ಪ್ರಧಾನಿ ಮೋದಿ ರೋಡ್ ಶೋ ರಥದ ವೇಗದಲ್ಲಿ ಬದಲಾವಣೆ! ಯಾವೆಲ್ಲ ರಸ್ತೆಗಳು ಬಂದ್?

ನಾಳೆ ನಡೆಯಲಿರುವ ಮೋದಿ ರೋಡ್ ಶೋನಲ್ಲಿ ರಥದ ವೇಗದಲ್ಲಿ ಬದಲಾವಣೆ ಮಾಡಲಾಗಿದೆ. ಜೊತೆಗೆ ವಾಹನದ ಮುಂಭಾಗ 300-400 ಜನ ನಡೆದು ಹೋಗುವ ಪ್ಲಾನ್ ಕೂಡ ರದ್ದುಗೊಂಡಿದೆ.

BJP makes changes in PM Modi Bengaluru road show vehicle speed gow

ಬೆಂಗಳೂರು (ಮೇ.5): ನಾಳೆ ನಡೆಯಲಿರುವ ಮೋದಿ ರೋಡ್ ಶೋನಲ್ಲಿ ರಥದ ವೇಗದಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಮಾಡಿದ್ದ ರೋಡ್ ಶೋ ನಲ್ಲಿ ರಥದ ಸ್ಪೀಡ್ ಸುಮಾರು 10 ರಿಂದ 15 ಕಿ.ಮಿ ವೇಗದಲ್ಲಿ ಸಾಗುತ್ತಿತ್ತು. ಜೊತೆಗೆ ವಾಹನದ ಮುಂಭಾಗದಲ್ಲಿ 300-400 ಜನ ನಡೆದು ಹೋಗುವ ಪ್ಲಾನ್ ಕೂಡ ಮಾಡಿದ್ದರು. ಆದ್ರೆ ಈಗ ಆ ಪ್ಲಾನ್ ಕೈ ಬಿಡಲಾಗಿದೆ. ವಾಹನದ ವೇಗ 20-30km ವೇಗದಲ್ಲಿ ಸಾಗಿ, ರೋಡ್ ಶೋ ಬೇಗ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ. ಬಿಜೆಪಿಯವರು ಮೋದಿ ವಾಹನದ ಎದುರು 400 ಜನ ನಡೆದುಕೊಂಡು ಬರುವ ರೀತಿ ವ್ಯವಸ್ಥೆ ಮಾಡಿದ್ದರು‌. ಈಗ ಅದನ್ನು ರದ್ದು ಮಾಡಿದ್ದಾರೆ. ವಾಹನ ವೇಗವಾಗಿ ಚಲಿಸುತ್ತದೆ, ಹಾಗಾಗಿ ರೋಡ್ ಶೋ ಅವಧಿ ಕಡಿತಗೊಂಡಿದೆ.

ಮೋದಿ ರೋಡ್ ಶೋ ಹಿನ್ನೆಲೆ ರಸ್ತೆ ಸಂಚಾರದಲ್ಲಿ ಬದಲಾವಣೆ:
ನಾಳೆ ನಗರದಲ್ಲಿ ಮೋದಿ ರೋಡ್ ಶೋ ಹಿನ್ನೆಲೆ ವಾಹನ ಸವಾರರು ಪರ್ಯಾಯ ರಸ್ತೆಗಳನ್ನ ಬಳಸಲು ಸೂಚನೆ ನೀಡಲಾಗಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರ್ಯಾಯ ಮಾರ್ಗ ಉಪಯೋಗಿಸಲು ಸೂಚಿಸಲಾಗಿದೆ. ಸುಮಾರು 35 ರಸ್ತೆಗಳ ಬದಲಿಗೆ ಪರ್ಯಾಯ ರಸ್ತೆ ಬಳಸಲು ಸೂಚನೆ ನೀಡಲಾಗಿದೆ.

