ಮಾಗಡಿ ಕ್ಷೇತ್ರದ ಜನ ನನ್ನ ಕೈ ಹಿಡಿಯುವ ನಂಬಿಕೆ ಇದೆ: ಬಾಲಕೃಷ್ಣ

ಕ್ಷೇತ್ರದಲ್ಲಿ ನನ್ನ ಪರವಾಗಿ ಮತದಾರರು ಒಲವನ್ನು ತೋರಿದ್ದು ಶೇಕಡ 90ರಷ್ಟುಕ್ಷೇತ್ರದ ಮನೆಗಳಿಗೆ ತೆರಳಿದ್ದು ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. 

I believe that the people of Magadi Constituency will hold my hand Says HC Balakrishna gvd

ಮಾಗಡಿ (ಮೇ.11): ಕ್ಷೇತ್ರದಲ್ಲಿ ನನ್ನ ಪರವಾಗಿ ಮತದಾರರು ಒಲವನ್ನು ತೋರಿದ್ದು ಶೇಕಡ 90ರಷ್ಟು ಕ್ಷೇತ್ರದ ಮನೆಗಳಿಗೆ ತೆರಳಿದ್ದು ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಹುಲಿಕಟ್ಟೆ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸೋಲು ಅನು​ಭ​ವಿ​ಸಿದ್ದೆ. 

ಈಗ ಜನರು ನಿನ್ನನ್ನು ಸೋಲಿಸಿ ತಪ್ಪು ಮಾಡಿದ್ದೇವೆ. ನೀನು ನಮ್ಮ ಮನೆಯ ಮಗನಾಗಿದ್ದು ಈ ಬಾರಿ ನಿನ್ನನ್ನು ಗೆಲ್ಲಿಸುತ್ತೇವೆಂದು ಭರ​ವಸೆ ನೀಡಿ​ದ್ದಾರೆ. ಬಿಜೆಪಿ ಪಕ್ಷದ ಮೇಲೆ ಜನ ಬೇಸತ್ತಿರುವ ಜನ​ರಿಗೆ ಜೆಡಿಎಸ್‌ ಪಕ್ಷದ ಮೇಲೆ ಒಲವಿಲ್ಲ. ಆದ ಕಾರಣ ಕಾಂಗ್ರೆಸ್‌ ಪಕ್ಷವನ್ನು ಕೈ ಹಿಡಿಯುವ ವಿಶ್ವಾಸವಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಹಿನ್ನೆಲೆಯಲ್ಲಿ ಮಾಗಡಿಯಲ್ಲೂ ಕಾಂಗ್ರೆಸ್‌ ಪಕ್ಷ ಗೆಲ್ಲುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ 141ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಃಸಿದ್ದ: ಡಿಕೆಶಿ

ಮಂತ್ರಿ ಆಕಾಂಕ್ಷಿಯಾಗಿದ್ದೇನೆ : ಈ ಬಾರಿ ಗೆಲುವು ಸಾಧಿಸಿದರೆ ಕ್ಷೇತ್ರದ ಜನ ಐದು ಬಾರಿ ನನಗೆ ಶಾಸಕರನ್ನಾಗಿ ಮಾಡಿದಂತಾಗುವ ಹಿನ್ನೆಲೆಯಲ್ಲಿ ನಾನು ಕೂಡ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಬಲ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು ನಮ್ಮ ಪಕ್ಷದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗಿದೆ. ಕ್ಷೇತ್ರದಲ್ಲಿ ಎಲ್ಲರೂ ಕೂಡ ಮಂತ್ರಿಯಾಗಿ ಕೆಲಸ ಮಾಡಿ ಎಂದು ಹೇಳುತ್ತಿದ್ದು ಐದು ವರ್ಷದ ಆಡಳಿತ ಪಕ್ಷದ ಅವಧಿಯಲ್ಲಿ ಮಾಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇನೆ. 

ಕ್ಷೇತ್ರದ ಜನತೆ ನನಗೆ ಕೈ ಹಿಡಿಯುತ್ತಾರೆಂಬ ಪೂರ್ಣ ವಿಶ್ವಾಸವಿದೆ. ನಾನು ಅರ್ಜುನನ ರೀತಿಯಲ್ಲಿ ಡಿ.ಕೆ. ಶಿವಕುಮಾರ್‌ ರವರು ಶ್ರೀ ಕೃಷ್ಣನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ಬಾಲಕೃಷ್ಣ ಹೇಳಿದರು. ಕುಟುಂಬ ಸಮೇತರಾಗಿ ಮಾಜಿ ಶಾಸಕ ಬಾಲಕೃಷ್ಣರವರು ಮತದಾನ ಬಾಲಕೃಷ್ಣ ರವರ ಪತ್ನಿ ಮಕ್ಕಳು ಹಾಗೂ ಸಂಬಂಧಿಕರು ಹುಲಿಕಟ್ಟೆಮತಗಟ್ಟೆಯಲ್ಲಿ ಮತದಾನ ಮಾಡಿದರು.

ನನ್ನ ವಿರುದ್ಧ ಷಡ್ಯಂತ್ರ ಮಾಡ​ಲಾ​ಗದು: ನನ್ನ ವಿರುದ್ಧ ಷಡ್ಯಂತ್ರ ಮಾಡಲು ನಿಮ್ಮಂತಹ ಸಾವಿರ ಮೂರ್ಖರು ಬಂದರು ಏನೂ ಮಾಡಲಾಗದು. ನಾನೇನಾದರೂ ಷಡ್ಯಂತ್ರ ಮಾಡಲು ಹೊರಟರೆ ಅವರ ಕುಟುಂಬಗಳೇ ಇರುವುದಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಬಾಲಕೃಷ್ಣ ವಿರುದ್ಧ ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ್‌ ವಾಗ್ದಾಳಿ ನಡೆಸಿದರು.

ನಾನು ತಾಲೂಕಿನ ಸಮಸ್ಯೆಗಳ ಕುರಿತು 18 ಬಾರಿ ಮಾತನಾಡಿದ್ದೇನೆ. ಆದರೆ ಬಾಲಕೃಷ್ಣ ಒಂದೇ ಒಂದು ಬಾರಿ ಮಾತನಾಡಿಲ್ಲ. ಇಪ್ಪತ್ತು ವರ್ಷ ಅಧಿಕಾರದಲ್ಲಿದ್ದರು ಮಾಗಡಿ ತಾಲೂಕು ಏಕೆ ಅಭಿವೃದ್ಧಿ ಆಗಲಿಲ್ಲ. ಈಗ ನಾನು 860 ಕೋಟಿ ರು.ವೆಚ್ದದಲ್ಲಿ ಮಾಗಡಿ ತಾಲೂಕಿನ 83 ಕೆರೆಗಳಿಗೆ ಹೇಮಾವತಿ ನದಿ ನೀರನ್ನು ಹರಿಸುವ ಕೆಲಸ ಮಾಡುತ್ತಿದ್ದೇನೆ. 280 ಕಿಮೀ ಸಂಪರ್ಕ ರಸ್ತೆಯನ್ನು ನಾನು ಮಾಡಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಕೇಸ್‌ ಹಾಕಿದ ಉದಾಹರಣೆ ಇಲ್ಲ ಎಂದು ಹೇಳಿದರು.

ರಾಜ್ಯ​ದಲ್ಲಿ ಬಿಜೆಪಿ ಸರ್ಕಾರ, ಶಿಕಾರಿಪುರದಲ್ಲಿ ವಿಜಯೇಂದ್ರ ಗೆಲುವು ನಿಶ್ಚಿ​ತ: ಯಡಿಯೂರಪ್ಪ

ಟಿಎಪಿಸಿಎಂಸಿ ಯಲ್ಲಿ ಒಟ್ಟು 3600 ಜನರ ಷೇರುದಾರರಿದ್ದರು. ಆದರೆ ಚುನಾವಣಾ ಸಂದರ್ಭದಲ್ಲಿ ಕೇವಲ 600 ಜನರ ಷೇರನ್ನು ಇರುವಂತೆ ಮಾಡಿದ ಕೀರ್ತಿ ಅ​ಶೋಕ್‌ ಅವ​ರಿಗೆ ಸಲ್ಲುತ್ತದೆ. ಅಶೋಕ್‌ ರವರು ತಮಗೆ ಆಗದವರನ್ನು ಯಾವ ಕೇಸ್‌ ಹಾಕಿದರೆ ಮಟ್ಟಹಾಕಿ ಕಿರುಕುಳ ಕೊಡಬೇಕು. ನಂತರ ಅವರು ನಮ್ಮ ಬಳಿಗೆ ಬರುತ್ತಾರೆ ಆಗ ಬಿ ರಿಪೋರ್ಚ್‌ ಹಾಕುವ ಕೆಲಸ ಮಾಡುತ್ತಾರೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಶೋಕ್‌ ವಿ​ರುದ್ಧ ವಾಗ್ದಾಳಿ ನಡೆ​ಸಿ​ದರು.

Latest Videos
Follow Us:
Download App:
  • android
  • ios