ಪ್ರಧಾನಿ  ಮೋದಿ ರೋಡ್ ಶೋ ಹಿನ್ನೆಲೆ ಹಲವೆಡೆ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಇದೀಗ ವಾಹನ ಸವಾರರಿಗೆ ಕಿರಿಕಿರಿ ತಪ್ಪಿದೆ. ರೋಡ್ ಶೋ ಮುಗಿದ ರಸ್ತೆಗಳಲ್ಲಿ ಎಂದಿನಂತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಬೆಂಗಳೂರು (ಮೇ.6): ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಹಲವೆಡೆ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಇದೀಗ ವಾಹನ ಸವಾರರಿಗೆ ಕಿರಿಕಿರಿ ತಪ್ಪಿದೆ. ರೋಡ್ ಶೋ ಮುಗಿದ ರಸ್ತೆಗಳಲ್ಲಿ ಎಂದಿನಂತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಮೋದಿ ರೋಡ್ ಶೋ ಬಾಕಿ ಇರುವಾಗಲೇ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಎಲ್ಲೆಲ್ಲಿ ರೋಡ್ ಶೋ ಮುಕ್ತಾಯವಾಗಿದೆ ಅಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ರೋಡ್ ಶೋ ಸಾಗಿ ಮುಂದೆ ಬಂದ ರಸ್ತೆಗಳಲ್ಲಿ ಸಂಚಾರ ಎಂದಿನಂತೆ ಆರಂಭವಾಗಿದೆ.

ಬೆಂಗಳೂರಿನಲ್ಲಿ ಮೋದಿ ಮೆಘಾ ರೋಡ್ ಶೋ , ಭಜರಂಗಿ ಮುಖವಾಡ ಧರಿಸಿದ

ಈ ಮೂಲಕ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಿಸಿದ ಇಲಾಖೆ ನೋಡಿಕೊಂಡಿದೆ. ಜನದಟ್ಟಣೆ ಇರುವ ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಸುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸಂಬಂಧಿಸಿದಂತೆ ಹೈಕೋರ್ಟ್ ಗೆ ಅರ್ಜಿ ಕೂಡ ಸಲ್ಲಿಸಿ ಅನುಮತಿ ನೀಡಬಾರದು ಎಂದು ಮನವಿ ಮಾಡಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ರೋಡ್‌ ಶೋ ಗೆ ಅನುಮತಿ ಕೂಡ ನೀಡಿತ್ತು.

Scroll to load tweet…

ಪ್ರಧಾನಿ ಮೋದಿ ರೋಡ್ ಶೋ ರಥದ ವೇಗದಲ್ಲಿ ಬದಲಾವಣೆ! ಯಾವೆಲ್ಲ ರಸ್ತೆಗಳು ಬಂದ್?

ಮೋದಿ ನೋಡಲು ಜನಸಾಗರವೇ ಹರಿದು ಬಂದಿದೆ. ರಸ್ತೆಯ ಎರಡೂ ಬದಿಗಳಲ್ಲಿ ದನರು ಹೂಮಳೆ ಸುರಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಜನರು ಮೋದಿ ನೋಡಲು ಆಗಮಿಸಿದ್ದಾರೆ. ಶ್ರೀ ಸೋಮೇಶ್ವರ ಸಭಾ ಭವನ ಮೂಲಕ ಆರಂಭಗೊಂಡ ಮೋದಿ ರೋಡ್ ಶೋ , ಜೆಪಿನಗರ 5ನೇ ಹಂತದ ಮೂಲಕ ಸಾಗಿ ಮುಂದುವರೆದು ಮಧ್ಯಾಹ್ನ ಮಾಗಡಿ ರೋಡ್‌ ಜಂಕ್ಷನ್‌, ಶಂಕರಮಠ ವೃತ್ತದ ಮೂಲಕ ಸಾಗಿ ಮಲ್ಲೇಶ್ವರಂಗೆ ಆಗಮಿಸಲಿದೆ. ಬಳಿಕ ಮಲ್ಲೇಶ್ವರಂ 18ನೇ ರಸ್ತೆ ಜಂಕ್ಷನ್ ತಲುಪಲಿದೆ. ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿ ಮೋದಿ ರೋಡ್ ಶೋ ಅಂತ್ಯಗೊಳ್ಳಲಿದೆ. ಮೋದಿ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಮೋದಿಯ ಬೆಂಗಳೂರು ರೋಡ್ ಶೋನಲ್ಲಿ ಸುಮಾರು 10ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ.

Scroll to load tweet…