ಕ್ಷೇತ್ರ ಬಿಟ್ಟು ಹೋಗೋರಿಗೆ ಮತ ಹಾಕದಿರಿ: ಸಿದ್ದರಾಮಯ್ಯ ವಿರುದ್ಧ ಅಮಿತ್‌ ಶಾ ಕಿಡಿ

ವರುಣ, ಟಿ.ನರಸೀಪುರ ಮತ್ತು ನಂಜನಗೂಡು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳೊಂದಿಗೆ ಗೆಲ್ಲಿಸುವಂತೆ ಮನವಿ ಮಾಡಿ, ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್‌ ಶಾ 

Union Home Minister Amit Shah Slams Siddaramaiah grg

ಮೈಸೂರು(ಮೇ.03): ಪ್ರತಿ ಚುನಾವಣೆಯಲ್ಲೂ ಸಿದ್ದರಾಮಯ್ಯ ಏಕೆ ಕ್ಷೇತ್ರ ಹುಡುಕುತ್ತಾರೆ? ವರುಣ, ಚಾಮುಂಡೇಶ್ವರಿ, ಬಾದಾಮಿ ಯಾವ ಕಾರಣಕ್ಕೆ ಬದಲಾಯಿಸುತ್ತೀರಿ? ಇವರು ಅಭಿವೃದ್ಧಿ ಕೆಲಸ ಮಾಡದಿರುವುದರಿಂದ ಜನರು ಓಡಿಸುತ್ತಾರೆ. ವರುಣದ ಮತದಾರರಿಗೆ ನಿವೃತ್ತರಾಗುವವರು ಬೇಕೋ? ನಿರಂತರ ಕೆಲಸ ಮಾಡುವವರು ಬೇಕೋ ನಿರ್ಧರಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಾಗ್ದಾಳಿ ನಡೆಸಿದರು.

ವರುಣ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನ ಹೊಸಕೋಟೆಯಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಚಾಮುಂಡೇಶ್ವರಿ, ನಂಜುಂಡೇಶ್ವರ, ಸುತ್ತೂರು ಮಠಕ್ಕೆ ನಮಿಸಿ ಭಾಷಣ ಆರಂಭಿಸಿದ ಅಮಿತ್‌ ಶಾ ಅವರು, ವರುಣ, ಟಿ.ನರಸೀಪುರ ಮತ್ತು ನಂಜನಗೂಡು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳೊಂದಿಗೆ ಗೆಲ್ಲಿಸುವಂತೆ ಮನವಿ ಮಾಡಿ, ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರದಿಂದ ದಕ್ಷಿಣದವರೆಗೆ ಮತಬೇಟೆಗಿಳಿದ ತ್ರಿಮೂರ್ತಿಗಳು..ಏಕಕಾಲದಲ್ಲಿ ಮೋದಿ , ಅಮಿತ್‌ ಶಾ ,ನಡ್ಡಾ ಮತಶಿಕಾರಿ..!

ಸೋಮಣ್ಣನ ದೊಡ್ಡ ವ್ಯಕ್ತಿ ಮಾಡ್ತೇವೆ: 

ಈ ಕ್ಷೇತ್ರದಿಂದ ಸೋಮಣ್ಣನವರನ್ನು ಗೆಲ್ಲಿಸಿದರೆ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ. ಪ್ರಧಾನಿ ಮೋದಿ ಅವರು ಕರ್ನಾಟಕವನ್ನು ಸಮೃದ್ಧ, ಸುರಕ್ಷಿತ ಕರ್ನಾಟಕ ಮಾಡುವ ಗುರಿ ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಅವರು ಹೇಳಿದರು.

ಶಾ ಮತಬೇಟೆ : 

ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರೇವಣ್ಣ ಪರವಾಗಿ ಪ್ರಚಾರ ನಡೆಸಿದ ಅಮಿತ್‌ ಶಾ, ಬಳಿಕ ಚಾಮರಾಜನಗರದ ವಿವಿಧೆಡೆ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು. ಜಿಲ್ಲೆಯ ಹನೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಪ್ರೀತನ್‌ ನಾಗಪ್ಪ ಪರ ಪ್ರಚಾರ ನಡೆಸಿದರೆ, ಎನ್‌.ಮಹೇಶ್‌ ಪರ ಪ್ರಚಾರ ನಡೆಸಿ ಕೊಳ್ಳೇಗಾಲ ಕ್ಷೇತ್ರದ ಸಂತೆಮರಹಳ್ಳಿ ಸೇರಿದಂತೆ ವಿವಿಧೆಡೆ ಸಂಚರಿಸಿ ಮತಯಾಚನೆ ಮಾಡಿದರು.

ಕೆ.ಆರ್‌.ಪೇಟೆಯಲ್ಲಿ ನಾಳೆ ಶಾ ಮತಬೇಟೆ

ಮಂಡ್ಯ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಬಾಗಿಲು ತೆರೆದ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಗುರುವಾರ (ಮೇ 4) ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್‌ ಶಾ ಪ್ರಚಾರ ನಡೆಸಲಿದ್ದಾರೆ. ಇವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಸುಮಲತಾ ಅಂಬರೀಶ್‌ ಸಾಥ್‌ ನೀಡಲಿದ್ದಾರೆ.

Latest Videos
Follow Us:
Download App:
  • android
  • ios