ರಾಜ್ಯ​ದಲ್ಲಿ ಇಲ್ಲಿ​ವ​ರೆಗೆ ಆಡ​ಳಿತ ನಡೆ​ಸಿ​ದಾಗ ನೀಡದ ಗ್ಯಾರಂಟಿಗಳನ್ನು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿ​ಎಸ್‌ ಪಕ್ಷ​ಗಳು ಅಧಿ​ಕಾ​ರ ಪಡೆ​ಯು​ವು​ದ​ಕ್ಕಾಗಿ ಚುನಾ​ವಣಾ ಸಮ​ಯ​ದಲ್ಲಿ ಗ್ಯಾರೆಂಟಿ ಭರ​ವ​ಸೆ​ಗ​ಳ​ನ್ನು ನೀಡಿ ಜನ​ರನ್ನು ಮತ್ತೊಮ್ಮೆ ಮರಳು ಮಾಡಲು ಮುಂದಾ​ಗಿವೆ ಎಂದು ಮುಖ್ಯ​ಮಂತ್ರಿ ಚಂದ್ರು ಕಿಡಿ​ಕಾ​ರಿ​ದರು. 

ರಾಮ​ನ​ಗರ (ಏ.10): ರಾಜ್ಯ​ದಲ್ಲಿ ಇಲ್ಲಿ​ವ​ರೆಗೆ ಆಡ​ಳಿತ ನಡೆ​ಸಿ​ದಾಗ ನೀಡದ ಗ್ಯಾರಂಟಿಗಳನ್ನು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿ​ಎಸ್‌ ಪಕ್ಷ​ಗಳು ಅಧಿ​ಕಾ​ರ ಪಡೆ​ಯು​ವು​ದ​ಕ್ಕಾಗಿ ಚುನಾ​ವಣಾ ಸಮ​ಯ​ದಲ್ಲಿ ಗ್ಯಾರೆಂಟಿ ಭರ​ವ​ಸೆ​ಗ​ಳ​ನ್ನು ನೀಡಿ ಜನ​ರನ್ನು ಮತ್ತೊಮ್ಮೆ ಮರಳು ಮಾಡಲು ಮುಂದಾ​ಗಿವೆ ಎಂದು ಆಮ್‌ ಆದ್ಮಿ ಪಾರ್ಟಿ ಪ್ರಚಾರ ಸಮಿತಿ ಅಧ್ಯ​ಕ್ಷ​ರಾದ ಚಿತ್ರ​ನಟ ಮುಖ್ಯ​ಮಂತ್ರಿ ಚಂದ್ರು ಕಿಡಿ​ಕಾ​ರಿ​ದರು. ಹನುಮಂತಯ್ಯ ವೃತ್ತದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿ ಎಸ್‌.ಬೈರೇಗೌಡ ನೇತೃತ್ವದಲ್ಲಿ ಭಾನುವಾರ ನಡೆದ ರಾರ‍ಯಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಮೂರು ಪಕ್ಷ​ಗಳು ಅಧಿ​ಕಾ​ರಕ್ಕೆ ಬರು​ವುದು ಗ್ಯಾರೆಂಟಿಯೇ ಇಲ್ಲ. ಆದರೂ ಜನರಿಗೆ ಗ್ಯಾರೆಂಟಿ ಭರ​ವಸೆ ನೀಡು​ತ್ತಿವೆ ಎಂದು ಲೇವಡಿ ಮಾಡಿ​ದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 75 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳು ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಬಡ, ಮದ್ಯಮ ವರ್ಗದ ಜನರಿಗೆ ಹೊಟ್ಟೆಗೆ ಹಿಟ್ಟು, ಬಟ್ಟೆ,ಸೂರು ಕಲ್ಪಿ​ಸು​ವಲ್ಲಿ ವಿಫ​ಲ​ವಾ​ಗಿದೆ. ದೇಶದ ಅಭಿವೃದ್ಧಿ ಮಾಡದೆ ನೀರವ್‌ ಮೋದಿ, ವಿಜಯ್‌ ಮಲ್ಯ ಅವರ 11 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದರಲ್ಲ ಇದರಿಂದ ದೇಶ ಪ್ರಗತಿ ಕಾಣುತ್ತದೆಯೆ, ಜವಾಬ್ದಾರಿಯಿರುವ ಹಣಕಾಸು ಸಚಿವರು ದೇಶದಲ್ಲಿ 1.55 ಸಾವಿರ ರು. ಕೋಟಿ ಸಾಲವಿದೆ ಎಂದು ಹೇಳಿಕೆ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚನ್ನಗಿರಿ ಚದುರಂಗ: ಜೆ.ಎಚ್‌.ಪಟೇಲ್‌ ಕ್ಷೇತ್ರದಲ್ಲಿ ಶಿವಗಂಗಾ vs ಮಾಡಾಳ್‌ ಪುತ್ರ ಕದನ

ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್‌ ಆದ್ಮಿ ಪಾರ್ಟಿ ಸರ್ಕಾರ ಸಾಮಾಜಿಕ ನ್ಯಾಯದಡಿ ಉಚಿತವಾಗಿ ಆರೋಗ್ಯ, ಶಿಕ್ಷಣ ಸೌಲಭ್ಯಗಳನ್ನು ನೀಡಿದ್ದಾರೆ. 30 ಸಾವಿರ ಕೋಟಿಯಿದ್ದ ಬಜೆಟ್‌ ಅನ್ನು 70 ಸಾವಿರ ಕೋಟಿಗೆ ಹೆಚ್ಚಿ​ಸಿ​ದರು. ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ಇದುವರೆಗೆ ಕೊಟ್ಟಿರುವುದು ಕೊರತೆ ಬಜೆಟ್‌ ಗಳಾಗಿವೆ. ಆದರೆ, ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಎಎಪಿ ಸಪ್ರ್ಲಸ್‌ ಬಜೆಟ್‌ ನೀಡಿದ ಕೀರ್ತಿ ಅರವಿಂದ್‌ ಕೇಜ್ರಿವಾಲ್‌ ಅವ​ರಿಗೆ ಸಲ್ಲುತ್ತದೆ. ಇದು ನಿಜವಾದ ಜನಪರ ಕಾಳಜಿ ಸರ್ಕಾರ ಎಂದು ಮುಖ್ಯ​ಮಂತ್ರಿ ಚಂದ್ರು ಶ್ಲಾಘಿಸಿದರು. ಎಎಪಿ ಅಭ್ಯರ್ಥಿ ಎಸ್‌.ಬೈರೇಗೌಡ ಮಾತನಾಡಿ, ರಾಮನಗರ ಕ್ಷೇತ್ರದ ಜನರು ಕಳೆದ 20 ವರ್ಷಗಳಿಂದ ಒಂದೇ ಕುಟುಂಬದವರನ್ನು ಆಯ್ಕೆ ಮಾಡಿದ ಫಲವಾಗಿ ಅವರು ರಾಜಕೀಯವಾಗಿ ಬೆಳೆದರು, 

ಆದರೆ ಅಭಿವೃದ್ದಿ ಮಾತ್ರ ಕುಂಠಿತವಾಗಿದ್ದು ಇದಕ್ಕೆ ಸಾಕಷ್ಟುನಿದರ್ಶನಗಳು ಜನರ ಕಣ್ಣ ಮುಂದಿವೆ. ಈ ಚುನಾವಣೆಯಲ್ಲಿ ಕ್ಷೇತ್ರದ ಜನರು ಸ್ಥಳೀಯ ಅಭ್ಯರ್ಥಿಯಾಗಿರುವ ನನಗೆ ಅರವಿಂದ್‌ ಕೇಜ್ರವಾಲ್‌ ಅವರ ಸರ್ಕಾರದ ಆಡಳಿತ ಮೆಚ್ಚಿ ನನಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸದಿಂದ ಸ್ಪರ್ಧೆ ಮಾಡಿದ್ದೇನೆ ಎಂದರು. ಪೂರಕೆ ಹಿಡಿದ ಆಮ್‌ ಆದ್ಮಿ ಪಾರ್ಟಿಯ ಮುಖಂಡರು, ನೂರಾರು, ಮಹಿಳೆಯರು ನಗರದ ಜೂನಿಯರ್‌ ಕಾಲೇಜು ಮೈದಾನದಿಂದ ಹೊರಟು ಮಹಾತ್ಮಗಾಂಧಿ ರಸ್ತೆ ಮೂಲಕ ಕೆಂಗಲ್‌ ಹನುಮಂತಯ್ಯ ವೃತ್ತದಲ್ಲಿ ರಾರ‍ಯಲಿ ಕೊನೆಗೊಂಡಿತು. 

ದೇವೇಗೌಡರ ಸಾವು ಬಯಸಿದವರಿಗೆ ತಕ್ಕ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ರಾಜ್ಯ ಉಪಾಧ್ಯಕ್ಷ ಚನ್ನಪ್ಪ ನಲ್ಲೂರ್‌, ಕಾರ್ಯದರ್ಶಿ ಕುಶಲಸ್ವಾಮಿ, ಜಿಲ್ಲಾಧ್ಯಕ್ಷ ನಾಗೇಂದ್ರಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ, ಮುಖಂಡರಾದ ದಿವ್ಯಜ್ಯೋತಿ, ಚಂದ್ರಪ್ಪ, ಟಿ.ಜೆ.ರಮೇಶ್‌, ಚಂದ್ರಶೇಖರ್‌, ಹಾರೋಹಳ್ಳಿ ವೆಂಕಟೇಶ್‌, ಮಂಜುನಾಥ್‌ ಮತ್ತಿ​ತ​ರರು ಹಾಜ​ರಿ​ದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನ.