ಕುರಿ ಲೆಕ್ಕ ಹಾಕುವುದಕ್ಕೆ ಬರುವುದಿಲ್ಲ. ಅವರಿಗೆ ಹಣಕಾಸು ಮಂತ್ರಿ ಏಕೆ ಮಾಡಿದ್ದೀರಿ ಎಂದು ಜರಿದಿದ್ದರು. ಆದರೆ, ನಾನು ಸಚಿವನಾಗಿ, ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  

ಮಂಡ್ಯ (ಏ.23): ಕುರಿ ಲೆಕ್ಕ ಹಾಕುವುದಕ್ಕೆ ಬರುವುದಿಲ್ಲ. ಅವರಿಗೆ ಹಣಕಾಸು ಮಂತ್ರಿ ಏಕೆ ಮಾಡಿದ್ದೀರಿ ಎಂದು ಜರಿದಿದ್ದರು. ಆದರೆ, ನಾನು ಸಚಿವನಾಗಿ, ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಾಗಮಂಗಲ ತಾಲೂಕು ದೊಡಬಾಲ ಗ್ರಾಮದಲ್ಲಿ ನಡೆದ 14 ಕೂಟಗಳ ಬೀರೇದೇವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ನಾನು ಕುರುಬ ಜಾತಿಯವ ಎನ್ನುವ ಕಾರಣಕ್ಕೆ ಪತ್ರಿಕೆಯೊಂದರಲ್ಲಿ ನನ್ನ ಬಗ್ಗೆ ಕುರಿ ಲೆಕ್ಕ ಹಾಕಲು ಬಾರದವನನ್ನು ಹಣಕಾಸು ಮಂತ್ರಿ ಯಾಕೆ ಮಾಡಿದ್ದೀರಿ ಎಂದು ಬರೆದಿದ್ದರು ಎಂದು ಘಟನೆ ಮೆಲುಕು ಹಾಕಿದರು. 

ವಿದ್ಯಾವಂತನಾಗಿದ್ದಕ್ಕೆ ಮುಖ್ಯಮ೦ತ್ರಿಯಾಗಿದ್ನ. ಸಂವಿಧಾನದಿಂದ ಇದು ಸಾಧ್ಯವಾಗಿದೆ. ಒಂದು ಕಾಲದಲ್ಲಿ ಶೂದ್ರರು ಸಂಸ್ಕೃತ ಕಲಿತರೆ ಅವರ ಕಿವಿಗೆ ಕಾದ ಸೀಸ ಹಾಕುತ್ತಿದ್ದರು. ಈಗ ಆ ನಾನು ಪರಿಸ್ಥಿತಿ ಇಲ್ಲ. ಇದನ್ನು ಅರಿತೇ ನಾನು ಗ್ಯಾರೆಂಟಿ ಭಾಗ್ಯ ಕೊಟ್ಟಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡರು. ಶಿಕ್ಷಣ ಇಲ್ಲದಿದ್ದರೆ ಗುಲಾಮಗಿರಿಗೆ ನೂಕುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳನ್ನೂ ಗೌರವ ಓದಿಸಲೇಬೇಕು. ಮಕ್ಕಳನ್ನು ವಿದ್ಯಾವಂತರಾಗಿ ಮಾಡದಿದ್ದರೆ ಸಮಾಜದಲ್ಲಿ ಇರುವುದಿಲ್ಲ. ದೇವರಾಜ ಅರಸು ಬಿಟ್ಟರೆ ಐದು ವರ್ಷ ಪೂರೈಸಿದ ಮುಖ್ಯಮಂತ್ರಿ ನಾನು ಮಾತ್ರ ಎಂದು ಹೇಳಿದರು.

ಜಾತಿ ಗಣತಿಯಲ್ಲಿ ನ್ಯೂನತೆ ಇದರೆ ನಿವಾರಣೆಗೆ ಕ್ರಮ: ಜಾತಿಗಣತಿಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸುತ್ತೇವೆ. ಅಭಿಪ್ರಾಯ ನೀಡುವಂತೆ ಸಂಪುಟ ಸಚಿವರನ್ನು ಕೇಳಲಾಗಿದ್ದು, ಯಾರೂ ಇನ್ನೂ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತ ನಾಡಿ, ಈ ಕುರಿತು ಮೇ 2ಕ್ಕೆ ನಡೆವ ವಿಶೇಷ ಸಂಪುಟ ಸಭೆಯಲ್ಲಿ ಅಭಿಪ್ರಾಯ ತಿಳಿಸಲು ಸೂಚಿಸಿದ್ದೇನೆ. ಅಭಿಪ್ರಾಯ ಪಡೆದು ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. 

ಸಿದ್ದರಾಮಯ್ಯರಿಂದ ಜಾತಿಗಳ ಮಧ್ಯೆ ಸಂಘರ್ಷ: ಬಿ.ವೈ.ವಿಜಯೇಂದ್ರ

ಹಿಂದಿನ ಸಮೀಕ್ಷೆಗೂ ಈ ಸಮೀಕ್ಷೆಗೂ ವ್ಯತ್ಯಾಸವಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ, ಜನಸಂಖ್ಯೆ ಹೆಚ್ಚು ಕಡಿಮೆ ಆಗಿರುವುದರಿಂದ ಸರ್ವೇನಲ್ಲಿ ವ್ಯತ್ಯಾಸವಾಗಿರಬಹುದು ಎಂದು ತಿಳಿಸಿದರು. ಬಿಜೆಪಿಯವರೇ ಜಯ ಪ್ರಕಾಶ್ ಹೆಗ್ಡೆ ಅವರನ್ನು ನೇಮಕ ಮಾಡಿದ್ದರು. ಅವರೇ ನೇಮಿಸಿದ ಅಧ್ಯಕ್ಷರು ವರದಿ ನೀಡಿದ್ದಾರೆ. ಇದನ್ನು ಪ್ರಶ್ನಿಸಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ. ಕಾಂತರಾಜು ಕೊಟ್ಟಿರುವ ಅಂಕಿ- ಅಂಶಗಳ ಆಧಾರದ ಮೇಲೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.