ಉಚಿತ ಯೋಜನೆ ಘೋಷಿಸುವ ಕಾಂಗ್ರೆಸ್ ಇಷ್ಟುವರ್ಷ ಕತ್ತೆ ಕಾಯುತ್ತಿತ್ತಾ? : ಪ್ರಲ್ಹಾದ್ ಜೋಶಿ
ಅಕ್ಕಿ, ವಿದ್ಯುತ್ ಸೇರಿದಂತೆ ಹಲವು ಉಚಿತ ಯೋಜನೆಗಳನ್ನು ಘೋಷಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇಷ್ಟುವರ್ಷಗಳ ಕಾಲ ಕತ್ತೆ ಕಾಯುತ್ತಿತ್ತಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.
ಧಾರವಾಡ (ಫೆ.25) : ಅಕ್ಕಿ, ವಿದ್ಯುತ್ ಸೇರಿದಂತೆ ಹಲವು ಉಚಿತ ಯೋಜನೆಗಳನ್ನು ಘೋಷಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇಷ್ಟುವರ್ಷಗಳ ಕಾಲ ಕತ್ತೆ ಕಾಯುತ್ತಿತ್ತಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.
ಧಾರವಾಡ(Dharwad) ತಾಲೂಕಿನ ಸಂಸದರ ಆದರ್ಶ ಗ್ರಾಮ ಹಾರೋಬೆಳವಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
\ರಾಜ್ಯ ರಾಜಕಾರಣಕ್ಕೆ ಬರ್ತಾರಾ ಕೇಂದ್ರ ಸಚಿವ ಪ್ರಹ್ಲಾದ ಜೋಶಿ?
ನಾವು ಈಗಾಗಲೇ ಐದು ಕೆಜಿ ಉಚಿತ ಅಕ್ಕಿ ಕೊಡುತ್ತಿದ್ದೇವೆ. ಇನ್ನೈದು ಕೆಜಿ ಸೇರಿ ನಾವು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಕಾಂಗ್ರೆಸ್(Congress) ಹೇಳುತ್ತಿದೆ. ನಾವು ಹತ್ತು ಕೆಜಿ ಕೊಟ್ಟರೆ ಅವರು 20 ಕೆಜಿ ಕೊಡುತ್ತೇವೆ ಎನ್ನುತ್ತಾರೆ. ಕಾಂಗ್ರೆಸ್ಸಿನವರು ನೀಡಿದ ಭರವಸೆ ಈಡೇರಿಸಿದ್ದಾರೆಯೇ? ಅವರು ಹೇಳಿದ್ದೆಲ್ಲಾ ನೀಡಿದ್ದರೆ ಇವತ್ತೇಕೆ ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಿದ್ದರು?
ಕಾಂಗ್ರೆಸ್ ಸುಳ್ಳು ಹೇಳಲು ನಿಸ್ಸೀಮವಾದ ಪಕ್ಷ. 75 ವರ್ಷಗಳಲ್ಲಿ 57-58 ವರ್ಷ ಆಡಳಿತ ಮಾಡಿದ್ದಾರೆ. 24 ಗಂಟೆ ವಿದ್ಯುತ್ ಕೊಡುತ್ತೇವೆ ಎನ್ನುತ್ತಿದ್ದಾರೆ. ಹಾಗಾದರೆ, ಇಷ್ಟುದಿನ ಕತ್ತೆ ಕಾಯುತ್ತಿದ್ದರಾ ಎಂದ ಜೋಶಿ, ಕಾಂಗ್ರೆಸ್ಸಿನವರಿಗೆ ನಾಚಿಕೆ ಬರೋದಿಲ್ಲವೇ? ಅವರದ್ದು ಬರೀ ನಾಟಕದ ರಾಜಕೀಯ. ಸುಳ್ಳು ಹೇಳುವುದು ಕಾಂಗ್ರೆಸ್ಸಿನ ಡಿಎನ್‌ಎದಲ್ಲಿದೆ ಎಂದು ಟೀಕಿಸಿದರು.
