UP Elections : ಬಿಜೆಪಿಗೆ ಇರುವ ಬೆಂಬಲ ಕಂಡು ಎದುರಾಳಿಗಳಿಗೆ ಕನಸಿನಲ್ಲಿ ಕೃಷ್ಣ ಬರಲು ಆರಂಭಿಸಿದ್ದಾನೆ!
ಉತ್ತರ ಪ್ರದೇಶದ ಹಿಂದಿನ ಸರ್ಕಾರವನ್ನು ಟೀಕಿಸಿದ ಪಿಎಂ ಮೋದಿ
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಗೆ ಟಾಂಗ್
ಜನಪರವಾಗಿ ಯಾವುದೇ ಸರ್ಕಾರಗಳು ಕೆಲಸ ಮಾಡಿಲ್ಲ ಎಂದ ಮೋದಿ
ಲಖನೌ (ಫೆ.6): ಉತ್ತರ ಪ್ರದೇಶದ (Uttar Pradesh) ಮೊದಲ ಹಂತದ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಪ್ರಧಾನಿ ನರೇಂದ್ರ ಮೋದಿ (Prime Minister) ಉತ್ತರ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದ ಮಾಜಿ ಸರ್ಕಾರಗಳನ್ನು ಟೀಕೆ ಮಾಡಿದ್ದಾರೆ. ಬಿಜೆಪಿ (BJP) ಸರ್ಕಾರ ಬರುವ ಮುನ್ನ ಯಾವ ಸರ್ಕಾರಗಳು ಜನಪರವಾಗಿ ಕೆಲಸ ಮಾಡಿಲ್ಲ. ಹಿಂದಿನ ಸರ್ಕಾರಗಳು ಜನರ ನಂಬಿಕೆ ಅಥವಾ ಜನರ ಅಗತ್ಯತೆಗಳ ಬಗ್ಗೆ ಒಂಚೂರು ಕಾಳಜಿ ವಹಿಸಿರಲಿಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ತಮ್ಮ ಜನ್ ಚೌಪಾಲ್ (Jan Chaupal ) ಭಾಷಣ ನಡೆಸಿದ ಪ್ರಧಾನಿ ಮೋದಿ, ದಿಗ್ಗಜ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ನಿಧನಕ್ಕೆ ಸಂತಾಪ ಸೂಚಿಸಿದರು.
"ಬಿಜೆಪಿಗೆ ಇರುವ ಅಪಾರ ಬೆಂಬಲಕ್ಕೆ ಸಾಕ್ಷಿಯಾಗಿ, ಈ ಜನರು ಈಗ ತಮ್ಮ ಕನಸಿನಲ್ಲಿ ಶ್ರೀಕೃಷ್ಣನನ್ನು ನೋಡುತ್ತಿದ್ದಾರೆ" ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ರನ್ನು ಟೀಕೆ ಮಾಡಿದರು. ಇತ್ತೀಚೆಗೆ ಮಾತನಾಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav)ತಮ್ಮ ಕನಸಿನಲ್ಲಿ ಭಗವಾನ್ ಶ್ರೀ ಕೃಷ್ಣ ಬರುತ್ತಿದ್ದಾನೆ. ಉತ್ತರ ಪ್ರದೇಶದಲ್ಲಿ ಮುಂದಿನ ಮುಖ್ಯಮಂತ್ರಿ ನಾನೇ ಆಗಲಿದ್ದು, ರಾಮರಾಜ್ಯ ಮಾಡುತ್ತೇನೆ ಎಂದು ಹೇಳಿದ್ದಾನೆ ಎಂದು ತಿಳಿಸಿದ್ದರು. ಇದನ್ನು ನೆನಪಿಸಿಕೊಂಡು ಪ್ರಧಾನಿ ಮೋದಿ ಈ ಮಾತು ಹೇಳಿದ್ದಾರೆ.
ಉತ್ತರ ಪ್ರದೇಶದ ಮಥುರಾ, ಆಗ್ರಾ ಮತ್ತು ಬುಲಂದ್‌ಶಹರ್‌ನಲ್ಲಿ ವರ್ಚುವಲ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯದಲ್ಲಿ ಹಿಂದಿನ ಸರ್ಕಾರಗಳು " ಜನರ ನಂಬಿಕೆ ಅಥವಾ ಜನರ ಅಗತ್ಯತೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ" ಎಂದು ಟೀಕಿಸಿದರು. ಅವರ ಅಜೆಂಡಾ ಉತ್ತರ ಪ್ರದೇಶವನ್ನು ಲೂಟಿ ಮಾಡುವುದಾಗಿದೆ ಎಂದು ಆರೋಪಿಸಿದರು.
