Asianet Suvarna News Asianet Suvarna News

ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಬಯಲಿಗೆ. ಯತ್ನಾಳ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ!

ಯತ್ನಾಳ್‌ಗೆ ಮೈಕ್ ಸಿಕ್ಕರೆ ಸಾಕು, ಬಾಯಿಗೂ ಮೆದುಳಿಗೆ ಸಂಬಂಧವೇ ಇಲ್ಲ. ಯುವಕರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯರು ಪಕ್ಷದ ನಾಯಕರ ವಿರುದ್ಧ ಬಾಯಿಗೆ ಬಂದಂತೇ ಬೈಯುತ್ತಿದ್ದಾನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯಪುರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಿರಾದಾರ  ವಾಗ್ದಾಳಿ ನಡೆಸಿದರು.

Vijayapur BJP district president outraged agains Basangowda patil yatnal today rav
Author
First Published Dec 4, 2023, 4:32 PM IST

ವಿಜಯಪುರ (ಡಿ.4): ಯತ್ನಾಳ್‌ಗೆ ಮೈಕ್ ಸಿಕ್ಕರೆ ಸಾಕು, ಬಾಯಿಗೂ ಮೆದುಳಿಗೆ ಸಂಬಂಧವೇ ಇಲ್ಲ. ಯುವಕರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯರು ಪಕ್ಷದ ನಾಯಕರ ವಿರುದ್ಧ ಬಾಯಿಗೆ ಬಂದಂತೇ ಬೈಯುತ್ತಿದ್ದಾನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯಪುರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಿರಾದಾರ  ವಾಗ್ದಾಳಿ ನಡೆಸಿದರು.

ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸುರೇಶ್ ಬಿರಾದಾರ, ಯತ್ನಾಳ್ ಅವರು ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. ಉಚಿತ ಶಿಕ್ಷಣ ಕೊಡುತ್ತಿದ್ದೇನೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾನೆ. ವಿಜಯಪುರದ ಜನರು ಇವನ ಶಾಲೆಗಳ ಬಗ್ಗೆ ಅಲ್ಲಿನ ಶುಲ್ಕದ ಬಗ್ಗೆ ಖುದ್ದಾಗಿ ನೋಡಿಕೊಂಡು ಬರಲಿ. ಭ್ರಷ್ಟಾಚಾರದ ಬಗ್ಗೆ ಯತ್ನಾಳ್ ಮಾತನಾಡುತ್ತಾನೆ, ಆದರೆ ಅವರ ಪಿಎಗಳು ಮಾಡಿರುವ ಹಣದ ಬಗ್ಗೆ ಮಾತನಾಡೋದಿಲ್ಲ. ಪಿಎಗಳು ವಿಜಯಪುರದ ಪ್ರತಿಷ್ಠಿತ ಏರಿಯಾಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ಈ ಹಣ ಎಲ್ಲಿಂತ ಬಂತು ಎಂದು ಏಕವಚನದಲ್ಲೇ ಯತ್ನಾಳ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

 

ಡಿಕೆಶಿ ತನಿಖೆ ವಾಪಸ್‌ ವಿರುದ್ಧ ಶಾಸಕ ಯತ್ನಾಳ್‌ ಹೈಕೋರ್ಟ್‌ಗೆ

Follow Us:
Download App:
  • android
  • ios