Asianet Suvarna News Asianet Suvarna News

ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಗೆಲುವು ನನ್ನದೇ: ವರ್ತೂರು ಪ್ರಕಾಶ್‌

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ತಮ್ಮ ಆಡಳಿತವಾಧಿಯಲ್ಲಿ ಅಮಾನತುಗೊಂಡಿದ್ದ ಎಲ್ಲ 17 ಮಂದಿ ಶಾಸಕರು ಸಚಿವರಾಗಿದ್ದು 2023ರ ವಿಧಾನಸಭಾ ಚುನಾವಣೆಯಲ್ಲಿ ರಮೇಶ್‌ ಕುಮಾರ್‌ ಅವರನ್ನು ಆಡ್ರಸ್‌ ಇಲ್ಲದಂತೆ ಪಾಠ ಕಲಿಸಲು ನಿರ್ಧಾರಿಸಿದ್ದಾರೆ ಎಂದು ಮಾಜಿ ಸಚಿವ ಎಂದು ವರ್ತೂರ್‌ ಪ್ರಕಾಶ್‌ ಹೇಳಿದರು. 

kolar varthur prakash lashes out at siddaramaiah gvd
Author
First Published Dec 28, 2022, 9:49 AM IST

ಕೋಲಾರ (ಡಿ.28): ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ತಮ್ಮ ಆಡಳಿತವಾಧಿಯಲ್ಲಿ ಅಮಾನತುಗೊಂಡಿದ್ದ ಎಲ್ಲ 17 ಮಂದಿ ಶಾಸಕರು ಸಚಿವರಾಗಿದ್ದು 2023ರ ವಿಧಾನಸಭಾ ಚುನಾವಣೆಯಲ್ಲಿ ರಮೇಶ್‌ ಕುಮಾರ್‌ ಅವರನ್ನು ಆಡ್ರಸ್‌ ಇಲ್ಲದಂತೆ ಪಾಠ ಕಲಿಸಲು ನಿರ್ಧಾರಿಸಿದ್ದಾರೆ ಎಂದು ಮಾಜಿ ಸಚಿವ ಎಂದು ವರ್ತೂರ್‌ ಪ್ರಕಾಶ್‌ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ನಾನು ಆಡ್ರಸ್‌ಗೆ ಇಲ್ಲದಂತೆ ಹೋಗುತ್ತಾರೆಂದು ರಮೇಶ್‌ ಕುಮಾರ್‌ ನೀಡಿರುವ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಜ.9 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಾರೆ, ಅಂದು ಯಾವ ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆ ಎಂದು ಘೋಷಿಸಲಿದ್ದಾರೆ. ಆದರೆ ಚುನಾವಣೆಯಲ್ಲಿ ಘಟಬಂಧನ್‌ ನಾಯಕರು ಸಿದ್ದರಾಮಯ್ಯ ಪರ ಕೆಲಸ ಮಾಡುವುದಿಲ್ಲ. ಅವರುಗಳ ಗೆಲುವಿಗಾಗಿ ಸಿದ್ದರಾಮಯ್ಯರನ್ನು ಬಲಿ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಸ್ತ್ರಸಂಹಿತೆ ಜಾರಿಗಿಂತ, ತಾವೇ ಸೂಕ್ತ ವಸ್ತ್ರಧರಿಸುವುದು ಒಳ್ಳೆಯದು: ಪ್ರತಾಪ್‌ ಸಿಂಹ

50 ಸಾವಿರ ಮತ ಅಂತರದಿಂದ ಗೆಲ್ಲುವೆ: ಕಾಂಗ್ರೆಸ್‌ಗೆ ತಾಕತ್ತು ಇದ್ದರೆ, ಕೋಲಾರದಲ್ಲಿ ಸಿದ್ದರಾಮಯ್ಯರನ್ನು ಹೊರತುಪಡಿಸಿ ಪಕ್ಷದ ಬೇರೆ ಕಾರ್ಯಕ್ರಮ ಆಯೋಜಿಸಿ ಅಲ್ಪಸಂಖ್ಯಾತರನ್ನು ಹೊರತುಪಡಿಸಿ 5 ಸಾವಿರ ಮಂದಿಯನ್ನು ಸಂಘಟಿಸಲಿ ನಾನು ನೋಡುತ್ತೇನೆಂದು ಅವರು ಸವಾಲು ಹಾಕಿದರು. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ನಾನೇನು ಹಿಂಜರಿಯುವುದಿಲ್ಲ. ನಾನು ಸುಮಾರು 50 ಸಾವಿರ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇನೆ, ನಾನು ಪರೀಕೆಯಲ್ಲಿ ರಾರ‍ಯಂಕ್‌ ಪಡೆಯಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿ ಎಂದರು.

