Asianet Suvarna News Asianet Suvarna News

ಜೆಡಿಎಸ್‌-ಕಾಂಗ್ರೆಸ್‌ನಿಂದ ಡೋಂಗಿ ರಾಜಕೀಯ: ಡಿ.ವಿ.ಸದಾನಂದಗೌಡ

ರಾಜ್ಯದಲ್ಲಿ ಡೋಂಗಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳನ್ನು ಜನರು ಕಿತ್ತೊಗೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಒತ್ತಾಯಿಸಿದರು. 

Ex CM DV Sadananda Gowda Slams On JDS And Congress At Mandya gvd
Author
First Published Mar 8, 2023, 11:05 AM IST

ಪಾಂಡವಪುರ (ಮಾ.08): ರಾಜ್ಯದಲ್ಲಿ ಡೋಂಗಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳನ್ನು ಜನರು ಕಿತ್ತೊಗೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಒತ್ತಾಯಿಸಿದರು. ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್‌- ಜೆಡಿಎಸ್‌ ಪಕ್ಷಗಳು ಮಂಡ್ಯ ಮೈಷುಗರ್‌ ಹಾಗೂ ಪಾಂಡವಪುರದ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿಸಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎರಡೂ ಕಾರ್ಖಾನೆಯನ್ನು ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು. ಮೇಲುಕೋಟೆ ಕ್ಷೇತ್ರದಲ್ಲಿ ಪಕ್ಷಕ್ಕೆ ಇಷ್ಟುದೊಡ್ಡ ಸಂಖ್ಯೆಯಲ್ಲಿ ಸೇರುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ. 

ಇನ್ನೆರಡು ತಿಂಗಳಲ್ಲಿ ಚುನಾವಣೆ ಬರುತ್ತಿದ್ದು ಪ್ರತಿಯೊಬ್ಬ ಕಾರ್ಯಕರ್ತರು ಎಚ್ಚರಿಕೆಯಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಕ್ಷೇತ್ರದಲ್ಲಿ ಡಾ.ಎನ್‌.ಇಂದ್ರೇಶ್‌ ಉತ್ತಮವಾದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗುರಿ ಹೊಂದಿದ್ದೇವೆ. ಅದರಲ್ಲಿ ಮೇಲುಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯೂ ಸಹ ಒಬ್ಬರಾಗಿರಬೇಕು ಎಂದು ಮನವಿ ಮಾಡಿದರು. ಶಾಸಕ ಎನ್‌.ಮಹೇಶ್‌ ಮಾತನಾಡಿ, ದೇಶದಲ್ಲಿ ಬದಲಾವಣೆ, ಪರಿವರ್ತನೆಯ ಕಾಲ ಆರಂಭವಾಗಿದೆ. 70 ವರ್ಷದಿಂದ ನಿಂತಿದ್ದ ದೇಶವನ್ನು ಚಲಿಸುವಂತೆ ಮೋದಿ ಮಾಡಿದ್ದಾರೆ ಎಂದರು. ಕಾಂಗ್ರೆಸ್‌ ಪಕ್ಷ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸಲು ಹೊರಟಿದ್ದಾರೆ. 

ಕಾಂಗ್ರೆಸ್‌ ಬಂದ್‌ ಮಾಡಿದರೆ ಕೋರ್ಟ್‌ ಆದೇಶ ಉಲ್ಲಂಘಿಸಿದಂತೆ: ಬಿಎಸ್‌ವೈ

ಅವರ ಅಧಿಕಾರಕ್ಕೆ ಬಂದರೆ ಯಾವುದೇ ಭರವಸೆಗಳನ್ನು ಈಡೇರಿಸೋಲ್ಲ. ಹಾಗಾಗಿ ಬಿಜೆಪಿ ಮತ ನೀಡುವಂತೆ ಮನವಿ ಮಾಡಿದರು. ಪಟ್ಟಣದ ಬನ್ನಾರಿ ಮಾರಮ್ಮನ ದೇವಸ್ಥಾನಕ್ಕೆ ಬಳಿ ಆಗಮಿಸಿದ ಬಿಜೆಪಿ ಪಕ್ಷದ ಗಣ್ಯರು ಬನ್ನಾರಿಮಾರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆಸಲ್ಲಿಸಿ ಬಳಿ ಜನಸಂಕಲ್ಪ ಯಾತ್ರೆಯ ರಥ ಏರಿದರು. ಬಳಿಕ ಅಲ್ಲಿಂದ ವಿವಿಧ ಕಲಾತಂಡಗಳ ಮೂಲಕ ಮೆರವಣಿಗೆ ಮೂಲಕ ಐದು ದೀಪವೃತ, ಹಳೇ ಬಸ್‌ ನಿಲ್ದಾಣ, ಹಿರೇಮರಳಿ ಆಟೋ ನಿಲ್ದಾಣದವರೆಗೆ ತೆರಳಿ ಯಾತ್ರೆ ಮುಕ್ತಾಯಗೊಳಿಸಿದರು. ಜಿಲ್ಲಾ ಉಸ್ತುವಾರಿ ನಿರ್ಮಲಾ ಕುಮಾರ ಸುರಾನ, ಮುಖಂಡ ಡಾ.ಎನ್‌.ಎಸ್‌.ಇಂದ್ರೇಶ್‌, ರಾಜ್ಯ ಉಪಾಧ್ಯಕ್ಷ ಪಾ.ನ.ಸುರೇಶ್‌, ಜಿಲ್ಲಾಧ್ಯಕ್ಷ ಉಮೇಶ್‌, ತಾಲೂಕು ಅಧ್ಯಕ್ಷ ಅಶೋಕ್‌, ಜಿಲ್ಲಾ ಕಾರ‍್ಯದರ್ಶಿ ಮಂಗಳಾ ನವೀನ್‌ಕುಮಾರ್‌ ಇತರರಿದ್ದರು.

