ಸಿದ್ದರಾಮಯ್ಯನವರ ಹಣ ವಾಪಸ್ ಎಸೆದ ಮುಸ್ಲಿಂ ಮಹಿಳೆ, ಸ್ಪಷ್ಟನೆ ಕೊಟ್ಟ ಖಾದರ್

* ಮಹಿಳೆ ಹಣ ಎಸೆದ ಪ್ರಕರಣದಿಂದ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಕುಂದು ಉಂಟಾಗೋದಿಲ್ಲ
* ಅಮೃತ ಮಹೋತ್ಸವ ಮೂಲಕ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶನ
* ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಕೇಸ್ ನ್ಯಾಯಾಂಗ ತನಿಖೆಗೆ ಒಳಪಡಿಸಲಿ
* ರಾಜ್ಯದಲ್ಲಿ ಮಳೆ ಮತ್ತು ಪ್ರವಾಹಕ್ಕೆ ಮುಂಜಾಗ್ರತೆ ಕೈಗೊಳ್ಳುವಲ್ಲಿ ಸಕಾ೯ರ ವಿಫಲ
* ಬಾಗಲಕೋಟೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿಕೆ...

UT Khader clarify about Muslim Woman Denise Siddaramaiah Money at Bagalkot rbj

ವರದಿ:- ಮಲ್ಲಿಕಾರ್ಜುನ ಹೊಸಮನಿ, ಸುವರ್ಣನ್ಯೂಸ್, ಬಾಗಲಕೋಟೆ..

ಬಾಗಲಕೋಟೆ, (ಜುಲೈ.16):
ಮಹಿಳೆ ಹಣ ಎಸೆದ ಪ್ರಕರಣದ ಘಟನೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಯಾವುದೇ ಕುಂದು ಉಂಟಾಗೋದಿಲ್ಲ ಎಂದು ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ ತಿಳಿಸಿದರು

ಬಾಗಲಕೋಟೆ ನಗರಕ್ಕೆ ಭೇಟಿ ‌ನೀಡಿದ ಸಮಯದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿ, ಸದನದ ಒಳಗೆ & ಹೊರಗೆ ಯಾರಿಗಾದ್ರು ತೊಂದರೆ, ಶೋಷಣೆಯಾದಲ್ಲಿ,ಕಾಂಗ್ರೆಸ್ ಪಕ್ಷದಿಂದ ಧ್ವನಿ ಎತ್ತಿದವರೇ ಸಿದ್ದರಾಮಯ್ಯನವರು,ನ್ಯಾಯ ಕೊಡಿಸಿ ಅಂತ ಕೇಳಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸಕಾ೯ರ ಇಲ್ಲ, ಸಿದ್ದರಾಮಯ್ಯ ಸಿಎಂ ಸಹ ಈಗ ಅಲ್ಲ ನಮ್ಮಿಂದ ಹೋರಾಟದ ಮಾತ್ರ ಸಾಧ್ಯ. ಸಿದ್ದರಾಮಯ್ಯನವರು ನೊಂದವರ ಬಗ್ಗೆ ಅನುಕಂಪ ತೋರಿಸಿ ವೈಯಕ್ತಿಕ ಸಹಾಯ ಮಾಡಲು ಮುಂದಾಗಿದ್ದರು. ಮಹಿಳೆ ಮೊದಲು ಬೇಡ ಎಂದು ನಿರಾಕರಿಸಿ ನಂತರ ಮನಬದಲಿಸಿ ಹಣ ಸ್ವೀಕರಿಸಿದ್ದಾರೆ. ಆದರೂ ಕೂಡ ಇದು ಕೋಮುವಾದಿಗಳಿಗೆ ಪ್ರೇರಣೆಯಿಂದಾಗಿ,ಮಹಿಳೆಯೊಬ್ಬಳು ಬೇರೆಯವರ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಾನವೀಯ ದೃಷ್ಟಿಯಿಂದ ಹಣ ನೀಡಿದ್ದೆ, ಆಕೆಯನ್ನು ಯಾರೋ ಎತ್ತಿಕಟ್ಟಿದ್ದಾರೆ!

ಹೀಗೆ ಮಾಡೋದ್ರಿಂದ ಕೋಮುವಾದಿಗಳಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತೆ. ಮತ್ತಷ್ಟು ಗಲಭೆ ಮಾಡಲು ಪ್ರೇರಣೆ ಆಗುತ್ತೆ ಎಂದು ತಿಳಿಸಿದ ಖಾದರ ಅವರು,ಅನ್ಯಾಯ ಮಾಡಿದವರಿಗೆ ಸಂತೋಷವಾಗುತ್ತೆ,ಈ ಘಟನೆಗೆ ಕೆಲವರು ಕುಮ್ಮಕ್ಕು ನೀಡುತ್ತಾರೆ. ಅವರಿಗೂ ಖಂಡಿತವಾಗಿ ಪಶ್ಚಾತ್ತಾಪವಾಗುತ್ತೆ ಅಂತ ಹೇಳಲು ಬಯಸುತ್ತೇನೆ ಎಂದು ತಿಳಿಸಿ,ಕೆರೂರು ಪಟ್ಟಣದಲ್ಲಿ ಉಂಟಾಗಿರುವ ಘಟನೆಯನ್ನು ಸರ್ಕಾರ ತನಿಖೆ ತಪ್ಪಿಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಯು ಟಿ ಖಾದರ್ ಒತ್ತಾಯಿಸಿದರು.