ನನಗೇ ಬಿಜೆಪಿ ಟಿಕೆಟ್‌: ಬಿಜೆಪಿ ಪಕ್ಷದಲ್ಲಿ ಓಂಶಕ್ತಿ ಚಲಪತಿ ನನ್ನ ಸಹೋದರ. ಅವರಿಗೆ ಅಲ್ಲ ಯಾರಿಗೆ ಬಿಜೆಪಿ ಪಕ್ಷದ ಟಿಕೆಟ್‌ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಆದರೆ ಬಿಜೆಪಿ ನನಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದರು. ದರಖಾಸ್ತು ಸಮಿತಿ ಮಾಜಿ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್‌, ಜಿ.ಪಂ ಮಾಜಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಮಾಜಿ ಸದಸ್ಯ ಅರುಣ್‌ ಪ್ರಸಾದ್‌ ಮತ್ತಿತರರು ಇದ್ದರು.

ಕನಕ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ: ಕೋಲಾರ ವಿಧಾನ ಸಭಾಕ್ಷೇತ್ರದಲ್ಲಿ ಕುರುಬ ಸಮಾಜಕ್ಕೆ ವರ್ತೂರ್‌ ಪ್ರಕಾಶ್‌ರ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದವರಿಗೆ ಉತ್ತರವಾಗಿ ನಗರದಲ್ಲಿ ಶ್ರೀ ಕನಕ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರು.ಗಳ ಅನುದಾನ, ಕೋಲಾರ ನಗರದ ಅಭಿವೃದ್ಧಿಗೆ 10 ಕೋಟಿ ರು.ಗಳನ್ನು ಮುಖ್ಯಮಂತ್ರಿಗಳಿಂದ ಬಿಡುಗಡೆ ಮಾಡಿಸಿರುವುದಾಗಿ ಮಾಜಿ ಸಚಿವ ಆರ್‌.ವರ್ತೂರ್‌ ಪ್ರಕಾಶ್‌ ತಿಳಿಸಿದರು. 

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ನಿರ್ಮಾಣ ಮಾಡಲಿರುವ ಶ್ರೀ ಕನಕ ಸಮುದಾಯ ಭವನಕ್ಕೆ ಮಂಜೂರಾಗಿರುವ ಒಂದು ಕೋಟಿ ಅನುದಾನ ಬಿಡುಗಡೆ ಪತ್ರವನ್ನು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪರಿಗೆ ವರ್ತೂರ್‌ ಪ್ರಕಾಶ್‌ ಹಸ್ತಾಂತರಿಸಿ ಮಾತನಾಡಿದರು. ಕೋಲಾರ ವಿಧಾನ ಸಭಾಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದರಿಂದ ತಮ್ಮ ಮನವಿ ಮೇರೆಗೆ ಕ್ಷೇತ್ರದಲ್ಲಿ 433 ಕಾಮಗಾರಿಗಳಿಗೆ 10 ಕೋಟಿ ಅನುದಾನ ಒದಗಿಸಲು ಮುಖ್ಯ ಮಂತ್ರಿಯವರು ಅನುಮೋದನೆ ನೀಡಿದ್ದಾರೆ. 

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಮೊಟಕು ಸಾಧ್ಯತೆ: ಸಚಿವ ಗೋಪಾಲಯ್ಯ

ಕೋಲಾರದಲ್ಲಿ ಕನಕ ಕಲ್ಯಾಣ ಮಂಟಪ ನಿರ್ಮಾಣಕ್ಕೆ 2 ಎಕರೆ ಭೂಮಿ ಮತ್ತು 10 ಕೋಟಿ ರೂ.ಗಳನ್ನು ಮಂಜೂರು ಮಾಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದ್ದಾರೆ ಎಂದರು. ನಾನು ಕ್ಷೇತ್ರ ಬಿಟ್ಟು ಹೋಗುತ್ತೇನೆ ಎಂಬುವವರಿಗೆ ಜ.9ರಂದು ವರ್ತೂರ್‌ ಹವಾ ಏನೆಂಬುದು ತೋರಿಸುತ್ತೇನೆ. ಆ ದಿವಸ ಕೋಲಾರದ ಚಿತ್ರಣವೇ ಬೇರೆಯಾಗುತ್ತದೆ. 2008ರಿಂದ 2018ರ ತನಕ ಎಲ್ಲಾ ಚುನಾವಣೆಗಳಲ್ಲಿಯೂ ಕುರುಬ ಸಮುದಾಯ ನನ್ನ ಜೊತೆಯಲ್ಲಿದೆ. ಮುಂದೆಯೂ ನನ್ನ ಜೊತೆಯಲ್ಲಿರುತ್ತದೆ. ಬಿಜೆಪಿಯಿಂದ ಯಾರಿಗೆ ಟಿಕೆಟ್‌ ನೀಡಿದರೂ ನಮ್ಮ ಸಮುದಾಯ ಬಿಜೆಪಿ ಪರವಾಗಿ ಇರುತ್ತದೆ ಎಂದರು.

Follow Us:
Download App:
  • android
  • ios