ಅರ್ಧದಲ್ಲೇ ರಥಯಾತ್ರೆ ಕೈಬಿಟ್ಟ ಬಿಜೆಪಿ ನಾಯಕರು: ಪಟ್ಟಣಕ್ಕೆ ಆಗಮಿಸಿದ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಯಾತ್ರೆಯ ಅರ್ಧದಲ್ಲಿಯೇ ವಿಜಯ ರಥದಿಂದ ಇಳಿದು ಹೋದ ಪ್ರಸಂಗ ನಡೆಯಿತು. ನೆರೆಯ ಪಾಂಡವಪುರದಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಸಂಜೆ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ನೂರಾರು ಬಿಜೆಪಿ ಕಾರ್ಯಕರ್ತರ ಪಡೆಯೊಂದಿಗೆ ವಿಜಯ ಸಂಕಲ್ಪ ಯಾತ್ರಾ ರಥವನ್ನು ಸ್ವಾಗತಿಸಿದರು. 

ಯಾವುದೇ ಪೂರ್ವ ಸಿದ್ದತೆಯಿಲ್ಲದ ಕಾರಣ ಯಾತ್ರೆಗೆ ನಿರೀಕ್ಷಿತ ಪ್ರಮಾಣದ ಜನ ಇರಲಿಲ್ಲ. ಪಟ್ಟಣದಲ್ಲಿಂದು ಆಯೋಜಿಸಲಾಗಿದ್ದ ತ್ಯಾಗರಾಜ ಮಹೋತ್ಸವಕ್ಕೆ ಕರೆ ತಂದಿದ್ದ ಕಲಾ ತಂಡಗಳೊಂದಿಗೆ ಪೂರ್ಣಕುಂಭ ಹೊತ್ತ ಮಹಿಳೆಯರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೆರವಣಿಗೆಯ ಮೂಲಕ ಸಾಗಿ ನೆರೆಯ ನಾಗಮಂಗಲದ ಕಡೆ ತೆರಳಿತು. ಪ್ರವಾಸಿ ಮಂದಿರದ ಆವರಣಕ್ಕೆ ಆಗಮಿಸಿದ ಕೂಡಲೇ ನಿರೀಕ್ಷಿತ ಪ್ರಮಾಣದ ಜನ ಕಾಣದೆ ಮೆರವಣಿಯ ಮೂಲಕ ರಥಯಾತ್ರೆಯಲ್ಲಿ ಸಾಗುವ ಉತ್ಸಾಹ ತೋರದೆ ಬಿಜೆಪಿ ನಾಯಕರು ಹೊರಡಲು ಆತುರ ತೋರಿದರು. 

ಕಾಂಗ್ರೆಸ್ಸನ್ನು ಜನ ಗ್ಯಾರಂಟಿ ಮನೆಗೆ ಕಳಿಸ್ತಾರೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಆದರೆ ಒತ್ತಾಯಕ್ಕೆ ಮಣಿದು ಕೆಲದೂರ ರಥಯಾತ್ರೆಯಲ್ಲಿ ಸಾಗಿದರಾದರೂ ಅರ್ಧದಲ್ಲಿಯೇ ಇಳಿದು ಹೊರಟು ಹೋದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಸಿ.ನಾರಾಯಣಗೌಡರು, ಬೆಂಗಳೂರಿನಲ್ಲಿ ತುರ್ತು ಕಾರ್ಯಕ್ರಮವಿರುವ ಕಾರಣ ಸದಾನಂದಗೌಡರು ಹೋಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು. ನಾರಾಯಣಗೌಡ ಕಾಂಗ್ರೆಸ್‌ ಸೇರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ.ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ನಾರಾಯಣಗೌಡರು, ಬಿ.ಸಿ.ಪಾಟೀಲ್‌ ನನ್ನ ಸಹದ್ಯೋಗಿ. ಆದರೆ ಅವರಿಗೆ ನನ್ನ ವಿಷಯವನ್ನು ಪ್ರಸ್ತಾಪಿಸುವ ನೈತಿಕತೆಯಿಲ್ಲ ಎಂದು ಹೇಳಿದರು.

Follow Us:
Download App:
  • android
  • ios