Asianet Suvarna News Asianet Suvarna News

ಯಾದಗಿರಿಯಲ್ಲಿ ಜೋರಾದ ನಾಮಿನೇಷನ್ ಭರಾಟೆ, ಒಟ್ಟು 22 ನಾಮಪತ್ರ ಸಲ್ಲಿಕೆ!

ಯಾದಗಿರಿ ಜಿಲ್ಲೆ ಸಣ್ಣ ಜಿಲ್ಲೆಯಾದ್ರು ಇಲ್ಲಿನ ರಾಜಕೀಯ ಲೆಕ್ಕಾಚಾರಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ರಾಜಕೀಯ ರಣಾಂಗಣ ಅಕ್ಷರಶಃ ರಣರಂಗವಾಗಲಿದೆ. 

Total 22 nomination filing in Yadagiri gow
Author
First Published Apr 18, 2023, 7:38 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಏ.18): ಗಿರಿನಾಡು ಯಾದಗಿರಿಯಲ್ಲಿ ಬಿಸಲಿನ ತಾಪ ಹೆಚ್ಚಾದ್ದಂತೆ, ಚುನಾವಣಾ ರಣಕಣದ ಕಾವು ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಭರಾಟೆ ಕೂಡ ಜೋರಾಗಿದೆ. ಇಲ್ಲಿಯವರೆಗೂ ಯಾದಗಿರಿ ಜಿಲ್ಲೆಯಲ್ಲಿ 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

ನಾಲ್ಕು ಕ್ಷೇತ್ರದಲ್ಲಿ 22 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ:
ಯಾದಗಿರಿ ಜಿಲ್ಲೆ ಸಣ್ಣ ಜಿಲ್ಲೆಯಾದ್ರು ಇಲ್ಲಿನ ರಾಜಕೀಯ ಲೆಕ್ಕಾಚಾರಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ರಾಜಕೀಯ ರಣಾಂಗಣ ಅಕ್ಷರಶಃ ರಣರಂಗವಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿ ಸುರಪುರ, ಶಹಾಪುರ, ಯಾದಗಿರಿ ಹಾಗೂ ಗುರಮಠಕಲ್ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ. ಸುರಪುರ ಹೊರತುಪಡಿಸಿ ಉಳಿದ ಶಹಾಪುರ, ಯಾದಗಿರಿ ಹಾಗೂ ಗುರಮಠಕಲ್ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ನಿನ್ನೆ ಮತ್ತು ಇಂದು ವಿವಿಧ ಪಕ್ಷಗಲಕ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೂ 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಯಾದಗಿರಿ ಕಾಂಗ್ರೆಸ್ ನಿಂದ ಒಂದು, ಬಿಜೆಪಿಯಿಂದ ಎರಡು, ಜೆಡಿಎಸ್ ನಿಂದ ಒಂದು ಹಾಗೂ ಇತರೆ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಶಹಾಪುರದಲ್ಲಿ ಕಾಂಗ್ರೆಸ್ ನಿಂದ ಒಂದು, ಜೆಡಿಎಸ್ ನಿಂದ ಎರಡು, ಬಿಜೆಪಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿವೆ. ಸುರಪುರದಲ್ಲಿ ಬಿಜೆಪಿಯಿಂದ ಆರು, ಕಾಂಗ್ರೆಸ್ ಒಂದು ನ್ಯಾಮಿನೇಶನ್ ಮಾಡಲಾಗಿದೆ.

ಗುರಮಠಕಲ್ ನಿಂದ ಜೆಡಿಎಸ್  ನಾಲ್ಕು, ಕಾಂಗ್ರೆಸ್ ನಿಂದ ಒಂದು ಹಾಗೂ ಬಿಜೆಪಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಯಾದಗಿರಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ 2, ಚೆನ್ನಾರೆಡ್ಡಿ ತುನ್ನೂರು 1, ಜೆಡಿಎಸ್ ಅಭ್ಯರ್ಥಿ 1 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.  ಸುರಪುರ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ(ರಾಜುಗೌಡ) 4, ಮೈತ್ರಾ ನರಸಿಂಹ ನಾಯಕ 2, ರಾಜಾ ವೆಂಕಟಪ್ಪ ನಾಯಕ 1 ನ್ಯಾಮಿನೇಶನ್ ಮಾಡಿದ್ದಾರೆ. ಗುರಮಠಕಲ್ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು 4, ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ 1, ಬಿಜೆಪಿ ಅಭ್ಯರ್ಥಿ ಕು.ಲಲಿತಾ ಅನಪುರ 1 ನಾಮಪತ್ರ ಸಲ್ಲಿಕೆಯಾಗಿದೆ. ಇದೇ ರೀತಿ ಶಹಾಪುರ ಮತಕ್ಷೇತ್ರದ ರಣಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ 1, ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ 1 ಹಾಗೂ ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ ಅವ್ರು 2 ನ್ಯಾಮಿನೇಶನ್ ಮಾಡಿದ್ದಾರೆ. 