"ಬಿಜೆಪಿ ಸರ್ಕಾರದಲ್ಲಿ, ದಲಿತ, ಶೋಷಿತ, ಅವಕಾಶ ವಂಚಿತ, ಬಡವರು ಅಥವಾ ಮಹಿಳೆಯರು, ಅದು ಉದ್ಯಮಿಯಯೇ ಆಗಿರಲಿ, ಸಾಮಾನ್ಯ ಜನರೇ ಆಗಿರಲಿ, ಪ್ರತಿಯೊಬ್ಬರೂ ಪ್ರತಿಯೊಂದು ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ. ಅದಕ್ಕಾಗಿಯೇ ಯುಪಿ ಬಯಸಿದೆ - ಪರಿಣಾಮಕಾರಿ ಸರ್ಕಾರ, ಮತ್ತೊಮ್ಮೆ ಯೋಗಿ ಸರ್ಕಾರ," ಎಂದು ಅವರು ಹೇಳಿದರು.
UP Elections: ಸಿಎಂ ಯೋಗಿ ಆದಿತ್ಯನಾಥ್ ಪರ ನಿಂತಿದೆ ಮುಸ್ಲಿಂ ಸಮುದಾಯ!
ಮಂಗೇಶ್ಕರ್ ಅವರ ಸಾವಿನ ಸುದ್ದಿಯ ನಂತರ, ಬಿಜೆಪಿ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಮತ್ತು ಅದರ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಗೋವಾದಲ್ಲಿ ನಡೆಯಬೇಕಿದ್ದ ಚುನಾವಣಾ ಸಮಾವೇಶವನ್ನೂ ಇದು ಒಳಗೊಂಡಿತ್ತು, ಪ್ರಧಾನಿ ಮೋದಿ ಈ ವರ್ಚುವಲ್ ಸಮಾವೇಶದಲ್ಲಿ ಮಾತನಾಡಬೇಕಿತ್ತು. "ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನೆಲೆಯಲ್ಲಿ ಗೋವಾದಲ್ಲಿ ಎರಡು ದಿನಗಳ ಶೋಕಾಚರಣೆ ಇದೆ. ಎಲ್ಲಾ ರಾಜ್ಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ" ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
PM Modi UP Virtual Rally: ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವುದು ಪ್ರತಿಪಕ್ಷಗಳ ಏಕೈಕ ಅಜೆಂಡಾ: ಪ್ರಧಾನಿ!
ರಂಗೇರಿದ ಚುನಾವಣಾ ಕಣ: ಉತ್ತರ ಪ್ರದೇಶದ ಮೊದಲ ಹಂತದ ಮತದಾನ ಸಮೀಪಿಸುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಪ್ರತಿಷ್ಠೆಯಿಂದಾಗಿ ತೆಗೆದುಕೊಂಡಿದ್ದು, ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಬಿರುಸಿನ ಪ್ರಚಾರ ನಡೆಸಿದ್ದರು. ಮೊದಲ ಹಂತದ ಚುನಾವಣೆ ಸಮೀಪವಾಗುತ್ತಿರುವ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಶುಕ್ರವಾರ ಗಾಜಿಯಾಬಾದ್‌ನಲ್ಲಿ ಮನೆ ಮನೆ ಪ್ರಚಾರ ಕೈಗೊಂಡಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ದುರಾಡಳಿತವನ್ನು ಜನರಿಗೆ ಮನವರಿಕೆ ಮಾಡಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ತಂದಿದ್ದ ಮೂರು ರೈತ ವಿರೋಧಿ ಕೃಷಿ ಕಾನೂನುಗಳ ಕಾರಣಕ್ಕೆ ಬಿಜೆಪಿ ವಿರುದ್ಧ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯ ಸಿಡಿದೆದ್ದಿದೆ. ಹಾಗಾಗಿ ಜಾಟ್ ಸಮುದಾಯದ ಪ್ರಾಬಲ್ಯ ಇರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಬಹುದು ಎಂದು ಹೇಳಲಾಗುತ್ತಿದೆ.