ಶಿವಕುಮಾರ ಸಿಎಂ ಜೊತೆ ಬಂಡೆ ತರಾ ನಿಲ್ತಾನಂತೆ; ಹಿಂದೆ ನನಗೂ ಹಿಂಗೇ ಹೇಳಿದ್ದ ಆಮೇಲೇನಾಯ್ತು? ಹೆಚ್‌ಡಿಕೆ ಕಿಡಿ
ಯಾವ ಎಸ್ ಎಂ ಕೃಷ್ಣ ನಿಮಗೆ ರಾಜಕೀಯ ಜೀವನ ಕೊಟ್ಟರೋ ಅವರ ಅಳಿಯ ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣ ಆಗಿದ್ದು ಯಾರು ಶಿವಕುಮಾರ ಅವರೇ? ಮ್ಯಾನ್ ಹೋಲ್ ಮುಚ್ಚಳ ಗಳನ್ನು ಕದ್ದು ಮಾರಿ ಜೀವನ ಮಾಡ್ತಾ ಇದ್ದವರು ಇವತ್ತು ನನ್ನ ಬಗ್ಗೆ ಮಾತಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು (ಆ.10): ಸಿದ್ದರಾಮಯ್ಯರ ಜೊತೆಗೆ ಬಂಡೆ ತರಾ ನಿಲ್ಲುತ್ತೇನೆ ಅಂತಾ ಶಿವಕುಮಾರ ಹೇಳಿದ್ದಾನೆ. ಇದೇ ತರ 2018-19ರಲ್ಲಿ ಹೀಗೆ ಹೇಳ್ತಾ ಇದ್ರು. ಆದರೆ ಆಮೇಲೆ ಏನಾಯ್ತು ಅಂತಾ ಗೊತ್ತಲ್ಲ? ಈಗ ಸ್ವಲ್ಪ ದೂರ ಇಟ್ಟಿದ್ದೇನೆ. ಸಿದ್ದರಾಮಯ್ಯನವರಿಗೆ ಕೂಡ ಹೀಗೆ ಆಗಬಹುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ತಾನು ಹಿಂದೂಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ತಾರೆ. ನೀವು ಕೇವಲ ಹಿಂದೂಳಿದವರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ, ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎಂಬುದು ನೆನಪಿರಲಿ. ಆದರೆ ಹಿಂದುಳಿದ, ಬಡವರ ಅಭಿವೃದ್ಧಿ ಮಾಡದೇ ಅವರ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ನೂರಾರು ಕೋಟಿ ಹಣ ಲೂಟಿ ಹೊಡೆದಿದ್ದಾರೆ. ವಾಲ್ಮೀಕಿ, ಮುಡಾ ಹಗರಣದಲ್ಲಿ ಸಿಎಂ ಕೈವಾಡ ಇದೆ. ಈ ಸರ್ಕಾರ ಬಂದಮೇಲೆ ಅಭಿವೃದ್ಧಿ ನಿಂತುಹೋಗಿದೆ. ಹಗರಣಗಳಲ್ಲಿ ಮುಳುಗಿದೆ. ನಾವು ಇದನ್ನ ಪ್ರಶ್ನಿಸಿದರೆ ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಕೆಲವರಿಗೆ ಉರಿ ಎಂದು ಹೇಳ್ತಾರೆ. ಅಲ್ಲ ಸ್ವಾಮಿ ನೀವು ಸರಿಯಾಗಿ ಆಡಳಿತ ಮಾಡಿದ್ರೆ ನಾವ್ಯಾಕೆ ಉರಿ ಪಟ್ಟುಕೊಳ್ಬೇಕು? ವಾಲ್ಮೀಕಿ ಹಗರಣ ಆಗಿದೆ, ಮುಡಾದಲ್ಲಿ ಹಗರಣ ನಡೆದಿದೆ. ಇದನ್ನೆಲ್ಲ ನೋಡಿಕೊಂಡು ವಿರೋಧ ಪಕ್ಷದವರಾಗಿ ನಾವು ಸುಮ್ಮನಿರಬೇಕಾ? ಈಗ ಹೊಸ ಸಂಪ್ರಾದಯ ಮಾಡಿದ್ದಾರೆ. ಆಡಳಿತ ಪಕ್ಷದವರೇ ಪ್ರಶ್ನೆ ಕೇಳ್ತಾರಂತೆ ವಿರೋಧ ಪಕ್ಷಗಳು ಉತ್ತರ ಕೊಡಬೇಕಂತೆ ಇದ್ಯಾವ ಸಂಪ್ರದಾಯ ಸ್ವಾಮಿ? ಎಂದು ಪ್ರಶ್ನಿಸಿದರು.