ತಮ್ಮ ಆಸ್ತಿ ಘೋಷಿಸಿದ ಅಭ್ಯರ್ಥಿಗಳು!
ಇನ್ನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಸುರಪುರ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ(ರಾಜುಗೌಡ) ಒಟ್ಟು 12 ಕೋಟ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಶಾಸಕ  ನರಸಿಂಹ ನಾಯಕ(ರಾಜುಗೌಡ) ಅವರ ಪತ್ನಿ ಮೈತ್ರಾ ಹಾಗೂ ಪುತ್ರ ಮಣಿಕಂಠ ನಾಯಕ ಅವರ ಅಸ್ತಿ ಸೇರಿದಂತೆ 7 ಕೋಟಿ ರೂ. ಚರಾಸ್ತಿ ಹಾಗೂ 5 ಕೋಟಿ ರೂ. ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 12.40 ಲಕ್ಷ ರೂ. ತಮ್ಮ ಕೈಯಲ್ಲಿ ಕ್ಯಾಶ್ ಪತ್ನಿ ಮೈತ್ರಾ ಅವರಲ್ಲಿ 3 ಲಕ್ಷ ರೂ. ನಗದು ಹಾಗೂ ತಮ್ಮ ಪುತ್ರ ಮಣಿಕಂಠ ಅವರಲ್ಲಿ 1.50 ಲಕ್ಷ ರೂ. ಇರುವಿದಾಗಿ ಘೋಷಿಸಿದ್ದಾರೆ. ಒಂದು ಪಾರ್ಚೂನರ್ ಕಾರು, ಒಂದು ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ ಕರ್ನಾಟಕ ಬ್ಯಾಂಕ್ ನಲ್ಲಿ ತಮ್ಮ ಕಾರಿನ‌ ಮೇಲೆ 16 ಲಕ್ಷ ರೂ. ಸಾಲವನ್ನು ಘೋಷಣೆ ಮಾಡಿದ್ದಾರೆ.

ಸುರಪುರ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕಾ ಅವರು ಒಟ್ಟು 12 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಚರಾಸ್ತಿ 2 ಕೋಟಿ ರೂ. ಮತ್ತು ಸ್ಥಿರಾಸ್ತಿ 10 ಕೋಟಿ ರೂ. ಎಂದು ಚುನಾಣಾಧಿಕಾರಿಗೆ ಸಲ್ಲಿಸಿದ ಆದಾಯ ಘೋಷಣಾ ಪ್ರಮಾಣಪತ್ರದಲದಲಿ ನಮೂದಿಸಿದ್ದಾರೆ. ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಅವರು ಒಟ್ಟು 17 ಕೋಟಿ ರೂ. ಆಸ್ತಿ ಘೋಸಿದ್ದಾರೆ. 3 ಕೋಟಿ ರೂ. ಚರಾಸ್ತಿ ಹಾಗೂ ಸ್ಥಿರಾಸ್ತಿ 14 ಕೋಟಿ ಹೊಂದಿರುವುದಾಗಿ ನಮೂದಿಸಿದ್ದಾರೆ. ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನಾರೆಡ್ಡಿ ತುನ್ನೂರು ಅವ್ರು ಒಟ್ಟು 6 ಕೋಟಿ ರೂ. ಆಸ್ತಿ ಘೋಸಿದ್ದಾರೆ. 

ಮಂಡ್ಯದಲ್ಲಿ ಹೆಚ್‌ಡಿಕೆ ಸೋಲಿಸಲು ಮೆಗಾ ಪ್ಲಾನ್: ಸುಮಲತಾ-ರಮ್ಯಾ ಕಣಕ್ಕೆ, ದಳಪತಿಗಳಿಗೆ ವಿರೋಧಿಗ

ಶಹಾಪುರದ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ ಅವರು 2.50 ಕೋಟಿ ರೂ. ಆಸ್ತಿ ಘೊಕಸೊದ್ದಾರೆ. ಶಹಾಪುರ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ ಅವ್ರು 15 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇನ್ನು ಗುರಮಠಕಲ್ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಅವ್ರು ಒಟ್ಟು ಆಸ್ತಿ 2 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಅವರ ತಂದೆಯವರಾದ ಶಾಸಕ ನಾಗನಗೌಡ ಕಂದಕೂರು ಅವ್ರುದು ಸಹ 2 ಕೋಟಿ ರೂ. ಯನ್ನು ಆದಾಯ ಪ್ರಮಾಣಪತ್ರದಲ್ಲಿ ನಮೂದಿಸಿದ್ದಾರೆ. 

ಶೆಟ್ಟರ್‌ರನ್ನು ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಪ್ರಯತ್ನಿಸಿದೆ: ಜೋಶಿ ಬೇಸರ

ಗುರಮಠಕಲ್ ಕಾಂಗ್ರೆಸ್ ಅಭ್ಯರ್ಥಿ 7 ಲಕ್ಷ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಅವರ ಪತ್ನಿ ಅಮರೇಶ್ವರಿ ಚಿಂಚನಸೂರ್ ಹೆಸರಿನಲ್ಲಿ ಚರಾಸ್ತಿ 83 ಲಕ್ಷ ರೂ. ಹಾಗೂ ಸ್ಥಿರಾಸ್ತಿ 8 ಕೋಟಿ ರೂ. ಘೋಷಣೆ. ಬಾಬುರಾವ್ ಚಿಂಚನಸೂರ್ ಪತ್ನಿ ಅಮರೇಶ್ವರಿ ಚಿಂಚನಸೂರ್ ಹೆಸರಿನಲ್ಲಿ ಒಟ್ಟು 8.83 ಕೋಟಿ ರೂ. ಹೊಂದಿದ್ದಾರೆ.

Follow Us:
Download App:
  • android
  • ios