ಪಕ್ಕದಲ್ಲಿಯೇ ಇದ್ದವರಿಗೆ ಕೇಳದ್ದು, ದೂರವಿದ್ದ ಹೆಬ್ಬಾಳರ್‌ಗೆ ಕೇಳಿದ್ದೇಗೆ?: ಹೇಮಲತಾ ನಾಯಕ

ಸಚಿವ ಲಕ್ಷ್ಮೀ ಹೆಬ್ಬಾಳ‌ ಅವರು ಹೇಳಿದಂತೆ ರವಿ ಅವರು ಅಂದಿದ್ದಲ್ಲಿ ನಾವೂ ಒಪ್ಪುವುದಿಲ್ಲ. ಮಹಿಳೆಗೆ ಹಾಗೆ ಅನ್ನುವುದನ್ನು ನಾವು ಸಹಿಸುವುದಿಲ್ಲ. ಆದರೆ, ಷಡ್ಯಂತ್ರ ಮಾಡಿ, ಈ ರೀತಿ ಹುಟ್ಟು ಹಾಕಲಾಗಿದೆ. ಪಕ್ಕದಲ್ಲಿಯೇ ಇದ್ದವರಿಗೆ ಕೇಳದಿರುವುದು ದೂರದಲ್ಲಿದ್ದವರಿಗೆ ಕೇಳಿದ್ದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ 

Vidhana Parishat MLC Hemalatha Naik React to CT Ravi Remarks on Lakshmi Hebbalkar grg

ಕೊಪ್ಪಳ(ಡಿ.21): ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಪಕ್ಕದಲ್ಲಿಯೇ ನಾವಿದ್ದೇವೆ. ನಮಗೆ ಕೇಳದ್ದು, ದೂರದಲ್ಲಿ ಇದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಅವರಿಗೆ ಕೇಳಿದ್ದಾದರೂ ಹೇಗೆ? ಎಂದು ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅವರು ಪ್ರಶ್ನಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಲಕ್ಷ್ಮೀ ಹೆಬ್ಬಾಳ‌ ಅವರು ಹೇಳಿದಂತೆ ರವಿ ಅವರು ಅಂದಿದ್ದಲ್ಲಿ ನಾವೂ ಒಪ್ಪುವುದಿಲ್ಲ. ಮಹಿಳೆಗೆ ಹಾಗೆ ಅನ್ನುವುದನ್ನು ನಾವು ಸಹಿಸುವುದಿಲ್ಲ. ಆದರೆ, ಷಡ್ಯಂತ್ರ ಮಾಡಿ, ಈ ರೀತಿ ಹುಟ್ಟು ಹಾಕಲಾಗಿದೆ. ಪಕ್ಕದಲ್ಲಿಯೇ ಇದ್ದವರಿಗೆ ಕೇಳದಿರುವುದು ದೂರದಲ್ಲಿದ್ದವರಿಗೆ ಕೇಳಿದ್ದಾದರೂ ಹೇಗೆ ಎಂದು ಪ್ರಶ್ನೆ ಮಾಡಿದರು. ಇದು ಪೂರ್ಯನಿಯೋಜಿತ ಕೃತ್ಯವಾಗಿದೆ. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು. 

'ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ..' ಆ ಮಂತ್ರಿಗಳಿಂದ ಸಿಟಿ ರವಿಗೆ ಜೀವ ಬೆದರಿಕೆ? ಜಡ್ಜ್‌ ಮುಂದೆ ಹೇಳಿದ್ದೇನು?

ಅಷ್ಟಕ್ಕೂ ಸಿ.ಟಿ. ರವಿ ಅವರನ್ನು ನಾನು 30 ವರ್ಷಗಳಿಂದ ನೋಡುತ್ತ ಬಂದಿದ್ದೇನೆ. ಎದುರಿಗೆ ಬಂದಾಗ ನಮಸ್ಕಾರ ಸರ್‌ಎಂದರೆ, ನಮಸ್ಕಾರ ಅಮ್ಮಾ ಎನ್ನುವ ಅವರ ಬಾಯಿ ಜಾರುವ ಪ್ರಶ್ನೆಯೇ ಇಲ್ಲ. ಸುಳ್ಳು ಸುದ್ದಿ ಹರಡಿರುವ ಹೆಬ್ಬಾಳ ಅವರು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಷ್ಟಕ್ಕೂ ಅವರು ದೂರು ನೀಡಿದ್ದಾರೆ. ಅದರ ಪ್ರಕಾರ ಕಾನೂನು ರೀತಿಯಲ್ಲಿ ಕ್ರಮವಾಗಲಿ. ಆದರೆ, ಸುವರ್ಣ ಸೌಧದದಲ್ಲಿಯೇ ಹಲ್ಲೆ ಮಾಡಲು ಯತ್ನಿಸಿದ್ದು ಹೇಗೆ? ಅಲ್ಲಿಗೆ ಗೂಂಡಾಗಳಂತೆ ಇರುವವರನ್ನು ಒಳಗೆ ಬಿಟ್ಟಿದ್ದು ಯಾರು ಎಂದು ಪ್ರಶ್ನೆ ಮಾಡಿದರು. ಎಬಿವಿಪಿಯಿಂದ ಬಂದಿರುವ ಸಿ.ಟಿ. ರವಿ ಅವರು ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ಅಂಥವರ ಮೇಲೆ ಈ ರೀತಿ ಸುಳ್ಳು ಆರೋಪ ಮಾಡಿದ್ದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ರವಿ ಮೇಲೆ ಹಲ್ಲೆ ಮಾಡಲೆತ್ನಿಸಿದವರ ಬಂಧಿಸಲಿ

