ವಿಜಯಪುರ(ಡಿ. 22)  ಇಂಡಿಯಲ್ಲಿ ರಾಜಕೀಯ ಸಮರ ಜೋರಾಗಿದೆ.  ಇಂಡಿ MLA V/S ಮಾಜಿ ZP ಅಧ್ಯಕ್ಷರ ನಡುವಿನ ಸಮರ ತಾರಕಕ್ಕೇರಿದೆ. 'ಅಪ್ಪಗ ಹುಟ್ಟಿದ್ರೇ ಚುನಾವಣೆಗೆ ನಿಲ್ಲಬಾರದು'  ಕಾಂಗ್ರೆಸ್ ಇಂಡಿ ಶಾಸಕನ ವಿರುದ್ಧ ಮಾಜಿ ಜಿಪಂ ಅಧ್ಯಕ್ಷ ವಾಗ್ದಾಳಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಸಾಲೋಟಗಿ ಜಿಪಂ ಸದಸ್ಯ ಶಿವಯೋಗಪ್ಪ ನೇದಲಗಿ ವಾಗ್ದಾಳಿ ಮಾಡಿದ್ದಾರೆ. ಜಿ.ಪಂ ಅಧ್ಯಕ್ಷೀಯ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಕಾಂಗ್ರೆಸ್ ನಿಂದ ನೇದಲಗಿ ಉಚ್ಚಾಟನೆಗೊಂಡಿದ್ದರು.

ಅಡಿಕೆ ತೋಟದಲ್ಲಿ ಭರ್ಜರಿ ಬಾಡೂಟ..ಜನ ಪರಾರಿ..ಬಾಣಸಿಗನ ಕತೆ ಬೇಡ

ಮುಂದಿನ ವಿಧಾನಸಭೆ ಚುನಾವಣೆಗೆ ನಿಲ್ಲಬಾರದು ಎಂದು ಶಾಸಕರಿಗೆ ನೇದಲಗಿ ಸವಾಲ್ ಹಾಕಿದ್ದಾರೆ. ಕಾಂಗ್ರೆಸ್ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲಗೆ  ವಾರ್ನಿಂಗ್ ನೀಡಿರುವ ಶಿವಯೋಗಪ್ಪ ನೇದಲಗಿ 'ನಾನು ಮಾತು ಕೊಟ್ಟಂತೇ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ಅದೇ ತರಹ ಶಾಸಕ ಯಶವಂತರಾಯಗೌಡ ಮುಂದಿನ ಚುನಾವಣೆಗೆ ನಿಲ್ಲಬಾರದು. ಶಾಸಕ ಯಶವಂತರಾಯಗೌಡ ಪಾಟೀಲಗೆ ಮಾನ ಮರ್ಯಾದೆ ಇದ್ರೇ ಚುನಾವಣೆಗೆ ನಿಲ್ಲಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾನು ಅಪ್ಪಗ ಹುಟ್ಟೇನಿ ಅದಕ್ಕೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಾತು ಕೊಟ್ಟಂತೆ ರಾಜೀನಾಮೆ ನೀಡೇನಿ" ಮುಂದಿನ ಚುನಾವಣೆಗೆ ನೀವು ರಾಜೀನಾಮೆ ನೀಡಿ ಎಂದು ಸವಾಲು ಎಸೆದಿದ್ದಾರೆ.