ಬಿ.ಎಸ್. ಯಡಿಯೂರಪ್ಪ(BS Yadiyurappa) ಅವರ ವಿದಾಯ ಭಾಷಣ ಕುರಿತು ಮಾತನಾಡಿದ ಜೋಶಿ(Pralhad joshi), ಯಡಿಯೂರಪ್ಪ ನಮ್ಮ ಹಿರಿಯ ನಾಯಕರು. ಪಕ್ಷದ ಬೆಳವಣಿಗೆಗೆ ಸದಾ ಅವರನ್ನು ಬಳಸಿಕೊಳ್ಳುತ್ತೇವೆ. ಅವರಿಗೆ ಎಷ್ಟುದಿನ ಓಡಾಡುವ ಶಕ್ತಿ ಇದೆಯೋ ಓಡಾಡಲಿ. ಅವರಿಗೆ ದೇವರು ಆ ಶಕ್ತಿ ಕೊಡಲಿ. ಅವರ ಜನಪ್ರಿಯತೆ ಶಕ್ತಿಯನ್ನು ಬಿಜೆಪಿ ಸದಾ ಕಾಲ ಬಳಸಿಕೊಳ್ಳಲಿದೆ ಎಂದರು.
ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಸಚಿವ ಜೋಶಿ
ಮಾರ್ಚ್ 11 ರಂದು ಪ್ರಧಾನಿ ಮೋದಿ ಅವರಿಂದ ಧಾರವಾಡ ಐಐಟಿ ಉದ್ಘಾಟನೆ - ಪ್ರಲ್ಹಾದ್ ಜೋಶಿ
ಇಲ್ಲಿಯ ಐಐಟಿ ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಮಾ.11ರಂದು ಧಾರವಾಡಕ್ಕೆ ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ 3ಕ್ಕೆ ಐಐಟಿ ಉದ್ಘಾಟನೆ ಆಗುವುದು ನಿಶ್ಚಿತವಾಗಿದೆ. ಅದೇ ರೀತಿ ತುಪರಿ ಹಳ್ಳಕ್ಕೆ .312 ಕೋಟಿ ನೀಡಿದ್ದು, ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಕರೆಯಿಸಿ ತುಪರಿ ಹಳ್ಳದ ಯೋಜನೆಗೂ ಚಾಲನೆ ನೀಡಲಾಗುವುದು ಎಂದು ಕೇಂದ್ರಸಚಿವ ಜೋಶಿ ಹೇಳಿದರು.
ಮಾ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧಾರವಾಡ ಐಐಟಿ(Dharwad IIT) ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ(Inauguration) ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಧಾರವಾಡದಲ್ಲಿ ಇಂದು ಅಂತಿನ ಹಂತದಲ್ಲಿರುವ ಐಐಟಿ ನೂತನ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವರು, ಫಿನಿಶಿಂಗ್ ವರ್ಕ್ ಬೇಗ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಪ್ರಧಾನಿ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜೋಶಿ ನೂತನ ಕಟ್ಟಡವಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಐಟಿ ಉದ್ಘಾಟನೆ ಜೊತೆಗೆ ಪ್ರಧಾನಿ ಅವರು, ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಇದೇ ವೇಳೆ ಮಹದಾಯಿ ಯೋಜನೆ ವಿಚಾರವಾಗಿ ಮಾತನಾಡಿದ ಜೋಶಿ, ಮಹದಾಯಿ ನದಿ(Mahadayi river) ನೀರು ಹಂಚಿಕೆ ವಿಚಾರವಾಗಿ ಮೋದಿ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಈ ಹಿಂದೆ ಕಾಂಗ್ರೆಸ್ ಮಹಾನಾಯಕರು ರಾಜ್ಯಕ್ಕೆ ಮಹದಾಯಿಯ ಒಂದು ಹನಿ ನೀರು ಕೊಡಲ್ಲ ಎಂದಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3 ರಾಜ್ಯಗಳಿಗೂ ಹೆಚ್ಚು ನೀರು ಹೋಗಬಾರದು ಅಂತಾ ನಿರ್ವಹಣಾ ಪ್ರಾಧಿಕಾರ ರಚನೆ ಮಾಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಹದಾಯಿ ನೀರು ಹಂಚಿಕೆಯಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಮೋದಿಯವರಿಗೆ, ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಧನ್ಯವಾದ ಹೇಳುತ್ತೇನೆ ಎಂದರು.