ಕೊಪ್ಪಳ: ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕೊಲೆ ಮಾಡುವ ಯತ್ನ ನಡೆದಿದೆ. ಮೊದಲು ಅವರನ್ನು ಬಂಧಿಸಬೇಕು. ಅದನ್ನು ಬಿಟ್ಟು ಸಿ.ಟಿ. ರವಿಯನ್ನು ಬಂಧಿಸಿದ್ದು ಅಲ್ಲದೆ, ಉಗ್ರಗಾಮಿಯಂತೆ ನಡೆಸಿಕೊಂಡಿರುವುದು ಯಾವ ನ್ಯಾಯ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಸಂಸ್ಕೃತ ರಾಜಕಾರಣಿ, ಸಿ.ಟಿ. ರವಿ ಅವರ ಬಾಯಲ್ಲಿ ಅಂಥ ಮಾತು ಬರಲು ಸಾಧ್ಯವೇ ಇಲ್ಲ. ಖುದ್ದು ಸಭಾಪತಿಯವರೇ ಅಂಥ ಯಾವುದೇ ರೆಕಾರ್ಡ್ ಆಗಿಲ್ಲ ಎಂದು ಹೇಳಿದ್ದಾರೆ. 
ಹೀಗಿದ್ದಾಗ್ಯೂ ಸುಳ್ಳು ಪ್ರಕರಣ ದಾಖಲು ಮಾಡಿದ್ದು ಅಲ್ಲದೆ, ಅವರನ್ನು ಪೊಲೀಸ್ ವ್ಯಾನ್‌ನಲ್ಲಿ ರಾತ್ರಿ ಪೂರ್ತಿ ಸುತ್ತಾಡಿಸಿದ್ದಾರೆ. ಅವರ ತಲೆಗೆ ಗಾಯವಾಗಿದೆ. ಅವರನ್ನು ಕೊಲೆ ಮಾಡುವ ಯತ್ನ ನಡೆದಿದೆ. ಇಷ್ಟಾದರೂ ಕೊಲೆ ಮಾಡಲು ಯತ್ನಿಸಿದವರನ್ನು, ವಿಧಾನಸೌಧದಲ್ಲಿ ಹಲ್ಲೆ ಮಾಡಲು ಯತ್ನಿಸಿದ ಗೂಂಡಾಗಳನ್ನು ಬಂಧಿಸುವುದನ್ನು ಬಿಟ್ಟು, ವಿಪ ಸದಸ್ಯ ಸಿ.ಟಿ. ರವಿಯನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು. 

ಏನೇ ಆದ್ರೂ ನಾನು, ಸಿಎಂ ಕಾರಣವೇ?: ಡಿ.ಕೆ.ಶಿವಕುಮಾರ್ ಪ್ರಶ್ನೆ

ಅವರು ಕೆಟ್ಟ ಪದ ಬಳಸಿಲ್ಲ ಎಂದಿದ್ದಾರೆ. ಬಳಿಸಿದ್ದರೆ ಕಾನೂನು ರೀತಿ ಕ್ರಮವಾಗಲಿ, ನಿಯಮಾನುಸಾರ ಕ್ರಮವಾಗಲಿ. ಆದರೆ, ಸುವರ್ಣ ಸೌಧದಲ್ಲಿಯೇ ಏಕಾಏಕಿ ಹಲ್ಲೆ ಮಾಡುವ ಯತ್ನವಾದರೂ ಹೇಗೆ ನಡೆಯಿತು. ಇದೆಲ್ಲವೂ ಪೂರ್ವಯೋಜಿತ ಕೃತ್ಯ ಎನ್ನುವ ಅನುಮಾನ ಮೂಡುತ್ತದೆ. ಸಿ.ಟಿ. ರವಿ ಅವರನ್ನು ಸಚಿವ ಲಕ್ಷ್ಮೀ ಹೆಬ್ಬಾಳಕರ್‌ ಕೊಲೆಗಡುಕ ಎನ್ನುವುದು ಎಷ್ಟು ಸರಿ. ಸಿ.ಟಿ. ರವಿ ಅವರು ಯಾವುದಾದರೂ ಕೊಲೆ ಮಾಡಿದ್ದಾರೆಯೇ ಎಂದು ಕಿಡಿಕಾರಿದರು. 

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ದವೂ ಕ್ರಮವಾಗಬೇಕು ಎಂದು ಒತ್ತಾಯಿಸಿದರು. ಸುವರ್ಣ ಸೌಧದದಲ್ಲಿಯೇ ಹೋಗಿ ಹಲ್ಲೆ ಮಾಡುತ್ತಾರೆ ಎಂದರೆ ಪೊಲೀಸ್ ವ್ಯವಸ್ಥೆ ಏನಾಗಿದೆ. ಬಿಗಿಭದ್ರತೆ ಇಲ್ಲದಂತಾಗಿದೆ. ಹಾಗೊಂದು ವೇಳೆ ಮಾರ್ಷಲ್‌ಗಳು ಇಲ್ಲದಿದ್ದರೇ ಸಿ.ಟಿ. ರವಿ ಅವರ ಜೀವಕ್ಕೆ ಕುತ್ತು ಇತ್ತು. ಹೀಗಾಗಿ, ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಉಗ್ರ ಹೋರಾಟ ಮಾಡುತ್ತೇವೆ ಎಂದರು.

Latest Videos
Follow Us:
Download App:
  • android
  • ios