ಶಾಮನೂರು ಹೇಳಿಕೆಯಿಂದ ಸರ್ಕಾರಕ್ಕೆ ಡ್ಯಾಮೇಜ್ ಇಲ್ಲ: ಸಚಿವ ಡಿ.ಸುಧಾಕರ್

ಲಿಂಗಾಯತರನ್ನು ಸೈಡ್‌ಲೈನ್ ಮಾಡಲಾಗ್ತಿದೆ ಎಂಬ ಶಾಮನೂರು ಶಿವಶಂಕ್ರಪ್ಪ ಹೇಳಿಕೆಯಿಂದ ಸರ್ಕಾರಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲವೆಂದು ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಹೇಳಿದರು. 

There is no damage to the government from Shamanuru Shivashankarappa statement Says Minister D Sudhakar gvd

ಚಿತ್ರದುರ್ಗ (ಅ.04): ಲಿಂಗಾಯತರನ್ನು ಸೈಡ್‌ಲೈನ್ ಮಾಡಲಾಗ್ತಿದೆ ಎಂಬ ಶಾಮನೂರು ಶಿವಶಂಕ್ರಪ್ಪ ಹೇಳಿಕೆಯಿಂದ ಸರ್ಕಾರಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲವೆಂದು ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಹೇಳಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಹೇಳಿದ ಮಾತುಗಳು ಸತ್ಯಕ್ಕೆ ದೂರವಾದುದು. ಕಾಂಗ್ರೆಸ್ ಎಲ್ಲಾ‌‌ ಸಮಾಜಗಳನ್ನು ಅಪ್ಪಿಕೊಳ್ಳುವ ಏಕೈಕ ಪಕ್ಷ. ಎಲ್ಲರಿಗೂ ಸಮಾನವಾಗಿ ಅವಕಾಶ ಕೊಟ್ಟಿದ್ದೀವಿ. ಎಲ್ಲದಕ್ಕೂ ಅಂಕಿ ಅಂಶಗಳು ಇವೆ. ಎಲ್ಲಾ ಜಾತಿಗೂ ನ್ಯಾಯ ಕೊಡುವ ಕೆಲಸವನ್ನು ಮಾಡಿದ್ದೀವಿ ಎಂದರು.

ಶಿವಮೊಗ್ಗ ಗಲಭೆ ಕುರಿತು ಪ್ರತಿಕ್ರಿಯಿಸಿದ ಅವರು, ಘಟನೆಯನ್ನು ಖಂಡಿಸುವುದಾಗಿ ಹೇಳಿದರು. ಕಾಂಗ್ರೆಸ್ ಸರ್ಕಾರ ಬಂದಮೇಲೆ ಎಲ್ಲೆಡೆ ಸೌಹಾರ್ದ ವಾತಾವರಣವಿದೆ. ಕೆಲವು ಕಿಡಿಗೇಡಿಗಳು ಈದ್ ಮಿಲಾದ್, ಗಣೇಶ ಸಂದರ್ಭದಲ್ಲಿ ಈ ರೀತಿ ಘಟನೆ ಮಾಡ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಶಿವಮೊಗ್ಗ ಹೊತ್ತಿ ಉರಿಯಿತು. ಆ ರೀತಿಯ ಘಟನೆ ನಮ್ಮ ಸರ್ಕಾರ ಬಂದಾಗ ಎಲ್ಲಿಯೂ ಆಗಿಲ್ಲ. ಈಗಾಗಲೇ ಶಿವಮೊಗ್ಗ ಗಲಾಟೆ ಹತೋಟಿಗೆ ಬಂದಿದೆ. ನಾವು ಸಮರ್ಥವಾಗಿ ನಿಭಾಹಿಸಿದ್ದೇವೆ ಎಂದರು. ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂಬ ಯೊಗೀಶ್ವರ್ ಹೇಳಿಕೆಗೆ, ಅವರು ಸೋತಿದ್ದಾರೆ. ಏನೇನೋ ಹೇಳ್ತಾರೆ. ಸರ್ಕಾರ ಯಾವಾಗ ಹೋಗುತ್ತೆ, ಯಾವಾಗ ಬೀಳುತ್ತೆ ಅನ್ನೋದು ಅನ್ನೋದು ಸಿಎಂ, ಡಿಸಿಎಂಗೆ ಗೊತ್ತಿದೆ ಎಂದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ: ಶಾಸಕ ಬಸನಗೌಡ ಯತ್ನಾಳ್‌

ಆತ್ಮಕಥೆ ಬರೆಯುವವರು ವೈಭವೀಕರಿಸಿಕೊಳ್ಳುವುದು ಬೇಡ: ಆತ್ಮಕಥೆ ಬರೆಯುವವರು ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ಬದಲು ಬದುಕಿನ ವಾಸ್ತವಿಕತೆಯ ಚಿತ್ರಗಳನ್ನು ಓದುಗರ ಕಣ್ಮುಂದೆ ಬಿಚ್ಚಿಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ವಿಮರ್ಶಕ ಡಾ.ಲೋಕೇಶ್ ಅಗಸನಕಟ್ಟೆ ಹೇಳಿದರು. ನಗರದ ನೆಹರೂ ಮೈದಾನದಲ್ಲಿರುವ ಎ.ಕೃಷ್ಣಪ್ಪ ಸಭಾಂಗಣದಲ್ಲಿ ನಿವೃತ್ತ ವಿದ್ಯಾಧಿಕಾರಿ ಎಚ್.ಎಂ.ಬಸವರಾಜ್ ಅವರ ನಡೆದ ಹಾದಿ ಉಳಿದ ಚಿತ್ರ ಆತ್ಮಕಥೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸತ್ಯಸಂಗತಿಗಳನ್ನು ಮುಕ್ತವಾಗಿ ಹೇಳಿಕೊಂಡಾಗ ಕೃತಿಯೊಂದು ಓದುಗರ ಮನಸ್ಸಿನಲ್ಲಿ ಬಹುಕಾಲ ನೆಲೆ ನಿಲ್ಲುತ್ತದೆ. 

ಬಸವರಾಜ್ ಬರಹಗಾರರಲ್ಲ. ಆದರೆ ಪುಸ್ತಕದಲ್ಲಿನ ನಿರೂಪಣೆ ಮನ ಮುಟ್ಟುವ ರೀತಿಯಲ್ಲಿದೆ. ವಿಚಾರಗಳು ನೇರವಾಗಿವೆ. ತಮ್ಮನ್ನು ತಾವು ವೈಭವೀಕರಿಸಿಕೊಳ್ಳುವ ಗೋಜಿಗೆ ಅವರು ಹೋಗಿಲ್ಲ ಎಂದರು. ವೃತ್ತಿಯ ಅವಧಿಯಲ್ಲಿ ವಿವಿಧ ವಿಷಯಗಳ ಶಿಕ್ಷಕರ ಕ್ಲಬ್‌ಗಳ ಮೂಲಕ ಶಿಕ್ಷಕರಿಗೆ ನೀಡಿದ್ದ ತರಬೇತಿಯಿಂದ ಹಲವಾರು ಉತ್ತಮ ಶಿಕ್ಷಕರು ಸಮಾಜಕ್ಕೆ ದೊರಕಿದ್ದಾರೆ. ಪ್ರತಿ ಶಿಕ್ಷಕನಿಗೂ ತನ್ನದೇ ಶೈಲಿಯ ಪರಿಣಾಮಕಾರಿ ಬೋಧನಾ ವಿಧಾನವಿರಬೇಕು ಎಂದು ಅವರು ನಂಬಿದ್ದರೆಂದು ಹೇಳಿದರು. ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಟಿ.ಎಂ.ಕುಮಾರ್ ಮಾತನಾಡಿ, ಮಹದೇವ ದೇಸಾಯಿ ಅವರು ಗಾಂಧೀಜಿಯವರ ಜೀವನ ಚರಿತ್ರೆ ಬರೆದ ನಂತರ ಆತ್ಮಕಥೆ ಬರೆಯುವ ಸರಣಿ ಆರಂಭಗೊಂಡಿರಬಹುದು. 

ಶಿಕ್ಷಕರಿಗೆ ತರಬೇತಿ ಕೊಡುವ ವ್ಯವಸ್ಥೆ ಅಷ್ಟಾಗಿ ಇಲ್ಲದ ಸಮಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಕ್ಲಬ್‌ಗಳ ಮೂಲಕ ತರಬೇತಿ ನೀಡಿದ್ದು, ಬಸವರಾಜ್ ಅವರ ಬಹುದೊಡ್ಡ ಸಾಧನೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ತಾಲೂಕಿಗೆ ಅನನ್ಯ ಕೊಡುಗೆ ನೀಡಿರುವ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಗರದ ಪ್ರಧಾನ ರಸ್ತೆಗೆ ನಾಮಕರಣ ಮಾಡುವ ಮೂಲಕ ಅವರ ಹೆಸರು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವ ರೀತಿ ಮಾಡುತ್ತೇವೆ. ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರು ಬಸವರಾಜ್ ರವರಂತಹ ಹಿರಿಯರ ಮಾರ್ಗದರ್ಶನ ಪಡೆದು ಕಲಿಕೆಯಲ್ಲಿ ಸುಧಾರಣೆ ತಂದುಕೊಳ್ಳಬೇಕು ಎಂದರು.

ರಾಗಿಗುಡ್ಡ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಮಧು ಬಂಗಾರಪ್ಪ

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಕೆ.ವಿ ವೆಂಕಟಾಚಲಪತಿ, ಹೊಸಪೇಟೆಯ ಸಾಹಿತಿ ಬಿ.ಎಂ ರಾಜಶೇಖರ್, ನಿವೃತ್ತ ಶಿಕ್ಷಕರಾದ ಆರ್.ಪಾಂಡುರಂಗಯ್ಯ, ಆರ್.ಮಲ್ಲಿಕಾರ್ಜುನಯ್ಯ, ಸಿ.ಬಿ ಶೈಲಾ, ನಿಂಗಪ್ಪ, ಏಕನಾಥ್, ಜಮೀರ್ ಅಹಮದ್, ಕೆ.ಎಂ. ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು.

Latest Videos
Follow Us:
Download App:
  • android
  • ios