ರಾಹುಲ್‌ ಗಾಂಧಿಯವರಿಗೆ ಮಾನಸಿಕ ತೊಂದರೆ ಇದ್ದಂತೆ ಕಾಣುತ್ತಿದೆ. ಹೀಗಾಗಿಯೇ ಬಾಯಿಗೆ ಬಂದಂತೆ ಮಾತನಾಡಲು ಶುರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದರು. 

ಬಳ್ಳಾರಿ (ಮಾ.08): ರಾಹುಲ್‌ ಗಾಂಧಿಯವರಿಗೆ ಮಾನಸಿಕ ತೊಂದರೆ ಇದ್ದಂತೆ ಕಾಣುತ್ತಿದೆ. ಹೀಗಾಗಿಯೇ ಬಾಯಿಗೆ ಬಂದಂತೆ ಮಾತನಾಡಲು ಶುರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಅಮೆರಿಕ, ಇಂಗ್ಲೆಂಡ್‌ ಮತ್ತಿತರ ಕಡೆ ಓಡಾಡುತ್ತಿರುವ ರಾಹುಲ್‌ಗಾಂಧಿ ಅತ್ಯಂತ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಭಾಷಣ ಮಾಡುವಾಗ ನಮ್ಮ ಮೈಕ್‌ಗಳು ಆಫ್‌ ಆಗುತ್ತವೆ ಎಂದು ಹೇಳಿದ್ದಾರೆ. ಆದರೆ, ಜನರೇ ಅವರ ಮೈಕ್‌ಗಳನ್ನು ಆಫ್‌ ಮಾಡಿದ್ದಾರೆ. ಉಗ್ರಗಾಮಿಗಳು ಭೇಟಿ ಮಾಡಿದ್ದಾಗಿ ಹೇಳುತ್ತಾರೆ. 

ಅವರೇನು ಇವರ ಸಂಬಂಧಿಕರಾ. ಭಯೋತ್ಪಾದಕರ ಜತೆ ನಿಮ್ಮ ಸಂಬಂಧ ಒಳ್ಳೆಯದಿದೆ ಎಂದಾದರೆ ನಿಮ್ಮ ತಂದೆಯ ಸಂಬಂಧ ಸರಿ ಇರಲಿಲ್ಲವಾ. ಜೋಡೊ ಯಾತ್ರೆಯಲ್ಲಿ ಭಯೋತ್ಪಾದಕರು ಕಂಡರೆ ಇವರಾರ‍ಯಕೆ ದೂರು ಕೊಡಲಿಲ್ಲ ಎಂದು ಕೇಳಿದರು. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಇವರು ಲೋಕಸಭೆಯಲ್ಲಿ ಮಾಡಿದ್ದೇನು. ಇಡೀ ಮಂತ್ರಿ ಮಂಡಲ ಮಾಡಿದ ನಿರ್ಣಯಗಳನ್ನು ಹರಿದು ಹಾಕಿದ್ದಾರೆ. ಅವರ ಅಜ್ಜಿ ಹೇರಿದ್ದ ತುರ್ತು ಪರಿಸ್ಥಿತಿ ಜಾರಿಯನ್ನು ಮರೆತಿದ್ದಾರೆ ಎಂದು ಕಾಣಿಸುತ್ತದೆ. ರಾಹುಲ್‌ಗಾಂಧಿಗೆ ಮೆಂಟಲ್‌ ತೊಂದರೆ ಇರುವಂತೆ ಕಾಣುತ್ತಿದೆ. ಪ್ರಜಾಪ್ರಭುತ್ವಕ್ಕೆ ಗಂಡಾಂತರವಿದೆ ಎಂದು ಹೇಳುವ ಇವರನ್ನು ವೈದ್ಯರ ಬಳಿ ತೋರಿಸಬೇಕು ಎಂದು ಟೀಕಿಸಿದರು.

