ಗ್ರಾಮ ಪಂಚಾಯಿತಿ ಚುನಾವಣೆ ಕಾವು/ ಜನರಿಗೆ ಸಿದ್ಧಮಾಡಿದ್ದ ಬಾಡೂಟ ವಶಕ್ಕೆ/  ತೋಟದ ಮೇಲೆ ಅಧಿಕಾರಿಗಳ ದಾಳಿ/ ಮತದಾರರಿಗೆ ನೀಡಲು ಸಿದ್ಧಮಾಡಿದ್ದ ಬಾಡೂಟ

ಶಿವಮೊಗ್ಗ(ಡಿ. 22) ಮತದಾನಕ್ಕಾಗಿ ನಿನ್ನೆ ಕುಕ್ಕರ್ ಸಂಗ್ರಹಿಸಿದ ಬೆನ್ನಲ್ಲೇ ತಮ್ಮ ಕಡೆ ಮತಚಲಾಯಿಸಿದ ಮತದಾರರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿರುವ ಪ್ರಕರಣ ಬೆಳಗಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತದಾನ ನಡೆಯುತ್ತಿರುವ ವೇಳೆ ತಮ್ಮನ್ನ ಬೆಂಬಲಿಸಿ ಮತಚಲಾಯಿಸಿದವರಿಗೆ ಫಲಾವ್ ಮತ್ತು ನಾನ್ ವೆಜ್ ಊಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸ್ಥಳದ ಮೇಲೆ ಮಾದರಿ ನೀತಿ ಸಂಹಿತೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 

ಬಿಜೆಪಿ-ಜೆಡಿಎಸ್ ವಿಲೀನ ಕತೆ ಎಲ್ಲಿಗೆ ಬಂತು?

ಊಟಕ್ಕೆ ಬಳಸಿದ ಪಾತ್ರೆ ಮತ್ತು ಇತರೆ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಪಂ ಚುನಾವಣೆಗೆ 150 ಕ್ಕೂ ಹೆಚ್ಚು ಜನರಿಗೆ ಫಲಾವ್ ಸಿದ್ದಪಡಿಸಲಾಗಿತ್ತು. ಮಾಂಸಹಾರಿ ಊಟವೂ ಸಿದ್ಧವಾಗಿತ್ತು.

ಮಾದರಿ ನೀತಿ ಸಂಹಿತೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ 30 ಕ್ಕೂ ಹೆಚ್ಚುಜನ ಪರಾರಿಯಾಗಿದ್ದಾರೆ. ಹೊಸಹಳ್ಳಿ ತೋಟವೊಂದರಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು. ಅಧಿಕಾರಿಗಳಾದ ಚಂದ್ರಪ್ಪ, ಇಒ ಡಾ.ಕಲ್ಲಪ್ಪ ನೇತೃತ್ವದಲ್ಲಿ ನಡೆದ ದಾಳಿ ನಡೆದಿದೆ.