ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ: ಶಾಸಕ ಬಸನಗೌಡ ಯತ್ನಾಳ್‌

ಈ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಕರ್ನಾಟಕದಲ್ಲಿ ಹಿಂದೂಗಳ ಮುಕ್ತವಾಗಿ ಬದುಕಬೇಕೋ? ಬೇಡವೋ? ಎಂಬ ಆತಂಕ ಉಂಟಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್‌ ಹೇಳಿದ್ದಾರೆ. 

Mla Basanagouda Patil Yatnal Slams On Congress Govt At Yadgir gvd

ಯಾದಗಿರಿ (ಅ.04): ಈ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಕರ್ನಾಟಕದಲ್ಲಿ ಹಿಂದೂಗಳ ಮುಕ್ತವಾಗಿ ಬದುಕಬೇಕೋ? ಬೇಡವೋ? ಎಂಬ ಆತಂಕ ಉಂಟಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್‌ ಹೇಳಿದ್ದಾರೆ. ಜಿಲ್ಲೆಯ ಶಹಾಪುರದಲ್ಲಿ ಮಂಗಳವಾರ ಸಂಜೆ ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಿನಂತೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಪೊಲೀಸರು ಹಾಗೂ ಎಸ್ಪಿಯವರ ಮೇಲೆಯೇ ಕಲ್ಲು ತೂರಾಟ ನಡೆಯುತ್ತದೆ ಎಂದು ಅದೆಷ್ಟು ಧೈರ್ಯ ಇರಬೇಕು ಎಂದು ಘರ್ಷಣೆಯ ಘಟನೆಗ ಬಗ್ಗೆ ಆತಂಕ ವ್ಯಕ್ತಪಡಿಸಿದ ಯತ್ನಾಳ್‌, ಪೊಲೀಸರಿಗೆ ಮುಕ್ತವಾಗಿ ಅಧಿಕಾರ ಕೊಡುತ್ತಿಲ್ಲ, ಅವರ ಕೈಯಲ್ಲಿನ ಶಸ್ತ್ರಾಸ್ತ್ರ ಉಪಯೋಗ ಮಾಡದಂತೆ ಸರ್ಕಾರ ಅಸಹಾಯಕತೆ ಮಾಡಿದೆ, ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡೋರು ಯಾರು ಎಂದು ಪ್ರಶ್ನಿಸಿದರು.

ರಾಗಿಗುಡ್ಡ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಮಧು ಬಂಗಾರಪ್ಪ

ಹಿಂದೂ ಧರ್ಮ ನಾಶ ಮಾಡುತ್ತೀನಿ ಅಂತಾರೆ, ಚಾಕು-ಚೂರಿ ತೆಗೆದುಕೊಂಡು ಬಯಲಿಗೆ ಬರುತ್ತಾರೆ, ಕೋಲಾರದಲ್ಲಿ ಖಡ್ಗ ಪ್ರದರ್ಶನ ಮಾಡಿದ್ದಾರೆ ಎಂದ ಯತ್ನಾಳ್‌, ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಹುಬ್ಬಳ್ಳಿ ಪೋಲಿಸ್ ಠಾಣೆ ಸುಟ್ಟವರ ಮೇಲಿನ ಪ್ರಕರಣಗಳ ವಾಪಸ್ ಗೆ ಸರ್ಕಾರ ಆದೇಶ ಮಾಡಿದೆ. ಸರ್ಕಾರ ಒಂದು ಕೋಮಿಗೆ ಬೆಂಬಲ ಕೊಡುತ್ತಿರುವುದರಿಂದ ಹಿಂದೂಗಳ ರಕ್ಷಣೆ ಪ್ರಶ್ನೆಯಾಗಿದೆ, ಇದೇ ರೀತಿ ಆಡಳಿತ ನಡೆದರೆ ಹಿಂದೂಗಳೇ ರಕ್ಷಣೆಗೆ ಹೊರ ಬರಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪರಿಸ್ಥಿತಿ ನಿಯಂತ್ರಣದ ನಂತರ ಶಿವಮೊಗ್ಗಕ್ಕೆ ಭೇಟಿ ಕೊಡುವುದಾಗಿ ಯತ್ನಾಳ್‌ ಹೇಳಿದರು.

