Asianet Suvarna News Asianet Suvarna News

ನೂರಾರು ರೈತರೊಂದಿಗೆ ಇಂದು ಭತ್ತದ ಗದ್ದೆಗೆ ಇಳಿಯಲಿರುವ ಮಣ್ಣಿನಮಗ ಹೆಚ್‌ಡಿ ಕುಮಾರಸ್ವಾಮಿ!

ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಜಮೀನಿನಲ್ಲಿ ಇಂದು ನೂರಾರು ರೈತರೊಂದಿಗೆ 'ಮಣ್ಣಿನ ಮಗ' ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭತ್ತ ನಾಟಿ ಮಾಡಲಿದ್ದಾರೆ. ಆ ಮೂಲಕ ಮಂಡ್ಯ ರೈತರೊಂದಿಗೆ ನಾನಿದ್ದೇನೆ ಎಂಬ ಸಂದೇಶ ನೀಡಲಿದ್ದಾರೆ.

Union Minister HD Kumaraswamy will plant paddy in Sitapur village mandya today rav
Author
First Published Aug 11, 2024, 10:38 AM IST | Last Updated Aug 12, 2024, 11:55 AM IST

ಮಂಡ್ಯ (ಆ.11): ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಜಮೀನಿನಲ್ಲಿ ಇಂದು ನೂರಾರು ರೈತರೊಂದಿಗೆ 'ಮಣ್ಣಿನ ಮಗ' ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭತ್ತ ನಾಟಿ ಮಾಡಲಿದ್ದಾರೆ. ಆ ಮೂಲಕ ಮಂಡ್ಯ ರೈತರೊಂದಿಗೆ ನಾನಿದ್ದೇನೆ ಎಂಬ ಸಂದೇಶ ನೀಡಲಿದ್ದಾರೆ.

ಬೆಳಗ್ಗೆ 11.30ಕ್ಕೆ ಭತ್ತ ನಾಟಿ ಕಾರ್ಯಕ್ರಮ ಆರಂಭವಾಗಲಿದೆ ಕಾರ್ಯಕ್ರಮ ಬಳಿಕ ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ ಗ್ರಾಮದ ಲಕ್ಷ್ಮಣ ಎಂಬುವವರ ಜಮೀನಿನಲ್ಲಿ ಭತ ನಾಟಿ ಮಾಡಲಿರುವ ಕುಮಾರಸ್ವಾಮಿ. ನಾಟಿ ಕಾರ್ಯ ಮುಗಿದ ಬಳಿಕ ರೈತರೊಂದಿಗೆ ಬೆರೆತು ಊಟ ಮಾಡಲಿರುವ ಕೇಂದ್ರ ಸಚಿವರು. 2018ರಲ್ಲಿ ಸಿಎಂ ಆಗಿದ್ದಾಗಲೂ ಇದೇ ಗ್ರಾಮದಲ್ಲಿ ನೂರಾರು ರೈತರೊಂದಿಗೆ ಭತ್ತ ನಾಟಿ ಮಾಡುವ ಮೂಲಕ ತಾನು 'ಮಣ್ಣಿನ ಮಗ' ಎಂದು ಕುಮಾರಸ್ವಾಮಿ. ವಿರೋಧಿಗಳಿಗೆ ಟಕ್ಕರ್ ಕೊಟ್ಟಿದ್ದರು. ಇದೀಗ ಮತ್ತೆ ಕೇಂದ್ರ ಸಚಿವರಾಗಿರುವ ಹಿನ್ನೆಲೆ ಭತ್ತನಾಟಿ ಮಾಡಲಿದ್ದಾರೆ. 

ಶಿವಕುಮಾರ ಸಿಎಂ ಜೊತೆ ಬಂಡೆ ತರಾ ನಿಲ್ತಾನಂತೆ; ಹಿಂದೆ ನನಗೂ ಹಿಂಗೇ ಹೇಳಿದ್ದ ಆಮೇಲೇನಾಯ್ತು? ಹೆಚ್‌ಡಿಕೆ ಕಿಡಿ

ಇಂದು ಸೀತಾಪುರಕ್ಕೆ ಹೆಚ್‌ಡಿಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಭತ್ತದ ನಾಟಿ ಜಮೀನು ಹದಗೊಳಿಸಿ ಸಜ್ಜುಗೊಳಿಸಿದ್ದಾರೆ. ಗ್ರಾಮದ ರೈತರು, ಮಹಿಳೆಯರು ಕೇಂದ್ರ ಸಚಿವರೊಂದಿಗೆ ಭತ್ತ ನಾಟಿ ಮಾಡುವ ಉತ್ಸಾಹದಲ್ಲಿದ್ದಾರೆ. ಸೀತಾಪುರ, ಅರಳಕುಪ್ಪೆ ಗ್ರಾಮಗಳಲ್ಲಿ ಕೇಂದ್ರ ಸಚಿವ ಹೆಚ್‌ಡಿಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಬ್ಯಾನರ್ ಗಳು ರಾರಾಜಿಸುತ್ತಿವೆ

Latest Videos
Follow Us:
Download App:
  • android
  • ios