Asianet Suvarna News Asianet Suvarna News

ಸೀತಾಪುರದಲ್ಲಿ ಮಣ್ಣಿನ ಮಗ ಸ್ಫೋಟಕ ಹೇಳಿಕೆ: ಡಿಕೆಶಿ ಜೈಲು ಸೇರುವ ಬಗ್ಗೆ ಹೆಚ್‌ಡಿಕೆ ಪರೋಕ್ಷ ಸುಳಿವು!

ಮೆಂಟಲ್ ಆದ್ರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಬಹುದು ಆದರೆ ಆತ ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ತೆಗೆದುಕೊಳ್ತಾರೆ ನೋಡೋಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಜೈಲು ಸೇರುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು.

Union minister hd kumaraswamy outraged against dcm dk shivakumar at sithapur mandya district rav
Author
First Published Aug 11, 2024, 12:59 PM IST | Last Updated Aug 11, 2024, 12:59 PM IST

ಮಂಡ್ಯ (ಆ.11): ನಾನು ಮೆಂಟಲ್ ಆತನೇ ಮೆಂಟಲ್ ಮುಂದೆ ನೋಡೋಣ ನಾವು ಮೆಂಟಲ್ ಆದ್ರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಬಹುದು ಆದರೆ ಆತ ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ತೆಗೆದುಕೊಳ್ತಾರೆ ನೋಡೋಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಜೈಲು ಸೇರುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು.

ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಡೆದ ಭತ್ತ ನಾಟಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾತಾನಾಡಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು, ಪದೇಪದೆ ನನ್ನ ಕೆಣಕದಂತೆ ಎಚ್ಚರಿಕೆ ನೀಡಿದರು. 

 

ನೂರಾರು ರೈತರೊಂದಿಗೆ ಇಂದು ಭತ್ತದ ಗದ್ದೆಗೆ ಇಳಿಯಲಿರುವ ಮಣ್ಣಿನಮಗ ಹೆಚ್‌ಡಿ ಕುಮಾರಸ್ವಾಮಿ!

ಇನ್ನು ತುಂಗಭದ್ರಾ ಡ್ಯಾಂ ವಿಚಾರವಾಗಿ ಮಾತನಾಡಿದ ಸಚಿವರು, ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತವಾಗಿದೆ 19ನೇ ಕ್ರಸ್ಟ್ ಗೇಟ್ ಓಪನ್ ಆಗಿದೆ. ಇದರಿಂದ 30 ಸಾವಿರ ಕ್ಯುಸೆಕ್ ನೀರು ನದಿಗೆ ವ್ಯರ್ಥವಾಗಿ ಹರಿಯುತ್ತಿದೆ. ಈ ಅನಾಹುತದಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತದೆ. ಇದು ರೈತರ ಬದುಕಿನ ಆಶಾಭಾವನೆಗೆ ಧಕ್ಕೆ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಕುಮಾರ ಸಿಎಂ ಜೊತೆ ಬಂಡೆ ತರಾ ನಿಲ್ತಾನಂತೆ; ಹಿಂದೆ ನನಗೂ ಹಿಂಗೇ ಹೇಳಿದ್ದ ಆಮೇಲೇನಾಯ್ತು? ಹೆಚ್‌ಡಿಕೆ ಕಿಡಿ

70 ವರ್ಷಗಳ‌ ಹಿಂದೆ ತುಂಗಭದ್ರಾ ಈ ಜಲಾಶಯ ಕಟ್ಟಿದ್ದಾರೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ತುಂಗಭದ್ರಾ ಅಷ್ಟೇ ಅಲ್ಲದೇ ನಾರಾಯಣಪುರ, ಅಲಮಟ್ಟಿ ಜಲಾಶಯದಲ್ಲೂ ಸ್ಟಾಪ್ ಲಾಕ್ ಗೇಟ್ ಅಳವಡಿಕೆ ಮಾಡಿಲ್ಲ. ಇದರಿಂದ ಡ್ಯಾಂನಲ್ಲಿ ನೀರು ಸಂಗ್ರಹಣೆ ಸಾಧ್ಯವಾಗಿಲ್ಲ. ರೈತರ ಬದುಕಿನ ಜೊತೆ ಚೆಲ್ಲಾಟವಾಡಿದ ಹಾಗೆಯೇ. ಟಿಬಿ ಡ್ಯಾಂ ಬೋರ್ಡ್ ಟೆಕ್ನಿಕಲ್ ವಿಚಾರದಲ್ಲಿ ಕಾಟಾಚಾರದ ವರದಿ ಕೊಟ್ಟಿದೆ. ಇದನ್ನು ಸರಿಪಡಿಸಿಕೊಳ್ಳಬೇಕಿದೆ. ಇದು ಕೆಆರ್‌ಎಸ್‌ ಡ್ಯಾಂ ವಿಚಾರದಲ್ಲಿ ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತು. ಕೆಆರ್‌ಎಸ್ ಡ್ಯಾಂನಲ್ಲೂ ಸ್ಟಾಪ್ ಲಾಕ್ ಗೇಟ್ ಇಲ್ಲ. ತುಂಗಭದ್ರ ಸಮಸ್ಯೆ ಸರ್ಕಾರದ ನಿರ್ಲಕ್ಷ್ಯ ಎನ್ನಲು ಆಗೊಲ್ಲ. ಡ್ಯಾಂಗೆ ಟೆಕ್ನಿಕಲ್ ಕಮಿಟಿ ಅಂತಾ ಇರುತ್ತೆ. ಆ ಕಮಿಟಿ ಪ್ರತಿವರ್ಷ ಏನೆಲ್ಲ ಸಮಸ್ಯೆಗಳಿವೆ ಎಂಬುದನ್ನ ಪರಿಶೀಲನೆ ಮಾಡಿ ವರದಿ ಸಲ್ಲಿಸುತ್ತೆ. ಆದರೆ ಅದು ಕಾಟಾಚಾರಕ್ಕೆ ಪರಿಶೀಲನೆ ಮಾಡಿದಾಗ ಈ ರೀತಿಯ ಅನಾಹುತಗಳು ಸಂಭವಿಸುತ್ತವೆ. ಈಗ ಆಗಿರೋದು ಇದೇ ಟೆಕ್ನಿಕಲ್ ಪರಿಣತಿ ಇರುವವರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದರು.

Latest Videos
Follow Us:
Download App:
  • android
  • ios