ಸಿಎಂ ಸಿದ್ದರಾಮಯ್ಯ ಇಳಿಸೋಕೆ ಡಿಕೆಶಿ ಷಡ್ಯಂತ್ರ : ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ನಡೆದಿದೆ, ನಾಲ್ಕೈದು ಬಾರಿ ಗೆದ್ದವರು ಮಂತ್ರಿ ಆಗಿಲ್ಲ ಎಂದು ಅಸಮಾಧಾನವಿದೆ, ಡಿ. ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಇಳಿಸೋಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರಲ್ಲದೆ, ಡಿಸೆಂಬರ್ ನಂತರ ಸರ್ಕಾರ ಇರುವುದಿಲ್ಲ, ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಮನೂರು, ಹರಿಪ್ರಸಾದ್‌ಗೆ ಡಿಕೆಶಿ ಡೈರೆಕ್ಷನ್: ತಮ್ಮದೇ ಪಕ್ಷದ, ಸರ್ಕಾರದ ವಿರುದ್ಧ ಟೀಕೆಗಳ ಸುರಿಸುವ ಶಾಮನೂರು ಹಾಗೂ ಬಿ. ಕೆ. ಹರಿಪ್ರಸಾದ ಅವರ ತಂತ್ರಗಾರಿಕೆಯ ಹಿಂದೆ ಡಿ. ಕೆ. ಶಿವಕುಮಾರ್ ಅವರ ಡೈರೆಕ್ಷನ್‌ ಇದೆ ಎಂದು ಆರೋಪಿಸಿದ ಯತ್ನಾಳ್‌, ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದೆ, ಯೋಗೇಶ್ವರ ಅವರು ಈಗ ಹೇಳಿದ್ದರೆ, ನಾನು ಈ ಮೊದಲೇ ಅದನ್ನು ಹೇಳಿದ್ದೇನೆ ಎಂದರು.

ತಮಿಳುನಾಡಿಗೆ ನೀರು ಬಿಡದಿದ್ದರೆ ರಾಜ್ಯ ಸರ್ಕಾರವನ್ನೇ ವಜಾ ಮಾಡ್ತಾರೆ: ವೀರಪ್ಪ ಮೊಯ್ಲಿ

ಎಸ್ಸಿ/ಎಸ್ಟಿ ಮೀಸಲು ಅನುದಾನ ಗ್ಯಾರಂಟಿಗಳಿಗೆ ಬಳಕೆ: ಎಸ್ಸಿ/ಎಸ್ಟಿ ಸಮುದಾಯದವರಿಗೆ ಮೀಸಲು ಇಟ್ಟ ಅನುದಾನವನ್ನು ಸರ್ಕಾರ ಗ್ಯಾರಂಟಿಗಳಿಗೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ ಶಾಸಕ ಯತ್ನಾಳ್‌, ಸಿಎಂ ಅವರು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರು.ಗಳ ಅನುದಾನ ನೀಡಿ ಅವರ ಋಣ ತೀರಿಸುತ್ತೇನೆ ಅಂತ ಹೇಳಿದ್ದಾರೆ. ಇದು ಯಾರಪ್ಪನ ದುಡ್ಡು ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಪಸಂಖ್ಯಾತರು ವಾಹನಗಳ ಖರೀದಿ ಮಾಡಿದ್ರೆ 50% ಸಬ್ಸಿಡಿ ಅಂತ ಹೇಳಿದ್ದಾರೆ, ಅದೇ ಹಿಂದುಳಿದವರಿಗೆ ಅಥವಾ ಆರ್ಥಿಕವಾಗಿ ಹಿಂದುಳಿದವರಿಗೆ ಈ ಯೋಜನೆಯಿಲ್ಲ. 10 ಸಾವಿರ ಕೋಟಿ ರು.ಗಳ ಅನುದಾನ ಮುಸ್ಲಿಮರಿಗೆ ಕೊಟ್ಟರೆ ನೀರಾವರಿಗೆ ದುಡ್ಡಿಲ್ಲ ಅಭಿವೃದ್ಧಿಗೆ ದುಡ್ಡಿಲ್ಲ, ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರೂ ಮತ ಹಾಕಿಲ್ಲವೇ ಎಂದು ಯತ್ನಾಳ್ ಪ್ರಶ್ನೆ‌‌ ಮಾಡಿದರು.

Latest Videos
Follow Us:
Download App:
  • android
  • ios