Asianet Suvarna News Asianet Suvarna News

ಹಿಜಾಬ್‌ ಬಗ್ಗೆ ಸಾಹಿತಿಗಳಿಂದ ಅನಗತ್ಯ ಗೊಂದಲ: ಶಾಸಕ ಯಶ್ಪಾಲ್‌ ಗರಂ

ಕಾಂಗ್ರೆಸ್‌ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ಗೆ ಅವಕಾಶ ನೀಡುವ ಮತ್ತು ಪಠ್ಯಪುಸ್ತಕಗಳನ್ನು ಬದಲಾಯಿಸುವ ಹೇಳಿಕೆಗೆ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Unnecessary confusion from literature about hijab MLA Yashpal outraged at udupi rav
Author
First Published Jun 1, 2023, 10:06 AM IST

ಉಡುಪಿ (ಜೂ.1) : ಕಾಂಗ್ರೆಸ್‌ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ಗೆ ಅವಕಾಶ ನೀಡುವ ಮತ್ತು ಪಠ್ಯಪುಸ್ತಕಗಳನ್ನು ಬದಲಾಯಿಸುವ ಹೇಳಿಕೆಗೆ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.C

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಅನಗತ್ಯ ಗೊಂದಲಗಳು ಶುರುವಾಗಿದೆ, ಕೆಲವು ಸಾಹಿತಿಗಳು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಪಠ್ಯಪುಸ್ತಕ, ಹಿಜಾಬ್‌ ವಿಚಾರದಲ್ಲಿ ಅಪಸ್ವರ ತೆಗೆದಿದ್ದಾರೆ. ಸಾಹಿತಿಗಳ ಬಗ್ಗೆ ನನಗೆ ಗೌರವ ಇದೆ, ಆದರೆ ಕೆಲವು ಸಾಹಿತಿಗಳು ಅನಗತ್ಯವಾಗಿ ಶಿಕ್ಷಣದಲ್ಲಿ ಗೊಂದಲ ಸೃಷ್ಟಿಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 

ಗ್ರಾಮೀಣ ಭಾಗದ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಿ ; ಯಶ್ ಪಾಲ್ ಸುವರ್ಣ

ಸಾಹಿತಿಗಳೇ ಗೊಂದಲ ಸೃಷ್ಟಿಸುವ ಬದಲು ನಿಮ್ಮೂರಿನ ಶಾಲೆಗಳ ಅಭಿವೃದ್ಧಿ ಮಾಡಿ, ಶಾಲೆಗಳ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ಸಲಹೆ ನೀಡಿದ ಯಶ್ಪಾಲ್‌, ಹಿಜಾಬ್‌ ಪ್ರಕರಣದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಧರ್ಮದ ಹಿನ್ನೆಲೆಯಲ್ಲಿ ಆಕ್ಷೇಪ ಮಾಡಿಲ್ಲ, ಅದೀಗ ಸುಪ್ರೀಂ ಕೋರ್ಟಿನಲ್ಲಿದೆ, ಆದ್ದರಿಂದ ಚರ್ಚೆ ಸೂಕ್ತ ಅಲ್ಲ, ಆದರೆ ಶಿಕ್ಷಣ ಸಂಸ್ಥೆಯೊಳಗೆ ಎಲ್ಲರೂ ಸಮಾನರು, ಮೇಲು ಕೀಳು ಸರಿಯಲ್ಲ, ಶಿಕ್ಷಣ ಸಂಸ್ಥೆಯ ಆಚಾರ ವಿಚಾರ ನಿಯಮ ತಿಳಿಯದೆ ಇಂತಹ ವಿಚಾರಗಳಿಗೆ ಸಾಹಿತಿಗಳು ಕೈ ಹಾಕಬಾರದು ಎಂದರು.

Follow Us:
Download App:
  • android
  • ios