ಮಂಡ್ಯದಲ್ಲಿ ಮತ್ತೆ ಮೊಳಗಲಿದೆ ಸ್ವಾಭಿಮಾನದ ಕಹಳೆ.  ನಿಖಿಲ್ ಸೋಲಿಸಿದ ರೀತಿಯಲ್ಲಿ ಹೆಚ್ಡಿಕೆ ಎದುರಿಸಲು ಸುಮಲತಾ ರಣತಂತ್ರ.  ಕಾಂಗ್ರೆಸ್ ನಿಂದ ರಮ್ಯಾರನ್ನು ಕಣಕ್ಕಿಳಿಸಲು ಸಿದ್ಧತೆ.

ಮಂಡ್ಯ (ಏ.18): ಮಂಡ್ಯ ವಿಧಾನಸಭಾ ಕ್ಷೇತ್ರ ರಂಗೇರಿದೆ. ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಯಾರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ಬಹಳ ಕುತೂಹಲ ಮೂಡಿಸಿದೆ. ಮೂರು ಪಕ್ಷಗಳಲ್ಲಿ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅಂತಿಮ ಹಂತದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಸಾಧ್ಯತೆ ಹಿನ್ನೆಲೆ ಎಚ್ಚೆತ್ತ ಕಾಂಗ್ರೆಸ್ ಮತ್ತು ಬಿಜೆಪಿ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಂಡಿದೆ. ಒಂದು ವೇಳೆ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ನಿಂತರೆ ಅವರನ್ನು ಕಟ್ಟಿ ಹಾಕುವ ಸಲುವಾಗಿ, ಸಹಜವಾಗಿಯೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ. ಹೀಗಾಗಿ ಮಂಡ್ಯದಲ್ಲಿ ಮತ್ತೆ ಸ್ವಾಭಿಮಾನದ ಕಹಳೆ ಮೊಳಗಲಿದೆ. 

ಹೆಚ್‌ಡಿಕೆ ಮಣಿಸಲು ಕಾಂಗ್ರೆಸ್ ನಿಂದ ಮೂವರು ನಾಯಕರು!
ಈ ಹಿನ್ನೆಲೆಯಲ್ಲಿ ಮಾಜಿ ಸಂಸದೆ ರಮ್ಯಾಗೆ ಟಿಕೆಟ್ ನೀಡಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ. ಬಹುತೇಕ ರಮ್ಯಾರನ್ನು ಕಣಕ್ಕಿಳಿಸುವ ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಕೈಗೊಂಡಿದೆ ಎನ್ನಲಾಗಿದೆ. ಒಂದು ವೇಳೆ ಮಾಜಿ ಸಂಸದೆ ರಮ್ಯಾ ಸ್ಪರ್ಧೆಗೆ ಒಪ್ಪಲಿಲ್ಲ ಎಂದಾದರೆ ಮಾಜಿ ಸಂಸದ ಚೆಲುವರಾಯಸ್ವಾಮಿ ಅವರನ್ನು ಕಣಕ್ಕಿಳಿಸಲು ಕೈ ಪಡೆ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ. ಇಲ್ಲವಾದರೆ ಹಾಲಿ ವಿಧಾನ ಪರಿಷತ್ ಸದಸ್ಯ ದಿನೇಶ್‌ ಗೂಳಿಗೌಡ ಅವರಿಗೆ ಅವಕಾಶ ನೀಡಬೇಕು ಎನ್ನುವ ಚರ್ಚೆ ಪಕ್ಷದಲ್ಲಿ ಇದೆ. ಈ ಕಾರಣಕ್ಕಾಗಿಯೇ ಮುಂದಿನ ಚುನಾವಣೆಗೆ ತಯಾರಾಗಿರಬೇಕೆಂದು ಸೂಚನೆ ಕೊಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಜತೆಗೆ ವರಿಷ್ಠರ ಸೂಚನೆಯಂತೆ ಮೂವರನ್ನು ಆಯ್ಕೆ ಮಾಡಲಾಗಿದೆ.

ಬಿಜೆಪಿಯಿಂದಲೂ ಮಾಸ್ಟರ್ ಪ್ಲಾನ್ ರೆಡಿ:
ಹೆಚ್‌ ಡಿಕೆ ವಿರುದ್ಧ ನಿಲ್ಲಲು ಕಾಂಗ್ರೆಸ್ ನಡೆಸಿರುವ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಪ್ರತಿತಂತ್ರ ಹೆಣೆದಿದೆ. ಹಾಲಿ ಸಂಸದೆ ಸುಮಲತಾ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲು ಲೆಕ್ಕಾಚಾರ ಬಿಜೆಪಿ ಲೆಕ್ಕಾಚಾರ ಹಾಕಿಕೊಂಡಿದೆ. ಸುಮಲತಾ ಅವರ ಆಪ್ತರ ಹೇಳಿಕೆಯನ್ನು ಗಮನಿಸಿದರೆ ಇದಕ್ಕೆ ಪೂರಕವಾದ ಎಲ್ಲ ಬೆಳವಣಿಗೆಗಳು ಅಂತಿಮ ಹಂತಕ್ಕೆ ಬಂದು ತಲುಪಿದೆ ಅನ್ನೋದು ಸ್ಪಷ್ಟವಾಗಿದೆ. ಇದಕ್ಕೆ ಬೇಕಾದಂತಹ ಎಲ್ಲಾ ತಯಾರಿಗಳು ಕೂಡ ಈಗಾಗಲೇ ನಡೆದಿದೆ. 

ಇನ್ನು ಗುರುವಾರ ಮಂಡ್ಯದಲ್ಲಿ ಎಚ್​ಡಿಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಮ. 2.30ಕ್ಕೆ ನಾಮಪತ್ರ ಸಲ್ಲಿಸಲು ಎಚ್​ಡಿಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಗುರುವಾರ ಬೆಳಗ್ಗೆ ಸಂಸದೆ ಸುಮಲತಾ ನಾಮಪತ್ರ ಸಾಧ್ಯತೆ ಇದೆ ಎನ್ನಲಾಗಿದೆ. ಮಂಡ್ಯದಿಂದ ಸ್ಪರ್ಧೆಗೆ ಗ್ರೀನ್​ ಸಿಗ್ನಲ್​ ನೀಡಿರುವ ಸುಮಲತಾ. ಪಕ್ಷೇತವಾಗಿ ಅಥವಾ ಬಿಜೆಪಿಯಿಂದಲೋ ಎಂಬ ಬಗ್ಗೆ ಚರ್ಚೆ ಇದೆ. ಈ ಗೊಂದಲಕ್ಕೆ ಕಾನೂನು ತಜ್ಞರ ಜೊತೆ ಸಂಸದೆ ಸುಮಲತಾ ಸಮಾಲೋಚನೆ ಮಾಡಿದ್ದಾರಂತೆ. ಇಲ್ಲವಾದರೆ ಪಕ್ಷೇತರವಾಗಿ ಬಿಜೆಪಿ ಬೆಂಬಲಿತವಾಗಿ ಸುಮಲತಾ ಅಭ್ಯರ್ಥಿಯಾಗಲಿದ್ದಾರೆ.\

ಬಿಜೆಪಿಯಲ್ಲಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ್ ನೇರ ಕಾರಣ, ಶೆಟ್ಟರ್ ಗಂಭೀರ

ಇವೆಲ್ಲ ಬೆಳವಣಿಗೆಗಳು ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರ ಎನ್ನುವುದರ ಮೇಲೆ ನಿಂತಿದೆ. ಒಂದು ವೇಳೆ ಹೆಚ್‌ಡಿಕೆ ಸ್ಪರ್ಧೆ ಮಾಡದೇ ಇದ್ದರೆ ಕಾಂಗ್ರೆಸ್ ನಿಂದ ರವಿ ಗಣಿಗ ಅವರಿಗೆ ಕಾಂಗ್ರೆಸ್ ಬಿ ಫಾರಂ ಕೊಡಲಿದೆ. ಮಂಡ್ಯ ಬಿಜೆಪಿ ಅಭ್ಯರ್ಥಿಯಾಗಿರುವ ಅಶೋಕ್​ ಜಯರಾಂ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಕೈತಪ್ಪಿದ ಬಿಜೆಪಿ ಟಿಕೆಟ್, ಜೆಡಿಎಸ್‌ ಗಾಳಕ್ಕೆ ಸಿಕ್ಕಿದ ರಾಮದಾಸ್‌!?

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.