ಕಾಂಗ್ರೆಸ್ಸನ್ನು ಜನ ಗ್ಯಾರಂಟಿ ಮನೆಗೆ ಕಳಿಸ್ತಾರೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಣೆ ಕುರಿತು ಯಡಿಯೂರಪ್ಪನವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಯಡಿಯೂರಪ್ಪನವರು ಪಕ್ಷದ ಹಿರಿಯರು. ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ. ಅವರಿಗೆ ಮಾಹಿತಿ ಇರಬಹುದು. ಆದರೆ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಭ್ಯರ್ಥಿಗಳ ಪಟ್ಟಿಸೂಕ್ತ ಸಮಯದಲ್ಲಿ ಬಿಡುಗಡೆಯಾಗುತ್ತದೆ. ಚುನಾವಣೆ ಘೋಷಣೆಯಾದ ಕೂಡಲೇ ಪಟ್ಟಿಬಿಡುಗಡೆ ಮಾಡುತ್ತೇವೆ ಎಂದರು. ಶಾಸಕ ಮಾಡಾಳು ಜಾಮೀನು ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಬೇಲ್‌ ಸಿಕ್ಕಿದ್ದರಿಂದ ಒಳ್ಳೆಯದಾಗಲಿ. ಪ್ರಕರಣ ಕುರಿತು ನಮ್ಮ ಪಕ್ಷ ಸೂಕ್ತ ತನಿಖೆ ನಡೆಸುತ್ತಿದೆ. ರಾಷ್ಟ್ರೀಯ ನಾಯಕರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಕ್ರಮ ತೆಗೆದುಕೊಳ್ಳುವ ಬಗ್ಗೆ ಪಕ್ಷವೇ ತೀರ್ಮಾನ ಮಾಡಲಿದೆ ಎಂದರು.

ನಾವು ಮಾಡಿದ ಅಡುಗೆಯಲ್ಲಿ ಕಾಂಗ್ರೆಸ್‌ ಕಲ್ಲು: ಕಾಂಗ್ರೆಸ್‌ ಮಾಡಿದ ಅಡುಗೆ ನಾವು ಉಣ್ಣುತ್ತಿಲ್ಲ. ನಾವು ಮಾಡಿದ ಅಡುಗೆಗೆ ಕಾಂಗ್ರೆಸ್‌ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್‌ ನೀಡಿದರು. ಮಾ. 12ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿರುವ ಧಾರವಾಡ ಐಐಟಿಗೆ ಮಂಗಳವಾರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚೆಗೆ ಬೆಂಗಳೂರು-ಮೈಸೂರು ರಸ್ತೆ ವಿಷಯವಾಗಿಯೂ ಇದೇ ರೀತಿ ಸಿದ್ದರಾಮಯ್ಯನವರು ಬಾಲಿಶ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಇಂತಹ ಹಠಮಾರಿತನ ಇನ್ನಾದರೂ ಬಿಡಬೇಕು. 

ಜೆಡಿಎಸ್‌-ಕಾಂಗ್ರೆಸ್‌ನಿಂದ ಡೋಂಗಿ ರಾಜಕೀಯ: ಡಿ.ವಿ.ಸದಾನಂದಗೌಡ

ರಾಹುಲ್‌ ಗಾಂಧಿ ಅವರೊಂದಿಗೆ ಪಾದಯಾತ್ರೆ ಮಾಡಿದ ನಂತರ ಈ ರೀತಿ ಹೇಳಿಕೆಗಳನ್ನು ಅವರು ನೀಡುತ್ತಿದ್ದಾರೆ. ರಾಹುಲ್‌ ಗಾಂಧಿ ಮಾತನಾಡಿದರೆ ತಿಳಿವಳಿಕೆ ಇಲ್ಲ ಎನ್ನುವ ಕನಿಕರ ಬರುತ್ತದೆ. ಆದರೆ, 13 ಬಾರಿ ಬಜೆಟ್‌ ಮಂಡಿಸಿರುವ ಪ್ರಬುದ್ಧ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಈ ರೀತಿ ಮಾತನಾಡಬಾರದು. ರಾಜ್ಯಕ್ಕೆ ಬರುತ್ತಿದ್ದ ಐಐಟಿ ತಪ್ಪಿಸಲು ಸಿದ್ದರಾಮಯ್ಯ ಸಾಕಷ್ಟುಪ್ರಯತ್ನ ಮಾಡಿದರು. ಮೈಸೂರಿಗೆ ಒಯ್ಯಲು ಸಂಚು ಹೂಡಿದರು. ಅವರ ಪ್ರಯತ್ನ ವಿಫಲವಾಗಿ ಐಐಟಿ ಧಾರವಾಡಕ್ಕೆ ಬಂತು. ಆರ್‌.ವಿ. ದೇಶಪಾಂಡೆ ಅವರು ಕೈಗಾರಿಕಾ ಮಂತ್ರಿ ಇದ್ದಾಗ ಸರ್ಕಾರದ ಜಾಗ ನೀಡಿ ಸಹಕಾರ ನೀಡಿದ್ದಾರೆ. ಅಂದ ಮಾತ್ರಕ್ಕೆ ಅದನ್ನು ಸಿದ್ದರಾಮಯ್ಯ ಅಥವಾ ಕಾಂಗ್ರೆಸ್‌ ತಂದಿದೆ ಎನ್ನುವುದು ವಿತಂಡವಾದ ಎಂದು ಜೋಶಿ ಹೇಳಿದರು.