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಮತ್ತು ಅಶೋಕ್ ಅವರು ಪ್ರತಿಪಕ್ಷದ ನಾಯಕರಾದ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.

ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ತಿಳಿಸುವುದರ ಜತೆಗೆ ಕೋರ್ ಕಮಿಟಿ ಪುನಾರಚನೆ, ರಾಜ್ಯ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ, ವಿಧಾನಸಭೆಯ ಉಪನಾಯಕ, ಮುಖ್ಯ ಸಚೇತಕ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ, ಉಪನಾಯಕ ಮತ್ತು ಮುಖ್ಯ ಸಚೇತಕ ಹುದ್ದೆಗಳಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ ಎಂದು ಮುೂಲಗಳು ತಿಳಿಸಿವೆ.

ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಇಂದು ಬೆಂಗಳೂರಿಗೆ ; 25 ನಿಗಮಾಧ್ಯಕ್ಷರು ಫೈನಲ್‌?

ಅಲ್ಲದೆ, ಉಭಯ ನಾಯಕರ ನೇಮಕಕ್ಕೆ ಸಂಬಂಧಿಸಿದಂತೆ ಬೃಹತ್ ಸಮಾವೇಶ ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದೆ. ಹೀಗಾಗಿ, ಈ ಸಮಾವೇಶದ ದಿನಾಂಕ, ರಾಷ್ಟ್ರೀಯ ನಾಯಕರ ಲಭ್ಯತೆ ಆಧರಿಸಿ ಅವರನ್ನು ಆಹ್ವಾನಿಸುವ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಜತೆಗೆ ಪಕ್ಷದ ಸಂಘಟನೆ ಬಲಪಡಿಸುವ ಕುರಿತಂತೆ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆ ವರಿಷ್ಠರಿಂದ ಸಲಹೆ- ಸೂಚನೆಗಳನ್ನು ಪಡೆಯಬಹುದು. ಮುಖ್ಯವಾಗಿ ಪಕ್ಷ ತೊರೆಯಲು ಸಜ್ಜಾಗಿರುವ ಕೆಲವು ನಾಯಕರನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿಜಯೇಂದ್ರ ಅವರು ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಂಭ‍ವ ಹೆಚ್ಚಾಗಿದೆ ಎನ್ನಲಾಗಿದೆ.

6 ತಿಂಗಳಿಂದ ಸರ್ಕಾರ ಮಲಗಿತ್ತು ಎಂಬ ಆರೋಪ; ವಿಪಕ್ಷ ನಾಯಕ ಆರ್‌.ಅಶೋಕ್ ವಿರುದ್ಧ ಸಿಎಂ ಗರಂ!

Latest Videos
Follow Us:
Download App:
  • android
  • ios