ನಮ್ಮ ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ನಾವು ಮತ್ತು ಸಂಸದರು ಎಲ್ಲರೂ ಒಟ್ಟಾಗಿದ್ದೇವೆ, ಸಂಸದ ಮುನಿಸ್ವಾಮಿ ಅವರು ನಮ್ಮ ನಾಯಕರು ಎಂದು ಹೇಳಿದ ವರ್ತೂರು ಪ್ರಕಾಶ್​, ಕೂಡಲೇ ಪಕ್ಕದಲ್ಲೇ ಇದ್ದ ಸಂಸದ ಮುನಿಸ್ವಾಮಿಗೆ ಕಿಸ್ ಮಾಡಿ ಚಟಾಕಿ ಹಾರಿಸಿದರು.

ಕೋಲಾರ (ಜ.1): ಹೊಸ ವರ್ಷದ ಹಿನ್ನಲೆಯಲ್ಲಿ ಕೋಲಾರದಲ್ಲಿಂದು ಸಂಸದರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಸ್ ಮಾಡಿದ ಹಾಸ್ಯ ಪ್ರಸಂಗವೊಂದು ನಡೆಯಿತು, ಹೊಸ ವರ್ಷದ ಹಿನ್ನೆಲೆ ಕೋಲಾರದ ಕೋಲಾರಮ್ಮ ದೇವಾಲಯದಲ್ಲಿ‌ ಇಂದು‌ ವಿಶೇಷ ಪೂಜೆ ಸಲ್ಲಿಸಿ‌ದ ನಂತರ ಮಾತನಾಡುವ ವೇಳೆ ನಮ್ಮ ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ನಾವು ಮತ್ತು ಸಂಸದರು ಎಲ್ಲರೂ ಒಟ್ಟಾಗಿದ್ದೇವೆ, ಸಂಸದ ಮುನಿಸ್ವಾಮಿ ಅವರು ನಮ್ಮ ನಾಯಕರು ಎಂದು ಹೇಳಿದ ವರ್ತೂರು ಪ್ರಕಾಶ್​, ಕೂಡಲೇ ಪಕ್ಕದಲ್ಲೇ ಇದ್ದ ಸಂಸದ ಮುನಿಸ್ವಾಮಿಗೆ ಕಿಸ್ ಮಾಡಿ ಚಟಾಕಿ ಹಾರಿಸಿದರು.

ನಾವು ಹೊಸ ವರ್ಷದ ಇಂದು ಕೋಲಾರಮ್ಮ ದೇವರ ಮುಂದೆ‌ ನಾವೆಲ್ಲಾ ಪ್ರಮಾಣ ಮಾಡಿದ್ದೀವಿ.ಸಂಸದರ ಜೊತೆ‌ ನಾವು ಇನ್ನು ಮುಂದೆ ರಾಜಕೀಯ‌ ಜೀವನ‌ ಸಾಗಿಸುತ್ತೇವೆ. ಕೊನೆಯವರೆಗೂ‌ ಅವರ ಜೊತೆಯಲ್ಲಿ‌ ಇರುತ್ತೇವೆ,ಜಿಲ್ಲಾ‌ ಉಸ್ತುವಾರಿ‌‌ ಸಚಿವರು ನಮ್ಮ ಜೊತೆಯಲ್ಲಿ‌ ಇರುತ್ತಾರೆ,‌ಆದ್ರೆ ಬೆಳಗ್ಗೆ ಸಾಯಂಕಾಲ ಕೋಲಾರದಲ್ಲಿ ರಾಜಕೀಯ ಮಾಡುವುದು‌‌ ನಾವು ಎಂದು ಹೇಳಿದ ವರ್ತೂರು ಪ್ರಕಾಶ್​ ನಗೆ ಪ್ರಸಂಗವನ್ನು ಸೃಷ್ಟಿಸಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ರು. ಇದೇ ವೇಳೆ ಮಾಜಿ‌ ಶಾಸಕ ಮಂಜುನಾಥ್ ಗೌಡ, ವೈ.ಸಂಪಂಗಿ ಮತ್ತಿತರರು ಉಪಸ್ಥಿತರಿದ್ದರು.

