Asianet Suvarna News Asianet Suvarna News

ದೇಶದ ಜನತೆ ಕಾಂಗ್ರೆಸ್‌ ಗ್ಯಾರಂಟಿ ಭಾಗ್ಯಗಳ ತಿರಸ್ಕರಿಸಿದ್ದಾರೆ: ಶಾಸಕ ಸಿ.ಸಿ.ಪಾಟೀಲ್

3 ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಜಯವನ್ನು ಸಾಧಿಸುವ ಮೂಲಕ ಕಾಂಗ್ರೆಸ್‌ ಗ್ಯಾರಂಟಿ ಭಾಗ್ಯಗಳನ್ನು ಧಿಕ್ಕರಿಸಿ ಕಮಲವನ್ನು ಎತ್ತಿ ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನಿಗೆ ದೇಶದ ಮತದಾರರು ಸದಾ ಇರುತ್ತಾರೆಂಬುದು ಸಾಬೀತಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಎಂದು ಹೇಳಿದರು.  

The people of the country have rejected the Congress guarantee of fortune Says MLA CC Patil gvd
Author
First Published Dec 4, 2023, 8:30 PM IST

ನರಗುಂದ (ಡಿ.04): 3 ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಜಯವನ್ನು ಸಾಧಿಸುವ ಮೂಲಕ ಕಾಂಗ್ರೆಸ್‌ ಗ್ಯಾರಂಟಿ ಭಾಗ್ಯಗಳನ್ನು ಧಿಕ್ಕರಿಸಿ ಕಮಲವನ್ನು ಎತ್ತಿ ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನಿಗೆ ದೇಶದ ಮತದಾರರು ಸದಾ ಇರುತ್ತಾರೆಂಬುದು ಸಾಬೀತಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಎಂದು ಹೇಳಿದರು.  ಪಟ್ಟಣದ ಸ್ವಗೃಹದಲ್ಲಿನ ಬಿಜೆಪಿ ಸಭಾಭವನದಲ್ಲಿ ಮಾತನಾಡಿ, ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಗಳಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣೆ ಹಿಡಿದಿದ್ದರೂ ಬಿಜೆಪಿ ಕಳೆದ ಬಾರಿಗಿಂತ 8 ಸ್ಥಾನ ಹೆಚ್ಚು ಗಳಿಸಿದೆ. 

ದೇಶದ ಜನತೆ ಪ್ರಧಾನಿ ಮೋದಿಯವರ ಆಡಳಿತ ಮೆಚ್ಚಿಕೊಂಡಂತಾಗಿದೆ. ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದರು. ಮುಂಬರುವ ಲೋಕಸಭೆಯ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಸೋತಿದೆ. ಹೀನಾಯವಾಗಿ ಸೋತ ಕಾಂಗ್ರೆಸ್‌ನಲ್ಲಿ ರಾಜ್ಯದಲ್ಲಿ ಇನ್ಮುಂದಾದರೂ ಅಭಿವೃದ್ಧಿ ಕಾರ್ಯಗಳಿಗಾಗಿ ಭೂಮಿಪೂಜೆ ಹಮ್ಮಿಕೊಂಡು ಎಲ್ಲ ಮತಕ್ಷೇತ್ರಗಳಿಗೂ ಅನುದಾನವನ್ನು ಬಿಡುಗಡೆ ಮಾಡಿ, ಸುಧಾರಿಸಿಕೊಳ್ಳಿರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

ಮುಂದಿನ‌ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಗದೊಮ್ಮೆ ಪ್ರಧಾನಿ: ನಳಿನ್‌ ಕಟೀಲ್

ಗ್ಯಾರಂಟಿ, ಭಾಗ್ಯ ಯೋಜನೆಗಳು ಎಂಬ ದುರಹಂಕಾರದ ಮಾತುಗಳನ್ನು ಬಿಡಬೇಕು. ಗ್ಯಾರಂಟಿ ಯೋಜನೆಗೆ ಸ್ವಾಗತವಿದೆ. ಆದರೆ ರಾಜ್ಯದ ಅಭಿವೃದ್ಧಿ ಕೆಲಸಗಳು ಕೂಡಾ ಆಗಬೇಕಲ್ಲವೇ. ಬೆಂಗಳೂರ ನಗರವನ್ನು ಬ್ರ್ಯಾಂಡ್‌ ಬೆಂಗಳೂರು ಮಾಡುತ್ತೇವೆಂದವರು ಬಾಂಬ್ ಬೆಂಗಳೂರು ಮಾಡಿದ್ದಾರೆ. ಮತದ ಆಸೆಗಾಗಿ ಒಂದೇ ಕೋಮಿನ ಜನರ ಓಲೈಕೆ ಮಾಡುವುದನ್ನು ಬಿಟ್ಟು ಎಲ್ಲ ಸಮುದಾಯದವರನ್ನು ಗಣನೆಗೆ ತೆಗೆದುಕೊಳ್ಳಬೇಕು. 2018ರ ಸಿದ್ದರಾಮಯ್ಯ ಈಗಿಲ್ಲ, ತುಂಬಾ ಬದಲಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕರು, ಸಚಿವರೇ ಹೇಳುತ್ತಿದ್ದಾರೆಂದು ಹೇಳಿದರು.

ನಾನೂ ಒಬ್ಬ ಅಸ್ಪೃಶ್ಯ, ಮುಸ್ಲಿಂ ಎನ್ನುವ ಪ್ರಜ್ಞೆ, ಪರಿಹಾರ ಸಲೀಸು: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಅಜ್ಜಪ್ಪ ಹುಡೇದ, ಚಂಬಣ್ಣ ವಾಳದ, ಗುರಪ್ಪ ಅದೆಪ್ಪನವರ, ಶಂಕರ ಪಲ್ಟಣಕರ, ಮಲ್ಲಪ್ಪ ಮೇಟಿ, ಎಸ್ .ಆರ್ .ಪಾಟೀಲ, ಪ್ರಕಾಶ ಪಟ್ಟಣಶೆಟ್ಟಿ, ಉಮೇಶಗೌಡ ಪಾಟೀಲ, ಪವಾಡಪ್ಪ ವಡ್ಡಗೇರಿ, ಬಸು ಪಾಟೀಲ, ಯಲಿಗಾರ, ಚಂದ್ರಗೌಡ ಪಾಟೀಲ, ಪ್ರಶಾಂತ ಜೋಶಿ, ಸುನೀಲ ಕುಷ್ಟಗಿ, ಮಹೇಶ ಹಟ್ಟಿ, ದೇವಣ್ಣ ಕಲಾಲ, ಸಿದ್ದೇಶ ಹೂಗಾರ, ಮಂಜು ಮೆಣಸಗಿ, ಸಂಗನಗೌಡ ಹಾಲಗೌಡ್ರ, ಸುರೇಶ ಸವದತ್ತಿ, ಹಸನ ನವದಿ, ಸೇರಿದಂತೆ ಮುಂತಾದವರು ಇದ್ದರು.

Follow Us:
Download App:
  • android
  • ios