ಈ ರಸ್ತೆಗಳು ಸಂಪೂರ್ಣ ಬಂದ್!
ಜೆ ಪಿ ನಗರ ಆರ್ ಬಿಐ ಲೇಔಟ್, ರೋಸ್ ಗಾರ್ಡನ್ ಜೆ ಪಿ ನಗರ, ಶಿರ್ಸಿ ಸರ್ಕಲ್, ಜೆಜೆ ನಗರ, ಬಿನ್ನಿ ಮಿಲ್, ಶಾಲಿನಿ ಮೈದಾನ, ಸೌತ್ ಎಂಡ್ ಸರ್ಕಲ್, ಆರ್ಮುಗಂ ವೃತ್ತ, ಬುಲ್ ಟೆಂಪಲ್, ರಾಮಕೃಷ್ಣ ಆಶ್ರಮ, ಉಮಾ ಟಾಕೀಸ್, ಟಿ ಆರ್ ಮೀಲ್, ಚಾಮರಾಜಪೇಟೆ ಮುಖ್ಯರಸ್ತೆ, ಬಾಳೆಕಾಯಿ ಮಂಡಿ, ಕೆ ಪಿ ಅಗ್ರಹಾರ, ಮಾಗಡಿ ರಸ್ತೆ, ಚೋಳರಪಾಳ್ಯ, ಎಂ ಸಿ ವೃತ್ತ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂಸಿ ಲೇಔಟ್, ಬಿಜಿಎಸ್ ಮೈದಾನ, ಹಾವನೂರು ವೃತ್ತ, ಬಸವೇಶ್ವರ ನಗರ, ಶಂಕರಮಠ, ಮೋದಿ ಅಸ್ಪತ್ರೆ, ನವರಂಗ್, ಎಂಕೆಕೆ ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರೋಡ್, ಸ್ಯಾಂಕಿ ರಸ್ತೆ ಬಂದ್ ಆಗಲಿದೆ.

ಈ ರಸ್ತೆಯಲ್ಲಿ ಹಾದು ಹೋಗುವವರು ಬದಲಿಗೆ ಪರ್ಯಾಯ ಮಾರ್ಗ ಬಳಸಲು ಪೊಲೀಸರು ಸೂಚನೆ ನೀಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರಿಂದ ವಾಹನ ಸವಾರರಿಗೆ ಸೂಚನೆ ಇದ್ದು, ಮೋದಿ ರೋಡ್ ಶೋ ಮಾರ್ಗದಲ್ಲಿ ರಸ್ತೆ ಬಂದ್ ಜೊತೆಗೆ ರೋಡ್ ಶೋ ರಸ್ತೆಯ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲು ಸೂಚಿಸಲಾಗಿದೆ. ಯಾವುದೇ ವಾಹನಗಳು ಕೂಡ ಸಂಚಾರ ನಡೆಸದಂತೆ ನಿಷೇಧ ಹೇರಲಾಗಿದೆ. ರೋಡ್ ಶೋ ಆರಂಭಕ್ಕೆ ಎರಡು ಗಂಟೆ ಮೊದಲೇ ರಸ್ತೆ ಕ್ಲೋಸ್ ಆಗಲಿದೆ. ಮೋದಿ ರೋಡ್ ಶೋ ಮುಂದೆ ಹೋಗುತ್ತಿದ್ದಂತೆ ಎರಡು ಕಿಮೀ ಅಂತರದಲ್ಲಿ ರಸ್ತೆ ಕ್ಲಿಯರ್ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಬೆಂಗಳೂರು: EVM ಬಂದ ನಂತರ ಬಿಎಸ್‌ಪಿಗೆ ಸೋಲಾಯಿತು: ಮಾಯಾವತಿ!

ಪ್ರಧಾನಿ ಮೋದಿ ರೋಡ್ ಶೋ 18 ಕ್ಷೇತ್ರಗಳಲ್ಲಿ ಹಾದು ಹೋಗಲಿದೆ. ಒಂದೇ ದಿನ ರೋಡ್ ಶೋವನ್ನು ಎರಡು ದಿನ ಮಾಡಲಾಗಿದೆ. ಈ ಬೃಹತ್‌ ರೋಡ್‌ ಶೋನಲ್ಲಿ 10 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.

KARNATAKA ASSEMBLY ELECTION 2023: 2024ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಗಲಿದ್ಯಾ?

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios