ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಸಚಿವ ಜೋಶಿ
ಮಹದಾಯಿ ನೀರಿನ ಹಂಚಿಕೆ ಕುರಿತು ನ್ಯಾಯಮಂಡಳಿಯ ನಿರ್ಣಯದಂತೆ ಅನುಸರಣೆಗೆ, ಅನುಷ್ಠಾನಕ್ಕೆ ಈ ಪ್ರಾಧಿಕಾರ ಅನುಕೂಲವಾಗಲಿದೆ. ಮೂರು ರಾಜ್ಯಗಳ ಮಧ್ಯೆ ಸಹಯೋಗದೊಂದಿಗೆ ನೀರಿನ ಹಂಚಿಕೆ ಮಾಡುವ ಮೂಲಕ ಅಭಿವೃದ್ಧಿ ನಿಟ್ಟಿನಲ್ಲಿ ಹೆಜ್ಜೆ ಇಡಲು ಇದು ಸಹಾಯವಾಗಲಿದೆ: ಪ್ರಹ್ಲಾದ್ ಜೋಶಿ
ಬೆಂಗಳೂರು(ಫೆ.22): ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ 'ಮಹದಾಯಿ ಪ್ರವಾಹ' ಪ್ರಾಧಿಕಾರವನ್ನು ಸ್ಥಾಪಿಸಲು ನಿರ್ಧರಿಸಿದೆ. ಇದರಿಂದ ಮಹದಾಯಿ ನೀರಿನ ಹಂಚಿಕೆ ಕುರಿತು ನ್ಯಾಯಮಂಡಳಿಯ ನಿರ್ಣಯದಂತೆ ಅನುಸರಣೆಗೆ, ಅನುಷ್ಠಾನಕ್ಕೆ ಈ ಪ್ರಾಧಿಕಾರ ಅನುಕೂಲವಾಗಲಿದೆ. ಮೂರು ರಾಜ್ಯಗಳ ಮಧ್ಯೆ ಸಹಯೋಗದೊಂದಿಗೆ ನೀರಿನ ಹಂಚಿಕೆ ಮಾಡುವ ಮೂಲಕ ಅಭಿವೃದ್ಧಿ ನಿಟ್ಟಿನಲ್ಲಿ ಹೆಜ್ಜೆ ಇಡಲು ಇದು ಸಹಾಯವಾಗಲಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನ ಹಂಚಿಕೊಂಡ ಅವರು, ಪ್ರಾಧಿಕಾರ ಸ್ಥಾಪನೆಗೆ ಅನುಮತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಕೇಂದ್ರ ಜಲಶಕ್ತಿ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳನ್ನ ತಿಳಿಸಿದ್ದಾರೆ.
Karnataka Budget 2023: ಮಹದಾಯಿ ಯೋಜನೆಗೆ. ₹1000 ಕೋಟಿ-ಕಿಮ್ಸ್‌ನಲ್ಲಿ ಐವಿಎಫ್
ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಮಹದಾಯಿ ಯೋಜನೆ ಕುರಿತಂತೆ ನ್ಯಾಯಾಧಿಕರಣ ಈಗಾಗಲೇ ತೀರ್ಪು ನೀಡಿದೆ. ಆ ತೀರ್ಪಿನ ಅನುಷ್ಠಾನದ ಅಧಿಸೂಚನೆಯನ್ನು 2017ರಲ್ಲೇ ಕೇಂದ್ರ ಸರ್ಕಾರ ಹೊರಡಿಸಿತ್ತು. ಇದೀಗ ಡಿಪಿಆರ್ ಸಹ ಅನುಮೋದನೆಗೊಂಡಿದೆ. ಕಾನೂನು ಹೋರಾಟದಿಂದಲೇ ಯೋಜನೆ ಜಾರಿಗೆ ಬಂದಿದೆ. ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಫೆ.1 ರಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿಎಂ ಬೊಮ್ಮಾಯಿ ಅವರು, ಮಹದಾಯಿ ನ್ಯಾಯಾಧಿಕರಣದ ತೀರ್ಪಿನ ಬಗ್ಗೆ ಗೋವಾ ಮುಖ್ಯಮಂತ್ರಿ ಅಸಮಧಾನಗೊಂಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಹತ್ತು ವರ್ಷಗಳ ಕಾಲ ಎಲ್ಲ ಆಯಾಮಗಳಲ್ಲಿ ಪರಿಶೀಲನೆ ನಡೆಸಿ ನ್ಯಾಯಾಧಿಕರಣ ತೀರ್ಪು ನೀಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.