ಸ್ಪರ್ಧಿಸಿದರೂ ಗೆಲುವು ನನ್ನದೇ: ವರ್ತೂರು
ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ತಮ್ಮ ಆಡಳಿತವಾಧಿಯಲ್ಲಿ ಅಮಾನತುಗೊಂಡಿದ್ದ ಎಲ್ಲ 17 ಮಂದಿ ಶಾಸಕರು ಸಚಿವರಾಗಿದ್ದು 2023ರ ವಿಧಾನಸಭಾ ಚುನಾವಣೆಯಲ್ಲಿ ರಮೇಶ್‌ ಕುಮಾರ್‌ ಅವರನ್ನು ಆಡ್ರಸ್‌ ಇಲ್ಲದಂತೆ ಪಾಠ ಕಲಿಸಲು ನಿರ್ಧಾರಿಸಿದ್ದಾರೆ ಎಂದು ಮಾಜಿ ಸಚಿವ ಎಂದು ವರ್ತೂರು‌ ಪ್ರಕಾಶ್‌ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ನಾನು ಆಡ್ರಸ್‌ಗೆ ಇಲ್ಲದಂತೆ ಹೋಗುತ್ತಾರೆಂದು ರಮೇಶ್‌ ಕುಮಾರ್‌ ನೀಡಿರುವ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಜ.9 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಾರೆ, ಅಂದು ಯಾವ ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆ ಎಂದು ಘೋಷಿಸಲಿದ್ದಾರೆ. ಆದರೆ ಚುನಾವಣೆಯಲ್ಲಿ ಘಟಬಂಧನ್‌ ನಾಯಕರು ಸಿದ್ದರಾಮಯ್ಯ ಪರ ಕೆಲಸ ಮಾಡುವುದಿಲ್ಲ. ಅವರುಗಳ ಗೆಲುವಿಗಾಗಿ ಸಿದ್ದರಾಮಯ್ಯರನ್ನು ಬಲಿ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ವರ್ತೂರು ಪ್ರಕಾಶ್‌ ಹುಟ್ಟುಹಬ್ಬದಲ್ಲಿ ಬಿರಿಯಾನಿಗಾಗಿ ಕಿತ್ತಾಟ: ಪೊಲೀಸರಿಂದ ಲಾಠಿ ಚಾರ್ಜ್‌

50 ಸಾವಿರ ಮತ ಅಂತರದಿಂದ ಗೆಲ್ಲುವೆ: ಕಾಂಗ್ರೆಸ್‌ಗೆ ತಾಕತ್ತು ಇದ್ದರೆ, ಕೋಲಾರದಲ್ಲಿ ಸಿದ್ದರಾಮಯ್ಯರನ್ನು ಹೊರತುಪಡಿಸಿ ಪಕ್ಷದ ಬೇರೆ ಕಾರ್ಯಕ್ರಮ ಆಯೋಜಿಸಿ ಅಲ್ಪಸಂಖ್ಯಾತರನ್ನು ಹೊರತುಪಡಿಸಿ 5 ಸಾವಿರ ಮಂದಿಯನ್ನು ಸಂಘಟಿಸಲಿ ನಾನು ನೋಡುತ್ತೇನೆಂದು ಅವರು ಸವಾಲು ಹಾಕಿದರು. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ನಾನೇನು ಹಿಂಜರಿಯುವುದಿಲ್ಲ. ನಾನು ಸುಮಾರು 50 ಸಾವಿರ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇನೆ, ನಾನು ಪರೀಕೆಯಲ್ಲಿ ರಾರ‍ಯಂಕ್‌ ಪಡೆಯಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿ ಎಂದರು.

ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಗೆಲುವು ನನ್ನದೇ: ವರ್ತೂರು ಪ್ರಕಾಶ್‌

ನನಗೇ ಬಿಜೆಪಿ ಟಿಕೆಟ್‌: ಬಿಜೆಪಿ ಪಕ್ಷದಲ್ಲಿ ಓಂಶಕ್ತಿ ಚಲಪತಿ ನನ್ನ ಸಹೋದರ. ಅವರಿಗೆ ಅಲ್ಲ ಯಾರಿಗೆ ಬಿಜೆಪಿ ಪಕ್ಷದ ಟಿಕೆಟ್‌ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಆದರೆ ಬಿಜೆಪಿ ನನಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದರು.