ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ರಚನೆ: ಸಚಿವ ಸುಧಾಕರ್‌

ಈ ಬಾರಿ ಮತ್ತೆ ಅಧಿಕಾರಕ್ಕೆ ಬಿಜೆಪಿ ಸರ್ಕಾರ ಬಂದೇ ಬರುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಡಾ.ಕೆ.ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು. 

This time BJP government formation again Says Minister Dr K Sudhakar gvd

ಚಿಕ್ಕಬಳ್ಳಾಪುರ (ಮೇ.11): ಈ ಬಾರಿ ಮತ್ತೆ ಅಧಿಕಾರಕ್ಕೆ ಬಿಜೆಪಿ ಸರ್ಕಾರ ಬಂದೇ ಬರುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಡಾ.ಕೆ.ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತಗಟ್ಟೆಗಳಿಗೆ ಭೇಟಿ ನೀಡಿ ನಗರದ ಸಂತ ಜೋಸೆಫ್‌ ಕಾನ್ವೆಂಟ್‌ ಶಾಲೆಯ ಬಳಿಯ ಮತಗಟ್ಟೆಗಳಿಗೂ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪಧಿ​ರ್‍ಸಿದ್ದೇನೆ. ಕಳೆದ ಮೂರು ಬಾರಿಯಂತೆ ಈ ಬಾರಿಯೂ ತಮ್ಮನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ. ಕ್ಷೇತ್ರದ ಮತದಾರರು ತಮ್ಮ ಕೈಬಿಡುವುದಿಲ್ಲ ಎಂದರು.

ಕೊರೋನಾ ವೇಳೆ ನೆರವಾಗಿದ್ದೇನೆ: ಅತ್ಯಂತ ಕ್ಲಿಷ್ಟಕರ ಸಮಯವಾದ ಕೋವಿಡ್‌-19 ಮಹಾ ಮಾರಿ ತನ್ನ ಕದಂಬ ಬಾಹು ಚಾಚಿದ ವೇಳೆ ತಾವು ಕರುನಾಡಿನ ಆರೋಗ್ಯ ಸಚಿವರಾಗಿ ಅ​ಧಿಕಾರ ವಹಿಸಿಕೊಂಡು ಜನತೆಗೆ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳನ್ನು ನೀಡಿದ್ದೇನೆ. ಕೋವಿಡ್‌ನಿಂದ ಲಾಕ್‌ಡೌನ್‌ ಆಗಿ ಜನತೆ ಕೆಲಸವಿಲ್ಲದೇ ಕಂಗಾಲಾಗಿದ್ದಾಗ ಕ್ಷೇತ್ರದ ಜನತೆಗೆ ಎರಡು ಬಾರಿ ಉಚಿತವಾಗಿ ಆಹಾರ ಪದಾರ್ಥಗಳನ್ನು ಮತ್ತು ತರಕಾರಿಗಳನ್ನು ನನ್ನ ಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್‌ ನಿಂದ ನೀಡಿದ್ದೆ ಅಲ್ಲದೆ, ರಾಜ್ಯದ ಜನರಿಗೆ ಉಚಿತವಾಗಿ ಕೋವಿಡ್‌ ನಿರೋಧಕ ಲಸಿಕೆ ನೀಡಿ ಜನರ ಪ್ರಾಣ ಉಳಿಸಿದ್ದೇವೆ ಎಂದರು.

ಕಾಂಗ್ರೆಸ್‌, ಬಿಜೆಪಿ ರಾತ್ರೋರಾತ್ರಿ ಹಣ ಹಂಚಿವೆ: ವಾಟಾಳ್‌ ನಾಗರಾಜ್‌

ಕ್ಷೇತ್ರದಲ್ಲಿ ಜನತೆಯ ಆರೋಗ್ಯ ದೃಷ್ಟಿಯಿಂದ ಮೆಡಿಕಲ್‌ ಕಾಲೇಜು ಮತ್ತು ನಗರ ಮತ್ತು ಗ್ರಾಮೀಣ ಬಾಗದ ಜನತೆಯ ಆರೋಗ್ಯ ದೃಷ್ಟಿಯಲ್ಲಿಟ್ಟು ಕೊಂಡು ಎಲ್ಲಾ ಆರೋಗ್ಯ ಕೇಂದ್ರಗಳನ್ನು ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಿದ್ದೇನೆ. ತಮ್ಮ ತಾಯಿ ಶಾಂತಾರವರ ಹೆಸರಿನಲ್ಲಿ ಆರು ಮೋಬೈಲ್‌ ಕ್ಲಿನಿಕ್‌ ಗಳನ್ನು ತೆರೆದು ಜನರ ಮನೆ ಬಾಗಿಲಿಗೆ ಉಚಿತವಾಗಿ ಆರೋಗ್ಯ ಸೇವೆ, ತಪಾಸಣೆ, ಮಧು ಮೇಹಿ, ರಕ್ತದೊತ್ತಡದ ರೋಗಿಗಳಿಗೆ, ರಕ್ತ ಪರೀಕ್ಷೆ ಮತ್ತು ಔಷಧಗಳು ದೊರೆಯುವಂತೆ ಮಾಡಿರುವುದಾಗಿ ತಿಳಿಸಿದರು.

ಮಾಗಡಿ ಕ್ಷೇತ್ರದ ಜನ ನನ್ನ ಕೈ ಹಿಡಿಯುವ ನಂಬಿಕೆ ಇದೆ: ಬಾಲಕೃಷ್ಣ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ: ಬರಡಾಗಿದ್ದ ಬಯಲು ಸೀಮೆಯ ಕೆರೆಗಳಿಗೆ ಹೆಚ್‌.ಎನ್‌.ವ್ಯಾಲಿಯ ಶುದ್ದೀಕರಣ ಮಾಡಿ ಹರಿಸಿದ್ದರಿಂದ ಬತ್ತಿದ್ದ ಕೊಳವೆ ಬಾವಿಗಳು ಪುನಃ ಚೇತನಗೊಂದು ಸಸ್ಯ ಶಾಮಲ ಮಾಡಿದ್ದೇನೆ. 22ಸಾವಿರ ವಸತಿ ರಹಿತರಿಗೆ ನಿವೇಶನಗಳನ್ನು ನೀಡಲಾಗಿದೆ. ದೂರದೃಷ್ಟಿಇಟ್ಟುಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ ಎಂದರು. ಕ್ಷೇತ್ರದಲ್ಲಿ ಯಾರಿಗೂ ಭೇದಭಾವ ಎಣಿಸದೆ ಎಲ್ಲರಿಗೂ ಸರ್ಕಾರ ಮತ್ತು ತಮ್ಮ ಸಾಯಿ ಕೃಷ್ಣ ಚಾರಿಟಬಲ್‌ ಟ್ರಸ್ಟ್‌ ನಿಂದ ಸವಲತ್ತುಗಳನ್ನು ನೀಡಿದ್ದೇನೆ. ಮುಂದೆಯೂ ಸಹಾ ಕ್ಷೇತ್ರದಲ್ಲಿ ಕೋಮು ಸೌರ್ಹಾದತೆ ಮತ್ತು ಶಾಂತಿ ಕಾಪಾಡಿ ಕೊಂಡು ಬರುವುದಾಗಿ ತಿಳಿಸಿದರು.

Latest Videos
Follow Us:
Download App:
  • android
  • ios