Asianet Suvarna News Asianet Suvarna News

ಕಾಂಗ್ರೆಸ್‌, ಬಿಜೆಪಿ ರಾತ್ರೋರಾತ್ರಿ ಹಣ ಹಂಚಿವೆ: ವಾಟಾಳ್‌ ನಾಗರಾಜ್‌

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ರಾತ್ರೋರಾತ್ರಿ ಮತದಾರರಿಗೆ ಹಣ ಹಂಚಿಕೆ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಈ ಕಾರಣದಿಂದ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಭ್ಯರ್ಥಿ ವಾಟಾಳ್‌ ನಾಗರಾಜ್‌ ಹೇಳಿದರು. 

Karnataka Election 2023 Vatal Nagaraj Slams On BJP And Congress gvd
Author
First Published May 11, 2023, 1:21 PM IST

ಚಾಮರಾಜನಗರ (ಮೇ.11): ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ರಾತ್ರೋರಾತ್ರಿ ಮತದಾರರಿಗೆ ಹಣ ಹಂಚಿಕೆ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಈ ಕಾರಣದಿಂದ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಭ್ಯರ್ಥಿ ವಾಟಾಳ್‌ ನಾಗರಾಜ್‌ ಹೇಳಿದರು. ನಗರದ ಡಾ.ಬಿ.ಆರ್‌ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ವಾಟಾಳ್‌ನಾಗರಾಜ್‌ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇನೆ. ಈ ಚುನಾವಣೆಯನ್ನು ನಾನು ಬಹಿಷ್ಕಾರ ಮಾಡಿದ್ದೇನೆ. ಬೂತ್‌ ನಮ್ಮ ಕಡೆಯವರು ಯಾರು ಕೂತಿಲ್ಲ. ಪ್ರಚಾರ ಮಾಡುವುದಕ್ಕೆ ನಮ್ಮ ಯಾರು ಹೋಗಿಲ್ಲ. ನಮ್ಮ ಕಡೆಯವರು ಏಜೆಂಟ್‌ ಹಾಕಿಲ್ಲ ಸಂಪೂರ್ಣ ಈ ಚುನಾವಣೆಯನ್ನು ಬಹಿಷ್ಕಾರ ಮಾಡಿರುವುದಾಗಿ ವಾಟಾಳ್‌ ನಾಗರಾಜ್‌ ತಿಳಿಸಿದರು.

ಇದು ಚುನಾವಣೆಯಲ್ಲಿ ಸಂಪೂರ್ಣ ವ್ಯಾಪಾರ ಆಯಿತು. ಮಂಗಳವಾರ ರಾತ್ರೋರಾತ್ರಿ ಕ್ಷೇತ್ರದ ಪ್ರತಿ ಮತದಾರರಿಗೆ ಬಿಜೆಪಿ, ಕಾಂಗ್ರೆಸ್‌ ಹಣಕೊಟ್ಟಿದ್ದು, ಸಾವಿರ ರುಪಾಯಿ, ಸಾವಿರದ ಐನೂರು, ಎರಡು ಸಾವಿರ ರು. ಐನೂರು ರುಪಾಯಿ ಹಾಗೂ ತಮ್ಮ ಮನಸೋಇಚ್ಛೆ ಬಂದಂತೆ ಹಣ ಕೊಟ್ಟಿದ್ದಾರೆ, ನಾವು ಯಾರಿಗೂ ಒಂದು ನಯಾಪೈಸೆ ಕೊಟ್ಟಿಲ್ಲ. ಚುನಾವಣೆ ಪ್ರಜಾಪ್ರಭುತ್ವದ ಆಧಾರದ ಮೇಲೆ ಪ್ರಾಮಾಣಿಕ ಚುನಾವಣೆ ಆಗಬೇಕು. ಚುನಾವಣೆಯ ಭ್ರಷ್ಟವ್ಯವಸ್ಥೆ ಆಗಬಾರದು. ಭ್ರಷ್ಟಾಚಾರದಿಂದ ಚುನಾವಣೆಯಾದರೆ ಅತ್ಯಂತ ಅಗೌರವವಾಗುತ್ತದೆ ಎಂದರು.

ಕಾರು ಹಾಗೂ ಟಿಟಿ ವಾಹನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

ಯಾವ ಊರಲ್ಲೂ ಒಬ್ಬ ಚುನಾವಣಾಧಿಕಾರಿ ಇಲ್ಲ: ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಚನಾವಣಾ ಅಕ್ರಮಗಳು ನಡೆಯುತ್ತಿದ್ದರೂ ಯಾವ ಊರಲ್ಲೂ ಒಬ್ಬ ಚುನಾವಣಾಧಿಕಾರಿಯೂ ಇಲ್ಲ. ರಸ್ತೆಯಲ್ಲೂ ಇಲ್ಲ. ಒಂದು ಕಡೆ ನೂರು ಜನರ ತಂಡ ಹಣ ಹಂಚಿಕೆ ಮಾಡುತ್ತಿದೆ. ಅದನ್ನು ನಿಯಂತ್ರಣ ಮಾಡುವವರಿಲ್ಲ. ಮನೆಮನೆಗೆ ಹಣ ಹಂಚಿಕೆ ಮಾಡಿದ್ದಾರೆ. ಚಾಮರಾಜನಗರಕ್ಕೆ ಯಾವ ಮೂಲೆಯಿಂದ ಹಣ ಬಂದರೂ ಹೇಳುವವರಿಲ್ಲ, ಕೇಳುವವರಿಲ್ಲ. ಸುಮ್ಮನೆ ಚೆಕ್‌ಪೋಸ್ಟ್‌ಗಳಿದ್ದು ಅವು ಸ್ಮಶಾನ ರೀತಿಯಲ್ಲಿವೆ. ಒಂದು ಶಾಸನಸಭೆ ಸ್ಥಾನವನ್ನು ಪಡೆಯಲೇ ಎಂದು ವ್ಯವಸ್ಥಿತವಾದ ಚಿಂತನೆ ಮಾಡಿ ವ್ಯಾಪಾರ ಮಾಡುತ್ತಿರುವುದು ಘೋರ ಅನ್ಯಾಯವಾಗಿದೆ ಎಂದರು.

Mangaluru: ರೂಪದರ್ಶಿ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ!

ಈ ಚುನಾವಣೆಯ ಫಲಿತಾಂಶವನ್ನು ನಾನು ಒಪ್ಪುವುದಿಲ್ಲ. ನಾನು ಕೂಡ ಈ ಚುನಾವಣೆಯಲ್ಲಿ ಭಾಗವಹಿಸಿಲ್ಲ. ಬೂತ್‌ಗಳಿಗೆ ನಾನು ಹೋಗಿಲ್ಲ. ನಮ್ಮವರ ಒಬ್ಬರನ್ನು ಚುನಾವಣೆಯ ಏಜೆಂಟ್‌ ಆಗಿ ಕೂರಿಸಿಲ್ಲ. ಯಾರಿಗೂ ನೋಟಿಸ್‌ ಕೊಟ್ಟಿಲ್ಲ. ನಾಟಕೀಯವಾಗಿ ಚುನಾವಣಾ ಅಕ್ರಮ ನಾಟಕೀಯವಾಗಿದೆ. ಸಂಪೂರ್ಣವಾಗಿ ಚಾಮರಾಜನಗರದ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗಿದೆ, ಇದಕ್ಕೆ ಚುನಾವಣೆಯ ಆಯೋಗವೇ ಹೊಣೆಯಾಗುತ್ತದೆ, ಇದಕ್ಕೆ ಚುನಾವಣೆ ಆಯೋಗ ಪ್ರಾಮಾಣಿಕವಾಗಿ ಉತ್ತರಿಸಬೇಕು ಎಂದು ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

Follow Us:
Download App:
  • android
  • ios