ನಾವು ಗಂಡಸಲ್ಲ, ಅವನೊಬ್ಬನೇ ಗಂಡ್ಸು; ನಪುಂಸಕ ಎಂದ ಹೆಚ್‌ಡಿಕೆ ವಿರುದ್ಧ ಡಿಕೆಶಿ ಏಕವಚನದಲ್ಲಿ ವಾಗ್ದಾಳಿ
ನನ್ನ ಪತ್ನಿ ಸಾರ್ವಜನಿಕ ಜೀವನದಲ್ಲಿ ಎಂದೂ ಕಾಣಿಸಿಕೊಂಡಿಲ್ಲ. ಪ್ರಾಮಾವಚನ ಸ್ವೀಕಾರ ಕಾರ್ಯಕ್ರಮಕ್ಕೂ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿಲ್ಲವೋ, ಪ್ರಮಾಣವಚನ ಕಾರ್ಯಕ್ರಮಕ್ಕೆ ಬಂದಿಲ್ಲವೋ ಅದು ನಾಡಿನ ಜನತೆಗೆ ಮುಖ್ಯ ಅಲ್ಲ. ನೀವು ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದಷ್ಟೇ ರಾಜ್ಯದ ಜನರಿಗೆ ಮುಖ್ಯ ಎಂದು ಟಾಂಗ್ ನೀಡಿದರು.
ಮುಡಾ ಹಗರಣದಲ್ಲಿ ಲಪಟಾಯಿಸಿರೋ ಭೂಮಿ ನಿಂಗನದ್ದೂ ಅಲ್ಲ, ದೇವರಾಜನದ್ದೂ ಅಲ್ಲ. ಅದು ಸರ್ಕಾರದ ಭೂಮಿ. ನಿಮ್ಮ ಬಾಮೈದ ಅದನ್ನು ಯಾವ ರೀತಿ ಖರೀದಿ ಮಾಡಿದ್ದ? ಅದನ್ನ ಪ್ರಶ್ನೆ ಮಾಡುತ್ತಾ ಇದ್ದೇವೆ. ಈಗ ಅದನ್ನು ವಾಪಸ್ ಕೊಡ್ತಿವಿ ಅಂತೀರಾ? ವಾಪಸ್ ಕೊಟ್ರೆ ತಪ್ಪು ಮುಚ್ಚಿ ಹೋಗುತ್ತಾ? ಎಂದು ಹರಿಹಾಯ್ದರು.
ಪುನಃ ಡಿಕೆ ಶಿವಕುಮಾರ ವಿರುದ್ಧ ವಾಗ್ದಳಿ ಹೆಚ್‌ಡಿ ಕುಮಾರಸ್ವಾಮಿ ಅವರು, ನನ್ನ ಮಗನ ವಿಚಾರ ಮಾತಾನಾಡ್ತಾರೆ. ಕುಮಾರಸ್ವಾಮಿ ತನ್ನ ಮಗನ ರಾಜಕೀಯ ಜೀವನಕ್ಕಾಗಿ ಅಣ್ಣನ ಮಗನ ಜೀವನ ಹಾಳು ಮಾಡಿದ್ದಾನೆ ಅಂತಾರೆ. ಯಾವ ಎಸ್ ಎಂ ಕೃಷ್ಣ ನಿಮಗೆ ರಾಜಕೀಯ ಜೀವನ ಕೊಟ್ಟರೋ ಅವರ ಅಳಿಯ ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣ ಆಗಿದ್ದು ಯಾರು ಶಿವಕುಮಾರ ಅವರೇ? ಮ್ಯಾನ್ ಹೋಲ್ ಮುಚ್ಚಳ ಗಳನ್ನು ಕದ್ದು ಮಾರಿ ಜೀವನ ಮಾಡ್ತಾ ಇದ್ದವರು ಇವತ್ತು ನನ್ನ ಬಗ್ಗೆ ಮಾತಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಯಾವ ರೇವಣ್ಣ ಸಿದ್ದರಾಮಯ್ಯ ಅವರ ವರ್ಗಾವಣೆ ಭ್ರಷ್ಟಾಚಾರದ ಬಗ್ಗೆ ನಂಬಲ್ಲ ಅಂತಿದ್ರೋ ಅದೇ ಸ್ನೇಹಿತನನ್ನ ನಂಬಿಸಿ ಕುತ್ತಿಗೆ ಕುಯ್ದುದ್ದು ನೀವು. ಅವರ ಇಬ್ಬರ ಮಕ್ಕಳನ್ನು ಜೈಲಿಗೆ ಕಳಿಸಿದ್ರಿ. ಆ ಹೆಣ್ಣ ಮಕ್ಕಳು ಬೇಲ್‌ಗಾಗಿ ಹೋರಾಡಿ, ಬೇಲ್ ತಂದುಕೊಂಡ್ರೆ(ಭವಾನಿ?) ಸುಪ್ರೀಂ ಕೋರ್ಟ್‌ಗೆ ಹೋಗಿ ಕ್ಯಾನ್ಸಲ್ ಆಗುವಂತೆ ಮಾಡಲು ಪ್ರಯತ್ನ ಮಾಡಿದ್ರಿ. ಆ ಹೆಣ್ಣುಮಗಳನ್ನೂ ಜೈಲಿಗೆ ಕಳಿಸಲು ಪ್ರಯತ್ನ ಮಾಡಿದ್ರಿ, ಅದಾದ ಬಳಿಕ ಯಡಿಯೂರಪ್ಪ ಅವರ ಮೇಲೂ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸಲು ನೋಡ್ತೀರ? ಯಡಿಯೂರಪ್ಪ ಅವರ ಫೋಟೊ ಇಟ್ಟುಕೊಂಡು ಪೂಜೆ ಮಾಡಬೇಕು ನೀವು ಕಾಂಗ್ರೆಸ್‌ನವರು. ನಾಚಿಕೆ ಆಗೊಲ್ವ ನಿಮಗೆ ಡಿಕೆ ಶಿವಕುಮಾರ ಅವರೇ? ಎಂದು ಹರಿಹಾಯ್ದರು.
'ಗಂಡಸ್ತನದ ರಾಜಕೀಯ ಮಾಡಿ..' ಡಿಕೆಶಿ-ಎಚ್‌ಡಿಕೆ ನಡುವೆ ನಾನಾ ನೀನಾ ಟಾಕ್ಫೈಟ್!
ಇನ್ನು ಮೋದಿ ಪ್ರಧಾನಿ ಆದ್ರೆ ದೇಶ ಬಿಟ್ಟು ಹೋಗ್ತೇನೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದ ಮಾತನ್ನ ಮತ್ತೆ ನಿನ್ನೆ ಹೇಳಿದ್ದೀರಿ. ಹೌದು ಹೇಳಿದ್ರು. ನಾನು ಇಲ್ಲ ಅನ್ನೊಲ್ಲ. ಗುಜರಾತ್‌ನಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ ಆ ಮಾತು ಹೇಳಿದ್ರು. ಆದರೆ ಅದು ಮೋದಿಯವರ ಮೇಲೆ ವೈಯಕ್ತಿಕ ದ್ವೇಷದಿಂದ ಹೇಳಿದ್ದೇನೂ ಅಲ್ವಲ್ಲ? ಎಂದು ಪ್ರಶ್ನಿಸಿದರು. ಹಾಗೆ ನೋಡಿದ್ರೆ ಹಿಂದೆ ಸೋನಿಯಾ ಗಾಂಧಿ ವಿರುದ್ಧ ಇದೇ ಸಿದ್ದರಾಮಯ್ಯ ಏನು ಮಾತಾಡಿದ್ರು? ಅದನ್ನೆಲ್ಲ ಈಗ ಕೇಳಿದ್ರೆ ಏನು ಹೇಳ್ತೀರಿ? ಎಂದು ಟಾಂಗ್ ನೀಡಿದರು.