ಅಮೃತ ಮಹೋತ್ಸವದ ಮೂಲಕ ಕಾಂಗ್ರೆಸ್ ಒಗ್ಗಟ್ಟು ಪ್ರದಶ೯ನ.
ಇದೇ ಸಮಯದಲ್ಲಿ,ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಅಮೃತಮೊಹತ್ಸವ ವಿಚಾರ ವಾಗಿ ಮಾತನಾಡಿ, 75ನೇ ವರ್ಷದ ಅಮೃತಮೊಹತ್ಸವ ಸಮಿತಿ ವತಿಯಿಂದ ಕಾರ್ಯಕ್ರಮ ಮಾಡಲಾಗುತ್ತಿದೆ.ಕಾಂಗ್ರೆಸ್ ನವರು ಎಲ್ಲರು ಒಗ್ಗಟ್ಟಿನಿಂದ ಇದ್ದಾರೆ.
ಪಕ್ಷದ ಅಧ್ಯಕ್ಷರು ಕೂಡಾ ಕಾರ್ಯಕಾರಿಣಿ ಸಮಿತಿಯಲ್ಲಿ ಪಕ್ಷದ ಕಾರ್ಯಕ್ರಮವಾಗಿ ಮಾಡಿ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆದಾಗ, ಕೊಟ್ಟ ಹಲವಾರು ಕಾರ್ಯಕ್ರಮಗಳು,ಆವತ್ತಿನ ಸಿದ್ದು ಸರ್ಕಾರ ಮತ್ತು ಇವತ್ತಿನ ಬಿಜೆಪಿ ಸರ್ಕಾರ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಅವಲೋಕನ ಮಾಡುವ ವೇದಿಕೆಯನ್ನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಸಂಕೇತವಾಗಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

 ಸಂತೋಷ ಆತ್ಮಹತ್ಯೆ ಕೇಸ್ ನ್ಯಾಯಾಂಗ ತನಿಖೆಗೆ ಒಳಪಡಿಸಲಿ...
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ತನಿಖೆ ಕುರಿತು ರಾಜ್ಯಪಾಲರಿಗೆ ಪತ್ರ ವಿಚಾರವಾಗಿ ಮಾತನಾಡಿ,ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ತನಿಖೆಯಾಗಬೇಕು.ಆವತ್ತೇ ಕಾಂಗ್ರೆಸ್ ನ್ಯಾಯಾಂಗ ತನಿಖೆಗೆ ನೀಡಿ ಎಂದು ಹೇಳಿದೆ. ಈಗ ಸಂತೋಷ್ ಪಾಟೀಲ್ ಅವರ ಪತ್ನಿ ಅದೇ ವಿಚಾರ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.ಆ ಮಹಿಳೆಗೆ ನ್ಯಾಯ ಸಿಗಬೇಕು.ನ್ಯಾಯ ಕಲ್ಪಿಸಿಕೊಡುವ ಕೆಲಸ ಸರ್ಕಾರ ಮಾಡಬೇಕು.ಸಂತೋಷ್ ಪಾಟೀಲ ಪಕ್ಷದ ಕಾರ್ಯಕರ್ತ,ಸರ್ಕಾರಕ್ಕೆ ಡಬಲ್ ಜವಾಬ್ದಾರಿಯಿದೆ.ಸಂತೋಷ್ ಅವರ ಪತ್ನಿಯ ಬೇಡಿಕೆಯನ್ನು ಬಿಜೆಪಿ ಪಕ್ಷದ ಸರ್ಕಾರ ಈಡೇರಿಸಬೇಕಿದೆ ಎಂದರು.

ಕಾಳಜಿ ಕೇಂದ್ರ ಸ್ಥಾಪನೆ ಜತೆ ಜನರ ಕಾಳಜಿಯೂ ಅಗಲಿ
ಕಾಳಜಿ ಕೇಂದ್ರಗಳ ಸ್ಥಾಪನೆಯೊಂದೇ ಆದರೆ ಸಾಲದು, ಜನರ ಕಾಳಜಿಯೂ ಆಗಬೇಕಿದೆ ಎಂದು ಯು.ಟಿ ಖಾದರ್ ಸರ್ಕಾರಕ್ಕೆ ಕಿವಿಮಾತು ಹೇಳಿದರು, ಪ್ರವಾಹ ಮುಂಜಾಗ್ರತಾ, ಪ್ರವಾಹ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಇನ್ನು ಕರಾವಳಿ ,ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಿಂದ ಅಪಾರ ನಷ್ಟ ಉಂಟಾಗಿದೆ. ಗುಡ್ಡಗಳು ಕುಸಿದು ಮನೆ ಗಳು ಮಣ್ಣುಪಾಲಾಗಿವೆ. ಮಳೆ ಮತ್ತು ಪ್ರವಾಹ ದಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದ್ದು, 24 ಗಂಟೆಗಳಲ್ಲಿ ಪರಿಹಾರ ಎನ್ನುವುದು ಕೇವಲ ಹೇಳಿಕೆ ಆಗಿದ್ದು ಅನುಷ್ಠಾನ ಆಗಿಲ್ಲ ಎಂದು ದೂರಿದರು.

Latest Videos
Follow Us:
Download App:
  • android
  • ios